22 March 2010

: ಶನಿವಾರದ Study Circle ಸಾರಾಂಶ :


ಯಾವುದೇ ಒಂದು ಕೃತಿಯು, ಓದುವ ಕ್ರಿಯೆಯಿಂದ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ನಾವು ಗ್ರಹಿಸುವ ವಿಷಯ, ವಸ್ತು ಎಲ್ಲವು ಕೂಡ ನಮ್ಮನ್ನು ಪರಿಭಾವಿಸಿಕೊಂಡೆ ತನ್ನ ಒಟ್ಟು ಬಾಹುಳ್ಯವನ್ನು ಅ೦ತರ್ಮುಖಿಯಿಂದ ಬಹುಮುಖಿ ವ್ಯಾಪ್ತಿಗೆ ಎತ್ತರಿಸಿ ನಂತರ ಅದರ ತಿಳುವಳಿಕೆಯ ಜ್ಞಾನ ಸರ್ವವ್ಯಾಪಿಯಾಗುವುದು ಸಹಜ ಕ್ರಿಯೆ. ಇದು ಓದಿನ ಸ್ವಭಾವ ಎಂಬುದು ನನ್ನ ಅನಿಸಿಕೆ.


ಕೃತಿಕಾರರು ತಮ್ಮ ಸಾಹಿತ್ಯ ಕೃಷಿಯ ಆಸ್ತಿಯನ್ನು ಕೃತಿಗಳ ಮೂಲಕ ವಿಲ್ ಬರೆದು ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಾರೆ, ನಾವುಗಳು ಕೃತಿಗಳನ್ನು ಓದುವುದರಿಂದಲೇ ಅವುಗಳ ಮೌಲ್ಯ ಇಮ್ಮಡಿಸುವ ಮತ್ತು ಜೀವಪರ ಸೆಲೆ ಅಕ್ಷರ ಹುಟ್ಟಿನಿಂದಲೂ, ಮಾತು ಅದರ ಹಿಂದಿನಿ೦ದಲೂ ಮೌನವಾಗಿಯೋ ಶಬ್ದವಾಗಿಯೋ ಹರಿಯುತ್ತಿರುವುದು ಜಲಕನ್ನಡಿಯಷ್ಟೇ ವಿಸ್ಮಯ.


ನಾವು ನಮ್ಮ ಆಸಕ್ತ ಗೆಳೆಯರ ಬಳಗ ಪ್ರಾರ೦ಭಿಸಿರುವ ಅಧ್ಯಯನ ಕೇಂದ್ರದಲ್ಲಿ ಓದುವ ಕೃತಿಯ ಪ್ರವೇಶಿಕೆಯೇ ಬೆರಗುಗೊಳಿಸುವ೦ಥದ್ದು. ಮಾಸ್ತಿ ಅವರ ಕತೆಗಳನ್ನೂ ನಾವು ಓದಲು ಪ್ರಾರ೦ಭಿಸಿದಾಗ ನನಗೆ ನಿಜಕ್ಕೂ ಕುತೂಹಲವಿದ್ದುದು ಕಥೆಯನ್ನು ಮಿಕ್ಕವರು ಹೇಗೆ ಪ್ರವೆಶಿಸುತ್ತಾರೆ ಎಂದು. ನನಗೆ ಖುಶಿಯಿದೆ ರೇವಪ್ಪ, ಶಾಂತಾರಾಂ, ಜಯಸುಧ, ಮಂಜುಳಾ, ಲಾವಣ್ಯ, ಪರಶುರಾಂ ಇವರುಗಳು ವಿಶೇಷವಾಗಿ ಕಥೆಯ ಒಟ್ಟಾರೆ ಉದ್ದೇಶವನ್ನು ಆಯಾ ಪರಿಸರ ಸಾಮಾಜಿಕ ಹಾಗೂ ತಮ್ಮದೇ ಜೀವಸಾರದ ನೆಲೆಗಟ್ಟಿನಲ್ಲಿ ಯಾನಿಸಿರುವುದು ಓದಿನ ಸಾರ್ಥಕತೆಯ ಹಾದಿ.


ಲಿವಿಂಗ್ ಟುಗೆದರ್ನೆಸ್, ಜೀವನ ಪ್ರೀತಿ, ಜೀವ ಕಾರುಣ್ಯ, ಮೆರುಜೀವಣಿಗೆಯ ಒಲವು, ಮನುಷ್ಯ ಸಂಬಂಧಗಳ ಹೆಣಿಯುವಿಕೆಯ ಇವುಗಳನ್ನೂ ರೇವಪ್ಪ, ಶಾಂತಾರಾಂ, ಜಯಸುಧ, ಮಂಜುಳಾ, ಲಾವಣ್ಯ, ಪರಶುರಾಂ, ಇವರುಗಳು ಸಂವೇದಿಸಿರುವುದು ಓದಿನ ಬಗೆಗಿನ ಆಸಕ್ತಿ ಹಾಗು ಜೀವಪರ ಕಾಳಜಿಯನ್ನು ಸೂಚಿಸುವುದು ನಮ್ಮೆಲ್ಲ ಗುರುತುಗಳನ್ನು ಹಾಗೂ ಜೀವನ ಜ೦ಜಾಟಗಳನ್ನೂ ಕಳಚಿಕೊಂಡು ಹಗುರವಾಗುವ ರೀತ್ಯ ತಿಳಿದು ತಿಳಿಯಾಗುವ ಹಾದಿಗೆ ಪಯಣ ಹೊರಟಿರುವುದು ಅಧ್ಯಯನ ಕೇಂದ್ರದ ಹೆಮ್ಮೆ.


ಹೀಗೆ ಓದಿನ ಮೂಲಕ ನಮ್ಮೊಳಗಿನ ನಮ್ಮನ್ನು ಗುರುತು ಹಿಡಿಯುವ ಜಲಕನ್ನಡಿಯನ್ನು ಜನಪದ ಹಾಡುಗಳಲ್ಲಿ ತೂರಿ ಪ್ರಕೃತಿಗೆ ಬ್ಲೆಂಡ್ ಆಗುವುದು ನಮ್ಮ ಸಹಜ ಕ್ರಿಯೆಯಾಗಲೆ೦ಬುದು ನನ್ನ ಹಂಬಲ.
ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಕಾತರದಿಂದ ಕಾಯುತ್ತೇನೆ.

4 comments:

ADM - nistrator said...

ಶನಿವಾರದ ಸಭೆ ಖುಷಿ ಕೊಟ್ಟಿತು..

ಜೊತೆಗೆ ನಮ್ಮಲ್ಲನೇಕರು ಮಾತಾಡುವ ಧೈರ್ಯ ತಂದುಕೊಳ್ಳುವ ಭರವಸೆ ಹುಟ್ಟಿಸಿದ್ದಾರೆ...

ಮಂಜುನಾಥ ಅವರ ಇಂದಿನ ಲೇಖನ ಪ್ರಸ್ತುತವಾಗಿದೆ.

ಮುಖ್ಯವಾಗಿ ಅವರು ಬಳಸಿರುವ ಶಬ್ದಗಳು ಅವರ ಸಾಹಿತ್ಯ ಲೋಕದ ಪಯಣ ಎಷ್ಟು ದೂರದವರೆಗೂ ಸಾಗಿದೆ ಅಂತ ತಿಳ್ಕೋಬಹುದು...

ನಮ್ಮನ್ನೂ ತಮ್ಮ ಸಂಗಡ ಆ ಲೋಕ್ಕಕೆ ಕರೆದೊಯ್ಯಲು ಮಂಜು ಅವರಿಗೆ ನನ್ನ ಕೋರಿಕೆ

ಇಂತಿ,
ರೇವಪ್ಪ

Unknown said...

ಶನಿವಾರದ ಸಭೆಯ ಬಗ್ಗೆ ಮಂಜನ ಲೇಖನ ಹೊಸ ಓದುಗರಿಗೆ ಸ್ಫೂತಿ೵ದಾಯಕವಾಗಿದೆ.

ಈಗ್ಗೆ ಮೂರು ವಷ೵ಗಳ ಹಿಂದೆ ಮಂಜನ ಪ್ರಯತ್ನದಿಂದ 'ಮನನ' ಅಧ್ಯಯನ ತಂಡವನ್ನು ಕಟ್ಟಿದ್ವಿ. ಆಫೀಸಿನ ಯಾಂತ್ರಿಕ ಜೀವನದಿಂದ ಸ್ವಲ್ಪ ಬಿಡುವು ಮಾಡ್ಕೊಂಡು ಪುಸ್ತಕಗಳ ಬಗ್ಗೆ ಚಚೆ೵ ಮಾಡ್ತಾ ಇದ್ದುದು ಖುಷಿ ಕೊಡ್ತಿತ್ತು. 'ಮನನ' ದ ಮೂಲಕ FDA Examination-2008 ಗೆ Coaching Class ಕೂಡ Conduct ಮಾಡಿದ್ವಿ. ನಾಲ್ಕು ಜನ ಆಯ್ಕೆ ಕೂಡ ಆಗಿದ್ರು, ಸಾಥ೵ಕ ಅನ್ಸಿತ್ತು. ಕಾರಣಾಂತರದಿಂದ 'ಮನನ' ನಿಂತ್ರು ನಾವು ಓದ್ತಾನೇ ಇದ್ವಿ. ಆಗಾಗ್ಗೇ ನಾನು ಮಂಜ ಇಬ್ಬರೂ ಸೇರಿ ಪುಸ್ತಕ ಮೇಳಗಳಿಗೆ ಹೋಗ್ತಿವಿ. ಅಲ್ಲಿ ನನಗೆ ಒಳ್ಳೊಳ್ಳೆ ಪುಸ್ತಕಗಳನ್ನು ಮಂಜ ಸಜೆಸ್ಟ್ ಮಾಡ್ತಾನೆ. ಅವುಗಳನ್ನು ಓದಿ ಇಬ್ಬರು ಚಚೆ೵ ಮಾಡ್ತಿವಿ. ಈಗ ಮತ್ತಷ್ಟು ಸ್ನೇಹಿತರ ಜೊತೆ ಸೇರಿ ಚಚೆ೵ / ಸಂವಾದ ಮಾಡೋದಕ್ಕೆ ಖುಷಿ ಅನ್ನಿಸ್ತಿದೆ.

ಇನ್ನೊಂದು ವಿಷಯ,

ಶನಿವಾರದ ಸಭೆಯಲ್ಲಿ ಮಾತನಾಡಿದ ಶಾಂತರಾಮ್, ರೇವಪ್ಪ, ಜಯಸುಧಾ, ಲಾವಣ್ಯ, ಪರಶುರಾಮ್ ಇವ್ರಿಗೆ ನನ್ನ ಅಭಿನಂದನೆಗಳು.

ಜಯಸುಧಾ ಹೇಳ್ತಿದ್ರು 'ನಾನು ಸಚಿವಾಲಯಕ್ಕೆ ಬಂದಾಗಿನಿಂದ ಇಷ್ಟು ಜನರ ಮುಂದೆ ಮಾತನಾಡಿರಲಿಲ್ಲ, ನಾನೂ ಮಾತನಾಡಬಲ್ಲೆ ಎಂಬ ಆತ್ಮವಿಶ್ವಾಸ ಬಂತು' ಅಂತ.

ಮಂಜನ ಒಂದು ಒಳ್ಳೆಯ ಪ್ರಯತ್ನಕ್ಕೆ ಇದೊಂದು ಒಳ್ಳೆಯ ಪ್ರತಿಕ್ರಿಯೆ ಅಂತ ನಾನು ಭಾವಿಸ್ತೀನಿ. ಅಧ್ಯಯನ ತಂಡದ ಚಟುವಟಿಕೆ ನಿರಂತರವಾಗಿರಲಿ, ನಮ್ಮ ಅರಿವಿನ ದಾಹ ಅನಂತವಾಗಲಿ.

ವಂದನೆಗಳು, - ರಮೇಶ

ಪರಶು.., said...

'ಸ್ಟಡಿ ಸರ್ಕಲ್' ನಿಜವಾಗಿಯೂ ಒಂದು ಉತ್ತಮ ಪರಿಕಲ್ಪನೆ. ಓದಿನ ದಾಹವಿರುವವರನ್ನೆಲ್ಲಾ ಒಂದೆಡೆ ಸೇರಿಸಿ, ಅವರ ಓದಿನ ಮಟ್ಟವನ್ನು ಒರೆಗೆ ಹಚ್ಚುವ ಮೂಲಕ ಸಾಹಿತ್ಯಾಸಕ್ತರ ಓದಿನ ಪ್ರಕ್ರಿಯೆಯಲ್ಲಿ ನಿರಂತರತೆಯನ್ನು ಕಾಯ್ದು ಕೊಳ್ಳುವಲ್ಲಿ ಇದು ಯಶಸ್ವಿಯಾದದ್ದಾಗಿದೆ. ಇಂತಹ ಒಂದು ಹೊಸ ಪರಿಕಲ್ಪನೆಯನ್ನು ಸಂಯೋಜಿಸಿರುವ ಮಂಜುನಾಥ್, ಅವರಿಗೆ ಹೆಗಲೆಣೆಯಾಗಿ ನಿಂತಿರುವ ರೇವಪ್ಪ ಹಾಗೂ ತಮ್ಮ ಕೆಲಸದ ನಡುವೆಯೂ ಬಿಡುವ ಮಾಡಿಕೊಂಡು ತಿಂಗಳಲ್ಲಿ ಒಂದು ದಿನ ಒಗ್ಗೂಡುವ ನನ್ನ ಸಾಹಿತ್ಯಾಸಕ್ತ ಮಿತ್ರರೆಲ್ಲರಿಗೂ ಅಭಿನಂದನೆಗಳು.

ಮೂಲತಃ ಮಂಜುನಾಥ್ ಒಬ್ಬ ಕವಿ ಹೃದಯದ ಸಹೃದಯಿ. ಅವರ 'ಮನುಷ್ಯ ಬಣ್ಣದ ಯುದ್ಧಗಳು' ಕವನ ಸಂಕಲನದಿಂದಲೇ ಅವರ ಸಾಹಿತ್ಯದ ಆಸಕ್ತಿ ಮತ್ತು ಕವಿ ಪ್ರತಿಭೆಯನ್ನು ಅರಿಯಬಹುದು. ಇಂತಹ ಮಂಜುನಾಥ್ ನಮ್ಮೊಡನಿದ್ದು ನಮ್ಮ ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸುತ್ತಿರುವುದು ನಮಗೆ ಸಂತಸದ ಮತ್ತು ಹೆಮ್ಮೆಯ ಸಂಗತಿಯಾಗಿದೆ.

ಈ ಸ್ಟಡಿ ಸರ್ಕಲ್ ಬಗ್ಗೆ ನನ್ನ ಪುಟ್ಟ ಸಲಹೆ ಏನೆಂದರೆ, ಸ್ಟಡಿ ಸರ್ಕಲ್ ನಲ್ಲಿ ಕೆಲವೊಮ್ಮೆ ಸಮಯದ ಅಭಾವ ಮತ್ತು ಸ್ಟೇಜ್ ಫಿಯರ್ ನಿಂದಾಗಿ ಚರ್ಚಿಸಬೇಕೆಂದುಕೊಂಡಿದ್ದು ಚರ್ಚಿತವಾಗದೇ ಹೋಗಬಹುದು. ಹೇಳಬೇಕೆಂದುಕೊಂಡಿದ್ದನ್ನು ಹೇಳದೆ ಮತ್ತೇನನ್ನೋ ಹೇಳುವಂತಾಗಬಹುದು. ಹೀಗಾದಾಗ ಅಥವಾ ಹೀಗಾಗಿದೆ ಎಂದು ಮನಸ್ಸಿಗೆ ಅನಿಸಿದಾಗ ಹೇಳದೇ ಬಿಟ್ಟಿರುವ ವಿಚಾರಗಳನ್ನೆಲ್ಲಾ ಸೇರಿಸಿ ಲೇಖನ ತಯಾರಿಸಿ ಅದನ್ನು 'ನಮ್ಮ ಬ್ಲಾಗ್' ನಲ್ಲಿ ಪ್ರಕಟಿಸುವ ಕೆಲಸವಾಗಬೇಕು ಎಂಬುದು ನನ್ನ ಆಶಯ....

spandana said...

ಸ್ಟಡಿ ಸಕ೵ಲ್ ಸದಸ್ಯರೆಲ್ಲರಿಗೂ ನನ್ನ ನಮಸ್ಕಾರಗಳು.

ಶನಿವಾರದಂದು ಮಾಸ್ತಿ ಅವರ ಸಣ್ಣ ಕಥೆಗಳ ಕುರಿತು ನಡೆದ ಚಚೆ೵ ಚೆನ್ನಾಗಿತ್ತು. ಮುಂಬರುವ ದಿನಗಳಲ್ಲಿ ಈ ಚಚೆ೵ ಇನ್ನೂ ಉತ್ತಮ ರೀತಿಯಲ್ಲಿ ಸಾಗಲಿ ಎನ್ನುವುದು ನನ್ನ ಆಶಯ. ಈ ಟೀಂನಲ್ಲಿ ಒಳ್ಳೊಳ್ಳೆಯ ಪ್ರತಿಭಾವಂತ ಸದಸ್ಯರು ಒಗ್ಗೂಡುತ್ತಿರುವುದು ಸಂತೋಷದ ವಿಷಯ.

ಈ ಟೀಂ ಹಳೆಯ(ಅನುಭವಿ) ಹಾಗೂ ಹೊಸ(ಅನುಭವ ಪಡೆಯಲು ಮುಂದಾಗಿರುವ) ಸದಸ್ಯರ ಮಿಶ್ರಣವಾಗಿದ್ದು, ಹೊಸಬರಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆ ದೊರಕಿದಂತಾಗಿದೆ.


ಮಂಜುನಾಥ್ ನೀವು ನಿಮ್ಮ ಲೇಖನದಲ್ಲಿ ಬಳಸುವ ಪದಗಳು, ಸಂಧಬ೵ಕ್ಕೆ ತಕ್ಕಂತೆ ಅವುಗಳ ಬಳಕೆ ತುಂಬಾ ಚೆನ್ನಾಗಿದೆ. ನಿಮ್ಮ ಈ ಸಾಹಿತ್ಯಲೋಕದ ಪಯಣ ನಿರಂತರವಾಗಿ ಹೀಗೆ ಸಾಗುತ್ತಿರಲಿ ಎಂಬುದು ನಮ್ಮೆಲ್ಲರ ಆಶಯ.

I Personally thank Mr.Revappa & team for creating such a wondeful blog.

ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಈ ಅಧ್ಯಯನದ ಉದ್ದೇಶ ಒಳ್ಳೆಯ ಫಲಿತಾಂಶದೊಂದಿಗೆ ಮುಂದುವರೆಯಲಿ......


ಸುಧಾ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago