02 August 2010

ರಸ್ತೆ ಅಪಘಾತದಲ್ಲಿ ಮಡಿದ ಮಂಜುನಾಥನ ನೆನೆಯುತ್ತ ....

3 ದಿನದ ಕೆಳಗೆ ನಮ್ಮ ಬಹುಮಹಡಿ ಕಟ್ಟಡದ ಕ್ಯಾಂಟೀನ್ ಎದುರಿನ ರಸ್ತೆಯ ಮೇಲೆ ಅತಿ ವೇಗದಲ್ಲಿ ಬಂದ ಬೈಕ್ ಸವಾರನೊಬ್ಬ ನಮ್ಮ ಸಚಿವಾಲಯದಲ್ಲಿ OOD (ಅನ್ಯ ಕರ್ತವ್ಯದ ಮೇಲೆ) ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಎಂಬೊಬ್ಬ ನೌಕರನಿಗೆ ಢಿಕ್ಕಿ ಹೊಡೆದು ಅವಘಡವಾಗಿ ನಮ್ಮ ಸಹೋದ್ಯೋಗಿ ಮಂಜುನಾಥ್ ಸಾವನ್ನಪ್ಪಿದ್ದಾರೆ.

ಅಂದಿನ ಅಪಘಾತ ಸಂಭವಿಸಿದಾಗ ತಪ್ಪು ಯಾರ ಕಡೆ ಇತ್ತು ಎಂಬುದು ಕಂಡವರೇ ಬಲ್ಲರು. ಆದರೆ, ಆ ರಸ್ತೆಯಲ್ಲಿ ಅತಿ ವೇಗದಲ್ಲಿ ಚಲಿಸುವುದು ಮೊದಲ ತಪ್ಪು. ಅಲ್ಲಿ ಕೇವಲ ಸಚಿವಾಲಯದ ನೌಕರರು ನಡೆದಾಡುವುದಿಲ್ಲ. ಬದಲಿಗೆ ರಾಜ್ಯದ ಮೂಲೆಮೂಲೆಗಳಿಂದ ಬರುವ ಸಾರ್ವಜನಿಕರೂ ಆ ರಸ್ತೆಯ ಬಳಕೆದಾರರು. ಅಷ್ಟೇ ಸಾಲದೆಂಬಂತೆ ಪಕ್ಕದ ಮೂರು ಮತ್ತೊಂದು ಕಾಲೇಜುಗಳ ವಿಧ್ಯಾರ್ಥಿಗಳು ಕೂಡ ಆ ರಸ್ತೆಯನ್ನ ಬಳಸುತ್ತಾರೆ. ಪ್ರತಿ ದಿನ ಆ ರಸ್ತೆಯನ್ನ ಗಮನಿಸುವ  ಸಚಿವಾಲಯ (ಬ.ಮ.ಕಟ್ಟಡ)ದ ನೌಕರನಾದ ನನಗೆ ಅನ್ನಿಸುವುದೇನೆಂದರೆ 

ಇಡೀ ದಿನ ಅಲ್ಲಿ ಓಡುವ ವಾಹನಗಳಿಗಿಂತ ಆ ರಸ್ತೆಯನ್ನ ಅತ್ತಿಂದಿತ್ತ ಇತ್ತಿಂದತ್ತ ದಾಟುವ ಪಾದಚಾರಿಗಳ ಸಂಖ್ಯೆಯೇ ಅಧಿಕ.

ಹೀಗಿರುವಾಗ ಆ ರಸ್ತೆಯ ಮೇಲೆ ಪ್ರಥಮ ಅಧಿಕಾರವಿರುವುದು ನಾವು ಸಚಿವಾಲಯದ ನೌಕರರಿಗೆ, ಕಾಲೇಜು ವಿಧ್ಯಾರ್ಥಿಗಳಿಗೆ , ದೂರದೂರಿನಿಂದ ಕಾರ್ಯನಿಮಿತ್ತ ಬರುವ ಜನರಿಗೆ. 

