ಮಾನ್ಯ ಸದಸ್ಯರೆ,
ದಿನಾಂಕ: 7.8.2010ರ ಸಭೆ ಪ್ರಾರಂಭವಾಗುತ್ತಿದ್ದಂತೆ ಸಭೆಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಗುಣಪಾಲ್ ಜೈನ್ ರವರು 'ಕಾವ್ಯ ವಿಶೇಷ'ದ ಅಧ್ಯಯನ ಸಭೆ ಕುರಿತು 'ಕಾವ್ಯೇಷು ರಮ್ಯಂ ನಾಟಕಂ' ಎನ್ನುವ ಕಾಳಿದಾಸ ವಾಣಿಯನ್ನು ನೆನಪಿಸುತ್ತಾ ಅಧ್ಯಯನ ತಂಡಕ್ಕೆ ಶುಭ ಹಾರೈಸಿದರು.
ತದನಂತರ ಕಳೆದ ವಾರ ತಮ್ಮ ವಿಷಯ ಮಂಡನೆಯನ್ನು ಕಾಯ್ದಿರಿಸಿದ್ದ ತಂಡದ ಸದಸ್ಯರಾದ ಶ್ರೀ ಶಾಂತಾರಾಮ್ ರವರು 'ಜಾನುವಾರು ಪ್ರತಿಬಂಧಕ ಕಾಯ್ದೆ'ಯ ಬಗ್ಗೆ ಸಂವಿಧಾನಾತ್ಮಕವಾದ ರೀತಿ ನೀತಿಗಳನ್ನು ಮಂಡಿಸಿದರು. ಧಾರ್ಮಿಕ ಮತ್ತು ವೈಚಾರಿಕ ನೆಲೆಗಟ್ಟುಗಳನ್ನು ಹೊರತಾಗಿಸಿ 'ಜಾತ್ಯಾತೀತ' ಅರ್ಥ ವಿಶೇಷಣಗಳನ್ನು ಪ್ರಸ್ತಾಪಿಸಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯಾತ್ಮಕವಾಗಿ ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಆರಾಧನೆಯ ಅಂಶಗಳ ಅರ್ಥಗಳನ್ನು ಸ್ಪಷ್ಟಪಡಸಿದರು.
ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುತ್ತಾ 25ನೇ ವಿಧಿ, 48ನೇ ವಿಧಿ- ಕೃಷಿ ಮತ್ತು ಪಶುಸಂಗೋಪನೆ ಮಹತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ 11ನೇ, 16ನೇ ಅಂಶ 1ನೇ ಮತ್ತು 4ನೇ ಅಂಶದ ಬಡತನ ನಿರ್ಮೂಲನೆ, ಉದ್ಯೋಗ ಖಾತ್ರಿ, ಸಮುದಾಯ ಸಂಪತ್ತುಗಳ ನಿರ್ಮಾಣ, ಕೃಷಿ ಅಭಿವೃದ್ಧಿ, ಪಶುಸಂಗೋಪನೆ ಮತ್ತು 200ನೇ ವಿಧಿಯನ್ವಯ ರಾಜ್ಯಪಾಲರಿಗಿರು ಅಧಿಕಾರದ ಬಗ್ಗೆ ಕೂಲಂಕುಷವಾಗಿ ಮಂಡಿಸಿದರು.
ಮನನ ತಂಡದ ಪರವಾಗಿ ಶಾಂತರಾಮ್ ರವರಿಗೆ ಕೃತಜ್ಞತೆಗಳು.
ಕಾಲಾವಕಾಶ ಮೀರಿದ್ದರಿಂದ ಈ ವಾರದ 'ಕಾವ್ಯ ವಿಶೇಷ'ವನ್ನು ಮುಂದಿನ ಸಭೆಗೆ ಅಂದರೆ ದಿನಾಂಕ: 21.8.2010ರ ಶನಿವಾರಕ್ಕೆ ಮುಂದೂಡಲಾಯಿತು.
ಭಾಗವಹಿಸಿದ ಎಲ್ಲರಿಗೂ ವಂದಿಸಿ, ಅಂಬಣ್ಣರವರು ಹಾಡಿದ ಕುವೆಂಪುರವರ ಭಾವಗೀತೆಯೊಂದಿಗೆ ಸಭೆಯನ್ನು ಅಂತ್ಯಗೊಳಿಸಲಾಯಿತು.
-ಮನನ ಪರವಾಗಿ
No comments:
Post a Comment