14 March 2010

ನಾಳೆಯ Surprise... ಏನ್ ಗೊತ್ತಾಯ್ತಾ ?



The Surprise Is Ready to Serve...

ನಾಳೆ ಯುಗಾದಿ... ಹೊಸ ವರುಷ...

ನೀವೂ ಕೂಡ ನಾಳೆಗಾಗಿ ಒಂದೇನೋ ಹೊಸತನ್ನ plan ಮಾಡಿರ್ತೀರಿ... ಅಂತೆಯೇ ನಾನೂ. ಅದುವೇ ನಾನು ಈ ಎರಡು ದಿನಗಳ ಕೆಳಗೆ Surprise ಅಂತ ಹೇಳಿದ್ದು... ಈಗ ಆ Surprise ತನ್ನ ಪೊರೆ ಕಳಚಿ ನಿಮ್ಮ ಮುಂದಿದೆ. ಓದಿ.

----------------------

ನಾವು ಕಚೇರಿ ಸಮಯದಲ್ಲಿ ಓದಲಿಕ್ಕೆ ಅಂತ , ಹಾಗೇ ಸುಮ್ಮನೆ , ಪರೀಕ್ಷೆಗಳಿಗೆ ಸಹಾಯ ಆಗೋ ಹಾಗೆ ಓದಲು ಪುಸ್ತಕ ತರೋದು ಸಾಮಾನ್ಯ. ಹೀಗೆ ತರೋ ಪುಸ್ತಕಗಳನ್ನ ತೆರೆಯೋದಕ್ಕೆ ಆಗುತ್ತೋ ಇಲ್ವೋ ...ಆದ್ರೆ ನಮ್ಮ ಕಂಪ್ಯೂಟರ್ ಎದುರಿಗಂತೂ ದಿನದ ಹೆಚ್ಚು ಹೊತ್ತು ಕಳೆಯುವ ಪ್ರಸಂಗ ಇದ್ದೇ ಇದೆ. ಇದನ್ನ ಗಮನದಲ್ಲಿರಿಸಿಕೊಂಡು , ನಮ್ಮ ಪರೀಕ್ಷೆಗಳ ಸಿದ್ಧತೆಗೆ ಸಹಾಯ ಮಾಡೋ ಒಂದು ಸುಂದರ ಕನ್ನಡ e-ತಾಣ ಇದ್ದರೆ ಹೇಗೆ ಅಂತ ಯೋಚಿಸಿ , ಅಂಥದೊಂದನ್ನ ತಯಾರು ಮಾಡಿದೀನಿ. ಆ ಹೊಸ ತಾಣವೇ ನಿಮಗೆ ನಾನು ಯುಗಾದಿಗೆ ನೀಡಬೇಕು ಅಂತಿರೋ Surprise.

So, ಈ ಹೊಸ ತಾಣ ನಮಗೆ ಕೆಲಸ ಒದಗಿಸಲು ಒಡ್ಡುವ ಪರೀಕ್ಷೆಗಳಿಗೆ ಸಹಾಯ ಮಾಡೋ ಹಾಗೆ Design ಮಾಡಿದೀನಿ ಅಂತ ನನ್ನ ಅಭಿಪ್ರಾಯ. ಅದನ್ನ ನೋಡಿದ ಮೇಲೆ ನಿಮಗೂ ಹಾಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ.

ಇಲ್ಲಿ ಒಟ್ಟು 4 e-ತಾಣಗಳಿವೆ. ಒಂದು Mother Site.

  1. ಸ್ಪರ್ಧಾತ್ಮಕ ಪರೀಕ್ಷೆಯ General Studies ಅನ್ನೋ Broad ವಿಷಯಕ್ಕೆ ಸಹಾಯ ಮಾಡೋವಂಥದ್ದು.
  2. ದಿನ ದಿನದ ಆಗುಹೋಗುಗಳು , ಅಂದ್ರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಎರಡನೆಯದು. ಈ ತಾಣದಲ್ಲಿ ಮುಖ್ಯಾಂಶಗಳನ್ನ ಒಂದೆಡೆ ಒಟ್ಟು ಮಾಡಿ , ಅಲ್ಲಿಂದ ಮುಂದೆ ಹೆಚ್ಚಿನ ಓದಿಗಾಗಿ ಸೂಕ್ತ ಹಾಗೂ ಉಪಯುಕ್ತ ತಾಣ ಒಂದಕ್ಕೆ Link ಮಾಡಿರ್ತೀನಿ. ಅಷ್ಟನ್ನ ಓದಿಕೊಂಡರೆ ಆ ದಿನದ ಆ ಮುಖ್ಯಾಂಶಗಳಿಗೆ ನೀವು ಉತ್ತರ ನೀಡೋ ಹಾಗೆ ತಯಾರಾಗಿರ್ತೀರಿ ಅಂತ ನನ್ನ ಅಭಿಮತ.
  3. ಇದು ನಮ್ಮ ಕನ್ನಡ ನಾಡಿನ ಬಗ್ಗೆ ವ್ಯವಸ್ಥಿತವಾಗಿ ತಿಳಿಸಿ ಕೊಡಲು ಅಂತ ಶುರು ಮಾಡಿರೋ ತಾಣ. ಆದರೆ , ಇದನ್ನ ಕನ್ನಡ ಸಾಹಿತ್ಯ Optional ವಿಷಯಕ್ಕೆ ಸಹಾಯ ಆಗೋ ಹಾಗೆ ತಯಾರು ಮಾಡೋದು ನನ್ನ ಮಹದಾಸೆ.
  4. ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳನ್ನ ಒದಗಿಸುವ ತಾಣ.
ಈ ಎಲ್ಲ ತಾಣಗಳಲ್ಲಿ ಜಾಸ್ತಿ ಕನ್ನಡ , ಸ್ವಲ್ಪ ಇಂಗ್ಲೀಷ್ ಇರೋ ಹಾಗೆ ನೋಡ್ಕೊಂಡಿದೀನಿ. ಎಲ್ಲೆಲ್ಲಿ ಅವಶ್ಯ ಅಲ್ಲಿ ಮಾತ್ರ ಇಂಗ್ಲೀಷ್ ಬಳಸೋದು ನನ್ನ Plan. ಯಾಕಂದ್ರೆ ಇದು ಕನ್ನಡಿಗರಿಗೆ , ಕನ್ನಡದಲ್ಲಿ , ಕನ್ನಡದವನಿಂದ ಅಂತ ನಾನು ಮುನ್ನುಡಿಯಲ್ಲೇ ಹೇಳ್ಕೊಂಡಿದೀನಿ ಅದ್ಕೆ.

ಇನ್ನೊಂದು ಮುಖ್ಯ ವಿಚಾರ ಏನಂದ್ರೆ : ಈ ನಾಲ್ಕೂ ತಾಣಗಳು ಇನ್ನೂ ತಯಾರಿಯ ಹಂತದಲ್ಲಿವೆ. ಅವಕ್ಕೆ ನಾನಿನ್ನೂ ಸಂಪೂರ್ಣವಾಗಿ Finish ಮಾಡಿ Final Touch ಕೊಟ್ಟಿಲ್ಲ.

ಮತ್ತೇನಕ್ಕೆ ಆತುರ ಮಾಡಿ ನಾಳೆನೇ Release ಮಾಡ್ತಿರೋದು ಅಂತ ಕೇಳ್ಬೇಡಿ. ನಾಳೆ ಯುಗಾದಿ . ಒಳ್ಳೇ ದಿವಸ. ಒಳ್ಳೇ ಕೆಲಸ ಅಂತ ಅನ್ಕೊಂಡು ಶುರು ಮಾಡಿರೋ ಈ e-ತಾಣಗಳನ್ನ ನಿಮ್ಮ ಮುಂದಿಡೋದಕ್ಕೆ ನಾಳೆ ಸರಿಯಾದ ದಿನ ಅನ್ನಿಸ್ತು. ಅಷ್ಟೆ.

ನಾಳೆ ದಿವಸ ಇದೇ ಸ್ಥಳದಲ್ಲಿ ಆ ನಾಲ್ಕೂ ತಾಣಗಳ Web Address ಇರುತ್ತೆ. ಸಾಧ್ಯ ಆದ್ರೆ ನಾಳೆ Visit ಮಾಡಿ. ಇಲ್ಲ ಅಂದ್ರೆ ನಾಡಿದ್ದು .

ಎಲ್ಲವನ್ನ ಕೂಲಂಕಷವಾಗಿ ಪರಿಶೀಲಿಸಿ ನಿಮ್ಮ ನಿಷ್ಕಲ್ಮಶ ಪ್ರತಿಕ್ರಿಯೆ ನೀಡಿ.

ನಿಮ್ಮ ಪತ್ರ ಹಾಗೂ ಪ್ರತಿಕ್ರಿಯೆಗಳೇ ನಂಗೆ ಮುಂದುವರೆಯೋದಕ್ಕೆ ಸ್ಫೂರ್ತಿ.





ನಿಮ್ಮವ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago