18 July 2010

ದಿನಾಂಕ: 17.7.2010ರಂದು ನಡೆದ ಮನನ ತಂಡದ ಸಭೆಯ ನಡವಳಿಗಳು.

ದಿನಾಂಕ: 17.7.2010ರಂದು ನಡೆದ ಮನನ ತಂಡದ ಸಭೆಯ ನಡವಳಿಗಳು.
 
ಮೊದಲಿಗೆ ಇಡೀ ಅಧ್ಯಯನ ಸಭೆ ಅತ್ಯಂತ ಮಾಹಿತಿಯುಕ್ತವಾಗಿಯೂ ಮತ್ತು ಅರ್ಥಪೂರ್ಣವಾಗಿದ್ದಕ್ಕೆ ಎಲ್ಲರಿಗೂ ಮನನ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ.
 
ನಿಕಟಪೂರ್ವ ಸಭೆಯಲ್ಲಿ ನಾವು ಚರ್ಚಿಸಿದಂತೆ ನಾಲ್ಕು ತಂಡಗಳ ಗುಂಪು ಮಾಡಿ ಅದರಲ್ಲಿ ಎರಡು ತಂಡಗಳು ವಿಷಯವನ್ನು ಮಂಡಿಸುವುದು ಮತ್ತೆರೆಡು ತಂಡಗಳು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುವುದಾಗಿ ನಿರ್ಣಯಿಸಿದಂತೆ ಇಂದಿನ ಸಭೆಯಲ್ಲಿ ಜಯಸುಧಾರವರ ನೇತೃತ್ವದ ತಂಡ 'ಸೇವಾ ವಿಷಯ'ದಲ್ಲಿ 'ರಜೆ ಸೌಲಭ್ಯ'ದ ಬಗ್ಗೆ ನಮಗೆ ತಿಳಿಸಿದರು. ತಂಡದ ಸದಸ್ಯರಾದ ಗುರುಪ್ರಕಾಶ್ ವಿಷಯವನ್ನು ಅತ್ಯಂತ ಪ್ರಬುದ್ಧವಾಗಿ ಮಾಹಿತಿಯುಕ್ತವಾಗಿ ಮತ್ತು ಲವಲವಿಕೆಯಿಂದ ಮಂಡಿಸಿದ್ದು / ತಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರಂತೆ ಜ್ಯೋತಿಶ್ರೀರವರು ಮತ್ತು ಜಯಸುಧಾರವರು ಸಹ ಪೂರಕ ಮಾಹಿತಿಗಳನ್ನು ಒದಗಿಸಿದ್ದು ಒಟ್ಟಾರೆಯಾಗಿ ಇಡೀ ತಂಡ ಹಿಂದಿನ ಸಭೆಯ ನಿರ್ಣಯಗಳನ್ನು ಚಾಚೂತಪ್ಪದೆ ಪಾಲಿಸಿ ಪೂರ್ಣ ಹಾಜರಾತಿ ನೀಡಿ, ಟಿಪ್ಪಣಿಯನ್ನು ಎಲ್ಲರಿಗೂ ನೀಡಿ ಜವಾಬ್ದಾರಿಯುತವಾಗಿ ಮಿಕ್ಕ ತಂಡಗಳಿಗೂ ಮಾದರಿ ಎನ್ನುವಂತೆ ವಿಷಯವನ್ನು ಮಂಡಿಸಿದರು. ಜೊತೆಗೆ ತಂಡದ ಸದಸ್ಯರಾದ ಮಹೇಂದ್ರ, ದತ್ತರಾಜ್ , ರಾಮಗಣಪತಿ ಭಟ್ ಹಾಗೂ ಹರೀಶ್ ಬಿ.ಕೆ. ಇವರುಗಳು ಸಹಕರಿಸಿದ್ದು ಅವರ ತಂಡದ 'ಸ್ಪಂದನ' ನಾಮಧೇಯಕ್ಕೆ ಪೂರಕವಾಗಿದ್ದು. ಸ್ಪಂದನ ತಂಡಕ್ಕೆ ಮನನ ಆಭಾರಿಯಾಗಿರುತ್ತದೆ.
 
ಈ ಮಧ್ಯೆ ಶಾಂತರಾಮ್ ರವರು ಕಾರ್ಮಿಕ ಹಕ್ಕುಗಳ ಬಗ್ಗೆ ಮಾಹಿತಿ ಒದಗಿಸಿದ್ದು ಸೂಕ್ತವಾಗಿತ್ತು.
 
2ನೇ ವಿಷಯವನ್ನು ಆರ್.ಕೆ. ರಮೇಶ್ ನೇತೃತ್ವದ ಪರಶುರಾಮ.ಕೆ., ಗೌರಿ, ಹುಲಿಯಪ್ಪ, ಕಾ.ವೆಂ.ಶ್ರೀನಿವಾಸಾಚಾರಿ ಹಾಗೂ ಪಿ.ಸೀನು ಇವರನ್ನೊಳಗೊಂಡ ತಂಡದವರು 'ಗೋ ಹತ್ಯೆ ನಿಷೇಧ' ಕಾಯ್ದೆಯನ್ನು ಮಂಡಿಸಿದರು. ಇದಕ್ಕೆ ಪೂರಕವಾಗಿಗೆ ಮಂಜುನಾಥ್ ರವರು ಲೇ.ಎನ್ . ಕೆ. ಹನುಮಂತಯ್ಯರವರ 'ಗೋವುತಿಂದು ಗೋವಿನಂತಾಗುವೆ' ಕವನವನ್ನು ಓದಿದರು. 'ಗೋ ಹತ್ಯೆ ನಿಷೇಧ' ಕಾಯ್ದೆಯನ್ನು ರಮೇಶ್ ಮತ್ತು ಪರಶುರಾಮ್ ಈ ವಿಷಯವನ್ನು ಮಂಡಿಸಿ ಹೆಚ್ಚು ಚರ್ಚೆಗೆ ಅವಕಾಶವಾಗುವ ಹಲವಾರು ಅಂಶಗಳನ್ನು ನೀಡಿದರು. ರಮೇಶ್ ರವರು ಎಡ / ಬಲ ಪಂಥೀಯವಾಗಿ ಚರಿತ್ರಾತ್ಮಕವಾಗಿ ಹಾಗೂ ಇಂದಿನ ರಾಜಕೀಯವಾಗಿ ವಿಷಯದ ಗಂಭೀರತೆಯನ್ನು ತಿಳಿಸಿದರು. ಪರಶುರಾಮ್ ರವರು ಕಾಯ್ದೆಯನ್ನು ವಿವರಿಸಿದರು.
 
ಈ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚಿಸುವ ಅವಶ್ಯಕತೆಯಿರುವುದರಿಂದ ಮುಂದಿನ ಸಭೆಯಲ್ಲಿಯೂ ಇದೇ ವಿಷಯದ ಬಗ್ಗೆ ಪ್ರತಿಯೊಬ್ಬರೂ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಒಮ್ಮತದ ನಿರ್ಣಯದೊಂದಿಗೆ ಸಭೆಯನ್ನು ದಿನಾಂಕ: 24.7.2010ಕ್ಕೆ ಮುಂದೂಡಲಾಯಿತು.
 
ಅಂದಿನ ಸಭೆಗೆ ಬರುವ ತಂಡಗಳು ತಮ್ಮ ತಂಡಕ್ಕೊಂದು ಹೆಸರು ನೀಡುವಂತೆಯೂ ಹಾಗೂ ಗೈರು ಹಾಜರಾಗಿರುವ ಸದಸ್ಯರನ್ನು ಕರೆತರುವ ಹೊಣೆಗಾರಿಕೆಯನ್ನು ತಂಡದ ಮಾನಿಟರ್ ಗಳಿಗೆ ವಹಿಸಿ ಸಭೆಯನ್ನು ಮುಕ್ತಾಯ ಮಾಡಲಾಯಿತು.
 
ಕೊನೆಗೆ ಮಂಜುನಾಥ್ ರವರು ಗೊಲ್ಲಹಳ್ಳಿ ಶಿವಪ್ರಸಾದ್ ರವರ 'ಸಾಲು ಮರದ ತಿಮ್ಮಕ್ಕ' ಪದ್ಯವನ್ನು ಹಾಡಿದರು.

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago