29 April 2010

Be Aware...


ಕೆಲವು ದಿನಗಳ ಹಿಂದೆ ನನಗೊಂದು e-mail ಸಂದೇಶ ಬಂದಿತ್ತು.  ಅದು ಈ ಕೆಳಕಂಡಂತಿತ್ತು.

"ಸಿನಿಮಾ ನೋಡಲೆಂದು ಯುವತಿಯೋರ್ವಳು ಥಿಯೇಟರಿಗೆ ಬಂದು ಕುರ್ಚಿಯಲ್ಲಿ ಕುಳಿತಳು.  ಸ್ವಲ್ಪ ಹೊತ್ತಿಗೆ ಅವಳಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಯಿತು.  ಅವಳು ಕುರ್ಚಿಯ ಕೆಳಗೆ ಬಗ್ಗಿ ನೋಡಿದಾಗ ಸೂಜಿಗೆ ಅಂಟುಕೊಂಡಂತೆ ಒಂದು ಸಂದೇಶ ಇತ್ತು.  ಅದರಲ್ಲಿ "you have just been infected with HIV +ve " ಎಂದು  ಬರೆದಿತ್ತು. "


ಈ ರೀತಿಯ ಹಲವಾರು ಸನ್ನಿವೇಶಗಳನ್ನು "Disease control centre" ಪ್ಯಾರೀಸ್ ಸಂಸ್ಥೆಯು ವರದಿ ಮಾಡುತ್ತಾ, ಇಂತಹ ಸಂದರ್ಭಗಳಲ್ಲಿ ಬಳಸಲಾದ ಎಲ್ಲಾ ಸೂಜಿಗಳನ್ನು ಪರೀಕ್ಷಿಸಿದಾಗ ಎಲ್ಲವೂ HIV +ve ಸೂಜಿಗಳಾಗಿದ್ದವು.  

ಇದೇ ರೀತಿಯ ಸನ್ನಿವೇಶವನ್ನು ದೆಹಲಿಯ ಡಾಕ್ಟರೊಬ್ಬರು ವಿವರಿಸುತ್ತಾ, ಕೆಲವೇ ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ತರುಣಿಯೊಬ್ಬಳು ಇದೇ ರೀತಿ ಹೆಚ್.ಐ.ವಿ. ಸೂಜಿಗೆ ಒಳಗಾದಾಗ ಆ ವೈದ್ಯರು ಅವರ ಕುಟುಂಬದವರಿಗೆ ಹಾಗೂ ಆ ತರುಣಿಗೆ ಹೆಚ್.ಐ.ವಿ. ರೋಗಾಣುಗಳು ಹರಡಲು 6 ತಿಂಗಳು ಬೇಕೆಂದೂ ಸರಿಯಾದ ಔಷಧೋಪಚಾರ ತೆಗೆದುಕೊಂಡಲ್ಲಿ ರೋಗಿಯು ಹೆಚ್ಚುವರ್ಷ ಬದುಕಬಹುದೆಂದು ಮನದಟ್ಟು ಮಾಡಿದರು.  ಆದರೆ ತರುಣಿ ಅದಾದ 4 ತಿಂಗಳಲ್ಲೇ ಮರಣ ಹೊಂದಿದಳು,  ಆದರೆ ಹೆಚ್.ಐ.ವಿ. ಯಿಂದಲ್ಲ, ಬದಲಾಗಿ "Shock thought" ನಿಂದಾಗಿ.

ಅಲ್ಲದೇ ಇಂತಹ ಸನ್ನಿವೇಶಗಳು Cash Dispensers at Public Banking Machines ( i.e. ATMs )  ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ.  

ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. rest God help! ದಯವಿಟ್ಟು ಇದನ್ನು ಇತರರಿಗೆ ತಿಳಿಸುವುದಕ್ಕೆ ಕೆಲವೇ ಸೆಕೆಂಡುಗಳ ಕಾಲಗಳನ್ನು  ಮೀಸಲಿರಿಸಿ, ಅರಿವನ್ನು ಮೂಡಿಸಿ.  

- ಎಂ.ಬಿ.ಲಾವಣ್ಯ

2 comments:

spandana said...

ಖಂಡಿತ. ಇಂತಹ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡುವುದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯ. ನಾವು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದು ಸರಿ. ಆದರೆ ನಮ್ಮದಲ್ಲದ ತಪ್ಪಿಗೆ ಬೇರೆಯವರ ಕುಚೋದ್ಯದಿಂದಾಗೋ ಅಥವಾ ಬೇರೆ ಇನ್ನಾವುದೋ ಕಾರಣಕ್ಕಾಗಿ ಶಿಕ್ಷೆ ಅನುಭವಿಸುವುದು ನಿಜಕ್ಕೂ ದುರಂತವೇ ಸರಿ. ಎಷ್ಟೋ ಸಂದರ್ಭಗಳಲ್ಲಿ ಇಂತಹ ಮಾರಕ ರೋಗಗಳಿಗೆ ತುತ್ತಾದಾಗ ರೋಗಿಯ ಮನೋಸ್ಥೆರ್ಯ ಕುಗ್ಗುವುದರಿಂದಲೇ ಎಷ್ಟೋ ಜನ ಅವಧಿಗೂ ಮೊದಲೇ ಸಾಯುತ್ತಿರುವುದು ಕಂಡುಬರುತ್ತಿದೆ. ಇದು ಎಷ್ಟೋ ವೈದ್ಯರ ಅಭಿಪ್ರಾಯವೂ ಹೌದು. ಒಬ್ಬ ರೋಗಿಯ ಮನೋಸ್ಥೆರ್ಯ ಹೇಗೆ ಅವನ ಜೀವಿತಾವಧಿಯನ್ನು ಹೆಚ್ಚಿಸಬಲ್ಲದು ಎಂಬುದಕ್ಕೆ ಇದೇ ಏಡ್ಸ್ ಎಂಬ ಮಹಾಮಾರಿಗೆ ತುತ್ತಾಗಿ ಕೆಲವು ವರ್ಷಗಳ ಹಿಂದೆಯಷ್ಟೇ ನಿಧನರಾದ ಶ್ರೀಮತಿ ವೀಣಾಧರಿ. ಈಕೆಯ ಮನೋಸ್ಠೆರ್ಯ ಹಾಗೂ ಕ್ರಿಯಾಶೀಲತೆ ಇವಳಂತೆ ಇಂತಹ ಮಹಾಮಾರಿಗೆ ತುತ್ತಾಗಿದ್ದ ಎಷ್ಟೋ ಜನರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಅವರ ಬರಡಾದ ಬಾಳಿಗೆ ಆಶಾಕಿರಣವಾಗಿತ್ತು. ಹಾಗಾಗಿ ಒಬ್ಬ ರೋಗಿಯು ಅವರ ಮನೋಸ್ಥೆರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅವನ ಮನಸ್ಸಿನ ಮನೋಭಾವ ಬಹಳ ಮುಖ್ಯ. ಕಾರಣ ರೋಗದ ಜೊತೆ ಹೋರಾಡುವವನು ಅವನೇ ಹೊರತು ಬೇರೆಯವರಲ್ಲ. ನಾವು ಅವರಿಗೆ ನೈತಿಕ ಬೆಂಬಲ ನೀಡಬಹುದಷ್ಟೆ.

ಸುಧಾ.

madhura said...

thanks for creating awareness regarding this issue.

-manju

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago