06 April 2010

ಸಮಾಜ ಮುಖಿ ಜೀವನ

ಅಂದ ಹಾಗೆ ಮೊನ್ನೆ ದಿವಸ ಸಭೆಯಲ್ಲಿ ಒಂದು ವಿಷಯ ಬಂದಿತ್ತು. ಸಮಾಜಕ್ಕೆ ಸಹಾಯ ಆಗೋವಂಥದ್ದನ್ನ ನಾವೇನಾದ್ರೂ ಮಾಡಿದರೆ ಚನ್ನಾಗಿರುತ್ತೆ ಅಂತ. ಅದಕ್ಕೆ ಎಲ್ಲರೂ ಮನಸ್ಸಿನಲ್ಲಿ ಪರವಾಗಿದ್ದರೂ ತೋರಿಕೆಗೆ ಹಾಗೇ ಸುಮ್ಮನೆ ಅನ್ನೋ ಹಾಗೆ ವಿರೋಧದ ಗುಸು ಗುಸು ಮೂಡಿ, ಕೊನೆಗೆ ಆ ವಿಷಯವೇ ಆವಿಯಾಗಿ ಹೋಯ್ತು. 

" ಸ್ವಲ್ಪ ಮಾತಡಿದ್ವಲ್ಲಾ ... ಮಾಸ್ತಿ ಅವರ ಟ್ರಸ್ಟ್ ಬಗ್ಗೆ ಮಾತಾಯ್ತು...ಇನ್ನೂ ಮೇಡಮ್ ಒಬ್ರು ಏನೋ ಹೇಳಿದ್ರಲ್ಲಾ ... ನೀನ್ಯಾವ ಲೋಕದಲ್ಲಿದ್ಯೋ ? !! " ಅಂತ ಅನ್ಬೇಡಿ. 

ನೀವು ಹೇಳೊದು ನಿಜ ಆದ್ರೂ, ಆ ವಿಷಯದ ಬಗ್ಗೆ ಒಮ್ಮತದ ಕೆಲವು ನಿರ್ಧಾರಗಳು ಮೂಡುವ ಮಟ್ಟಿನ ಚರ್ಚೆ ಆಗಲಿಲ್ಲ ಅನ್ನೋದು ನನ್ನ Point ಅಷ್ಟೆ. ಹಾಗೆ ಚರ್ಚೆ ಆಗಲು ಅದು ಆವತ್ತಿನ ಚರ್ಚೆಯ ವಿಷಯವೇ ಆಗಿರಲಿಲ್ಲ ಬಿಡಿ. 

ಈಗ ಈ ಪೀಠಿಕೆ ಏನಕ್ಕೆ ಅಂದ್ರೆ : ನಾನು ಹಿಂದೊಮ್ಮೆ ಇದೇ ಬ್ಲಾಗ್ ಅಲ್ಲಿ ಒಂದು ಚಿತ್ರ ಅಂದ್ರೆ Collage ಮಾಡಿ ಹಾಕಿದ್ದೆ. ಅದು ಹೀಗಿದೆ :



ಈ ಚಿತ್ರವನ್ನ SAVE ಮಾಡಿ , ಸ್ವಲ್ಪ ZOOM ಮಾಡಿ ಅಲ್ಲಿ ಬರೆದಿರೋದನ್ನ ಓದಿ ನೋಡಿ. ಇಲ್ಲಿರೋದು ಅವತ್ತಿನ ಕಿರು ಚರ್ಚೆಗೆ ಪೂರಕವಾದ ಒಂದು ಸಲಹೆ. ನನ್ನ ಅಭಿಮತ ಸರಿ ಅನ್ನಿಸಿದರೆ ಅಥವಾ ಅದಕ್ಕೆ ನಿಮ್ಮ ವಿರುದ್ಧ ಅಭಿಪ್ರಾಯವಿದ್ದರೆ ... ಬೇರೇನೇ ಇದ್ದರೂ ನಿಮ್ಮದೊಂದು Comment ಇದಕ್ಕಿರಲಿ ಅಂತ ನನ್ನ ಆಸೆ. 

ಈ ಚಿತ್ರದಲ್ಲಿ ಇರೋದು / ಬರೆದಿರೋದು ಒಬ್ಬ ಸಹೃದಯಿ ಸಮಾಜಜೀವಿ ತಾನು ಹುಟ್ಟಿ, ಬೆಳೆಯುತ್ತಿರುವ ಸಮಾಜಕ್ಕೆ ಕೃತಜ್ಞನಾಗಿ ಬದುಕಲು ಇರುವ ಹಲವು ದಾರಿಗಳಲ್ಲಿ ಒಂದು ಅನ್ನೋದು ನನ್ನ ಅಂಬೋಣ.  

ಹಾಗೇ ನಿಮಗೂ ಇಂಥದೇ / ಇದಕ್ಕೆ ಹೋಲುವ ಯಾವುದೇ IDEA / ಅಭಿಪ್ರಾಯಗಳಿದ್ದಲ್ಲಿ ಬರೆದು ಕಳುಹಿಸಿ . ಅದನ್ನ ಇಲ್ಲಿ ಪ್ರಕಟಿಸಿ, ಎಲ್ಲರೂ ಅದನ್ನ ಓದಿ, ಗ್ರಹಿಸಿ, ವಿಚಾರ ಮಾಡುವಂತಾಗಲಿ.


ನಿಮ್ಮ ಅನಿಸಿಕೆ / ಅಭಿಪ್ರಾಯಗಳ ನಿರೀಕ್ಷೆಯಲ್ಲಿ,
ರೇವಪ್ಪ

2 comments:

MANJUDADA said...

ನಿಜವಾಗಿ ರೇವ್ ಸಮಾಜಕ್ಕೆ ಸಹಾಯ ಮಾಡುವಂತ ಕೆಲಸ ಮಾಡೋದು ಅಷ್ಟು ಸುಲಭದ ಕೆಲಸವಲ್ಲ.ಅದನ್ನ ಮಾಡೋದಕ್ಕೆ ಒಂದು ಉತ್ತಮ ತಂಡದ ಅವಶ್ಯಕತೆ ಇದೆ ಮತ್ತು ತಂಡದಲ್ಲಿ ಒಂದು ಸಮನ್ವಯತೆಯ ಅವಶ್ಯಕತೆಯಿದೆ.ಮೊದಲು ನಾವು ಒಂದು ಉತ್ತಮ ಸಮಾನ ಮನಸ್ಕರ ತಂಡ ಕಟ್ಟಬೇಕು ಬಾಸ್.ಅದರ ಕಡೆ ನಾವು ಮೊದಲು ಗಮನ ಹರಿಸಬೇಕು.ಏನಂತೀಯಾ.

ಪರಶು.., said...

ಹಾಯ್ ಮಂಜು

ಇದಕ್ಕೋಸ್ಕರ ಹೊಸ ತಂಡ ಕಟ್ಟೋ ಅವಶ್ಯಕತೆ ಇಲ್ಲ ಈಗ ಇರೋ ನಮ್ಮ 'ಸ್ಟಡಿ ಸರ್ಕಲ್' ಮೂಲಕನೇ ಸಮಾಜ ಮುಖಿ ಕೆಲಸ ಮಾಡಬಹುದು ಅಲ್ವಾ ದಾದಾ...?

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    3 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
    3 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    5 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    7 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    7 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    7 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    8 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    8 years ago