ನಿನ್ನೆಯ ದಿವಸದ (ಆಗಸ್ಟ್ 2) ರಸ್ತೆ ತಡೆ ಪ್ರತಿಭಟನೆಯಲ್ಲಿ ಕೊನೆವರೆಗೆ ಪಾಲ್ಗೊಂಡವರಿಗೆಲ್ಲ ಗೊತ್ತು, ನಮ್ಮ ಕಾರ್ಯದರ್ಶಿಗಳು ಹೇಳಿದ್ದೇನೆಂದು. ಅವರ ಹೇಳಿಕೆಯಂತೆ ನಾಳೆ ಅಂದ್ರೆ,

  • " ಆಗಸ್ಟ್ 3 ಕಳೆಯುವುದರೊಳಗೆ ಅಲ್ಲಿ ವೇಗ ನಿಯಂತ್ರಕ ರಸ್ತೆ ಉಬ್ಬುಗಳು 'ನಿರ್ಮಾಣ'  ಆಗ್ತಾವಂತೆ. 

  • ಜೊತೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಸದರಿ ರಸ್ತೆಗೆ ಸಂಬಂಧಿಸಿದ ಮೊಕದ್ದಮೆಗೆ ಸಂಬಂಧಿಸಿದಂತೆ ಸರ್ಕಾರೀ ವಕೀಲರ ಜೊತೆ ಸಮಾಲೋಚಿಸಿ ಆ ರಸ್ತೆಯನ್ನ 'ನಮ್ಮ' ದಾಗಿಸುವಂತೆ ಮಾಡ್ತಾರಂತೆ. "

ಅಲ್ಲಿ ಆ ವಕೀಲರು ವಾದ ಮಾಡುವಾಗ ಮೇಲ್ಕಂಡ ಪಾದಚಾರಿಗಳ ಹಕ್ಕಿನ ಬಗ್ಗೆ ಗಮನ ಹರಿಸಲಿ ಅಂತ ನನ್ನ ಆಶಯ.

ವಿಪರ್ಯಾಸ ನೋಡಿ :

ತಮ್ಮ ಕರ್ತವ್ಯವಾದ ರಸ್ತೆಗಳ ನಿಯಮಬದ್ಧ ನಿರ್ವಹಣೆಯನ್ನ ಇಷ್ಟು ದಿನ ಕೈಗೊಳ್ಳದೆ ಈಗ ರಾತೋರಾತ್ರಿ ಗಮನ ಹರಿಸಿ ಕೆಲಸ ಮಾಡಬೇಕೆಂದರೆ : 

ಅವರ ಕರ್ತವ್ಯವನ್ನ ಜ್ಞಾಪಿಸಲಿಕ್ಕೆ ಮಂಜುನಾಥನೊಬ್ಬ ಸ್ವರ್ಗದ ಬಾಗಿಲು ತಟ್ಟಬೇಕೇ ? 

ಬಾಹ್ಯ ಒತ್ತಡವಿಲ್ಲದೆ - ತಮ್ಮ ಇಲಾಖೆಗೆ ಒಪ್ಪಿಸಿರುವ ಕಾರ್ಯ ನಿರ್ವಹಿಸಲು ಒಬ್ಬ ಅಮಾಯಕನ ಜೀವದ ಬೆಲೆಯಷ್ಟು ಲಂಚ ಕೊಡಬೇಕಾ ? [ ನಮ್ಮ ಸಚಿವಾಲಯದಲ್ಲಿ ಪ್ರತಿ ದಿನ ನಡೆಯುವ "ಡೀಲ್" ಗಳಲ್ಲಿ ಇದೇ Costliest ಅನ್ಸುತ್ತೆ. ಆದರೆ ತಾನು ತನಗಾಗೇ ಕೆಲಸ ಮಾಡಿಕೊಡಲು ಪಡೆದ ಲಂಚ ಅದು ಅಂತ ಸಂಬಂಧಿಸಿದವರಿಗೆ ಮನವರಿಕೆಯಾಗಿದೆಯಾ ?!! ]
ತಪ್ಪಲ್ವಾ ಇದು ? 

ನಾವೇ , ನಮಗಾಗಿ ರೂಪಿಸಿಕೊಂಡಿರುವ ಈ ವ್ಯಸ್ಥೆಯಲ್ಲಿ ನಮಗೆ / ನಮ್ಮವರಿಗೇ ತೊಂದರೆಯಾಗುವವರೆಗೆ ಆ ತೊಂದರೆ ತೊಂದರೆಯೇ ಅಲ್ಲವೇ ? 

ಎಂಥ ಸ್ವಾರ್ಥ ಅಲ್ವಾ ?

ಈ ಸ್ವಾರ್ಥವೇ ಇಂದು ಭಾರತದಲ್ಲಿ ಸಮಸ್ಯೆಗಳನ್ನ ಸೃಷ್ಟಿಸಿ , ಇಡೀ ದೇಶವನ್ನ ಕಿತ್ತು ತಿನ್ನುತ್ತಿದೆ. ಇಲ್ಲಿನ ಪ್ರತಿಯೊಂದು ಲೋಪಗಳಿಗೆ ಈ ಸ್ವಾರ್ಥ ಕಾರಣವೇ ಹೊರತು ಬಾಕಿ ಎಂಥದೂ ಇಲ್ಲ. 

ಹಾಗಾದ್ರೆ ಈ ಸ್ವಾರ್ಥವಾದರೂ ಎಲ್ಲಿ ಹುಟ್ಟುತ್ತೆ ? ಅದನ್ನಾದ್ರೂ ಹುಡುಕಿ ಹೊಸಕಿ ಹಾಕೋಣವೇ ?

ಹೇಳಿ ನಿಮಗೆ ಏನನ್ಸುತ್ತೆ? ಎಲ್ಲಿ ಹುಟ್ಟುತ್ತೆ ಈ ಸ್ವಾರ್ಥ ?!!

ನಿಮ್ಮ ಉತ್ತರ / ಪ್ರತಿಕ್ರಿಯೆ / ಮಿಡಿತ ಗಳಿಗಾಗಿ ಕಾಯ್ತಿರ್ತೀನಿ....

- ರೇವಪ್ಪ



2 comments:

madhu.br said...

ಬ.ಮ.ಕಟ್ಟಡದ ಆ ರಸ್ತೆಯಲ್ಲಿ ತಿರುಗಾಡುವುದು,ದಾಟುವುದು ತುಂಬಾ ಕಷ್ಟ.ಅಲ್ಲಿ ವಾಹನ ಚಲಾಯಿಸುವವರು ಹೈವೇಯಲ್ಲಿ ಹೋಗುವ ಹಾಗೆ ಹೋಗುತ್ತಾರೆ.ಅಂತಹ ಒಂದು ರಸ್ತಯ ಅನಾಹುತಕ್ಕೆ ಗೆಳೆಯ ಮಂಜುನಾಥ ಬಲಿಯಾದದ್ದು ಒಂದು ನೋವಿನ ಸಂಗತಿ..ಇನ್ನಾದರೂ ಅಧಿಕಾರಿಗಳು ಎಚ್ಚತ್ತುಕೊಳ್ಳಲಿ,ಅಲ್ಲಿನ ರಸ್ತೆಯಲ್ಲಿ ರಸ್ತೆ ಉಬ್ಬುಗಳ ಜೊತೆಗೆ ಸಿಬ್ಬಂದಿ ನೇಮಕ ಮಾಡಿ ಮುಂದೆ ಇಂತಹ ಅವಘಡಗಳು ನಡೆಯದಂತೆ ಕ್ರಮ ಕೈಗೊಳ್ಳಲಿ ತನ್ಮೂಲಕ ಅಗಲಿದ ಗೆಳೆಯನ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಲಿ..

spandana said...

ರಸ್ತೆ ಅಪಘಾತದಲ್ಲಿ ಮಡಿದ ಮಂಜುನಾಥ್ ರವರ ವಿಷಯ ತಿಳಿದು ಬಹಳ ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. Better late than never ಅನ್ನೋ ರೀತಿ ಈಗಲಾದರೂ ಬಹುಮಹಡಿ ಕಟ್ಟಡದ ಮುಂದಿನ ರಸ್ತೆಗೆ hump ಅಳವಡಿಸುವ ಕೆಲಸ ತೀವ್ರಗತಿಯಲ್ಲಿ ಮುಗಿಯಲಿ ಅನ್ನೋದು ನನ್ನ ಆಶಯ. ಆದರೆ, ಇದಕ್ಕಾಗಿ ಒಂದು ಜೀವ ಬಲಿಯಾದದ್ದು ಮಾತ್ರ ನಿಜಕ್ಕೂ ದುರಂತ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago