07 August 2009

Let's Learn English...




ಮನೇಲಿ ಪಟ್ಟಾಗಿ ಕೂತು ನಾನು ಓದೋದರ ಜೊತೆಗೆ ನಿಮ್ಮನ್ನೂ ಓದಿಸೋಣ ಅಂತ ನನ್ನ ಪ್ಲಾನ್ .... ಇದೆ. ನೋಡೋಣ ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಅಂತ ...

ಇಂಗ್ಲೀಶ್ ವಿಷಯದ ಬಗ್ಗೆ....
ಕನ್ನಡ ಮಾದ್ಯಮದಲ್ಲಿ 10 ನೇ ತರಗತಿ ವರೆಗೆ ಓದಿ ಮತ್ತೆ ಪಿಯು ನಲ್ಲಿ ಕನ್ನಡ ಮಾಧ್ಯಮದಲ್ಲೇನೆ ಆರ್ಟ್ಸ್ ಮಾಡಿ ಕಡೆಗೆ ಡಿಗ್ರಿನೂ ಕನ್ನಡದಲ್ಲೆ ಮುಗಿಸಿ ಸ್ವಲ್ಪ ಮುಂದುವರೆದು ಬಿ.ಎಡ್. ಕೂಡ ಕನ್ನಡಲ್ಲೇ ಮಾಡಿ ಕೂತಾಗ ಇಂಗ್ಲೀಶ್ ಕಂಡರೆ ಕಾಲು ಹಾರೋದು ಸಹಜ ... ಇವೆಲ್ಲದರ ನಡುವೆಯೂ ಪರಂಗಿಗಳ/ ಪರಕೀಯ ಭಾಷೆ ನಮಗೇಕೆ ಅಂತ ಅವಜ್ಞೆ ತೋರದೆ ಸ್ವಲ್ಪ ಪ್ರಯತ್ನ ಹಾಕಿ ( With A Little Effort ..) ಆರಂಭದಿಂದ ಅಂದ್ರೆ ಶಾಲಾ ದಿನಗಳಿಂದ ಸ್ವ ಪ್ರಯತ್ನ ಮಾಡಿದ್ರೆ ಭೂತ ನಮ್ಮ ಕಡೆ ತಲೇನೂ ಹಾಕ್ತಿರಲಿಲ್ಲ ಅನ್ನೋದು ಶುದ್ಧ ಸತ್ಯ ... ಆರ್ಟ್ಸ್ ಮಾಡಿದವರಿಗೆ ಮಾತ್ರ ಭೂತ ಕಾದಿದೆ ಅನ್ಕೋಬೇಡಿ ...ಇದು ಅದರ ಬಗ್ಗೆ ನಿರ್ಲಕ್ಸ್ಯ ಮನೋಭಾವ ತಳೆದ ಯಾರನ್ನೋ ಬಿಟ್ಟಿಲ್ಲ ... ಗಂಡು ಹೆಣ್ಣು 'ಅದು' ಇದು ಯಾರನ್ನೋ ಬಿಟ್ಟಿಲ್ಲ ...


So,
ನಮ್ಮ ಮುಂದಿನ ಸವಾಲು ಭೂತವನ್ನ ಪಳಗಿಸೋದು ...

ಮೊದಲ ಹೆಜ್ಜೆ : ಧೈರ್ಯ ತಂದುಕೊಳ್ಳಿ ...

ಎರಡನೆಯದು : ಧೈರ್ಯವನ್ನ ಕಡೆ ಗಳಿಗೆವರೆಗೂ ಇಟ್ಕೋತೀನಿ ಅಂತ ಶಪಥ ಮಾಡಿ ...

ಮೂರನೆಯದು : Relax & Just Go For It !!


ಇವತ್ತು PARAGRAPH COMPREHENSION ಬಗ್ಗೆ ತಿಳಿದುಕೊಳ್ಳೋಣ :

ಇಂಗ್ಲಿಷ ಭಾಷೆಯ ಪರೀಕ್ಷೆಯಲ್ಲಿ ಒಂದು ಭೀಮಗಾತ್ರದ ಪ್ಯಾರ ಕೊಟ್ಟು ಓದಿ ಕೆಳಗೆ ನೀಡಿರೋ ಪ್ರಶ್ನೆಗಳನ್ನ ಉತ್ತರಿಸಿ ಅಂತ ಹೇಳೋದು ಸಾಮಾನ್ಯವಾಗಿ ಎಲ್ಲ ಕಡೆ ನೋಡಿದ್ದೀರಿ. Paragraph ಗಳಲ್ಲಿ 3 ಥರ ಇರ್ತಾವೆ ...

. ಒಂದು ಗಜಗಾತ್ರದ ಪ್ಯಾರ ಮತ್ತು ಹಲವು ಪ್ರಶ್ನೆಗಳು [ Big Size ]
. ಒಂದು ಅಜಗಾತ್ರದ ಪ್ಯಾರ ಮತ್ತು ಒಂದೇ ಪ್ರಶ್ನೆ [ Moderate Size ]
. ಒಂದೆರಡು ಸಾಲುಗಳ ಪ್ಯಾರ ಮತ್ತು ಕೆಲವು ಪ್ರಶ್ನೆಗಳು [ Very Short ]

1
ನೇ ತರಹದ ಪ್ರಶ್ನೆ ಬಿಡಿಸಲು ಅನೇಕ ಪುಸ್ತಕಗಳಲ್ಲಿ ಅನೇಕ ದಾರಿ ಹೇಳ್ತಾರೆ ..ಅದರಲ್ಲಿ ಒಂದು ದಾರಿಯನ್ನ ನಾವು ಆಯ್ಕೆ ಮಾಡೋಣ... ಇಂಥ ಗಜಗಾತ್ರದ ಪ್ಯಾರ ಇರೋ ಪ್ರಶ್ನೆಗಳನ್ನ ಬಿಡಿಸುವಾಗ ಪ್ರಥಮ ಹೆಜೆಜ್ ಅಂದ್ರೆ ನೀಡಿರೋ 8-10 ಪ್ರಶ್ನೆಗಳನ್ನ ಒಂದು ಸಾರಿ ಓದಿಕೊಳ್ಳೋದು ... ಆವಾಗ ನಿಮಗೆ ನಂತರದಲ್ಲಿ ಪ್ಯಾರ ಓದುವಾಗ ಪ್ರಶ್ನೆಗೆ ಉತ್ತರ ಸಿಗೋ ಸಾಧ್ಯತೆಗಳು ಬಹಳ ...ಹೀಗಾಗಿ ಮೊದಲ ಹಂತ ನೀಡಿರೋ ಪ್ರಶ್ನೆಗಳನ್ನ ಓದಿ ಸ್ವಲ್ಪ ನೆನಪಿನಲ್ಲಿಟ್ಟುಕೊಂಡು ಪ್ಯಾರ ಓದಲಿಕ್ಕೆ ಮೊದಲು ಮಾಡೋದು...

ಆಮೇಲೆ 8-10 ಪ್ರಶ್ನೆಗಳು ಇರ್ತಾವಲ್ಲ ಅದರಲ್ಲಿ ಕೆಲವು ವಿಧಗಳಿವೆ ..
ಒಂದೆರಡು ನೇರ ಉತ್ತರ ಬಯಸೋ ಪ್ರಶ್ನೆಗಳು (straight forward)
ನಾಲ್ಕೈದು Implied Information ಆಧರಿಸಿದವು..
ಎರಡ್ಮೂರು Derived Through The Implied Information ಆಧರಿಸಿದವು..

Straight Forward
ಪ್ರಶ್ನೆಗಳಿಗೆ ಉತ್ತರ ನೇರವಾಗಿ ಸಿಗುತ್ತೆ ...
ಇನ್ನು ಬಾಕಿ ಎರಡು ಥರದ ಪ್ರಶ್ನೆಗಳಿಗೆ ಒಂದು ಸೂತ್ರ ( Formula ) ಹೇಳ್ತಾರೆ ...
IEI FORMULA
ಅಂತ ಅದ್ರ ಹೆಸರು ...

ಪ್ಯಾರದಲ್ಲಿ ನೀಡಿರೋ ಮಾಹಿತಿಯನ್ನ ಎರಡು ಭಾಗಗಳಾಗಿ ವಿಂಗಡಿಸಬಹುದು :
ಒಂದು Direct (ನೇರ)
ಇನ್ನೊಂದು Implied (ನೇರವಲ್ಲದ್ದು... )

ಆಮೇಲೆ Inference ...
ಅಂದ್ರೆ ನೀಡಿರೋ ಮಾಹಿತಿ ಒದಗಿಸೋ ಮಾಹಿತಿ ಅಥವಾ What Inference We Can Draw From The Given Information [ Either Simple or Complex ]


Implied Information ಮತ್ತೆ Derived Through The Implied Information ಪ್ರಶ್ನೆಗಳಿಗೆ ಉತ್ತರಿಸುವಾಗ elimination ಸೂತ್ರ ಪಾಲಿಸಬೇಕು... ಅಂದ್ರೆ ನೀಡಿರೋ ನಾಲ್ಕು ಉತ್ತರಗಳಲ್ಲಿ ಯಾವ ಉತ್ತರ ಖಂಡಿತ ಸಾಧ್ಯ ಇಲ್ಲ ಅಂತ ಅನ್ನೋದನ್ನ ಗುರುತಿಸಿಕೊಳ್ಳುತ್ತ ಬರಬೇಕು... ಆವಾಗ ಸರಿಯಾದ ಉತ್ತರ ಮಾತ್ರ ಉಳಿಯುತ್ತೆ ...

So, Big SizePara ಪ್ರಶ್ನೆಗಳಿಗೆ ಉತ್ತರಿಸುವಾಗ
ಮೊದಲು ಪ್ರಶ್ನೆಗಳನ್ನ ಓದಿಕೊಂಡು ನಂತರ ಪ್ಯಾರ ಓದಿ ಉತ್ತರಗಳನ್ನ ಗುರ್ರುತಿಸಿಕೊಂಡು ಆಮೇಲೆ IEI Formula ಬಳಸಿ ...

ಇನ್ನು Moderate Size ಪ್ಯಾರಾ ಗಳಲ್ಲಿ ಒಂದೇ ಪ್ರಶ್ನೆ ಇರುತ್ತಲ್ಲ ....Here : Read The Passage & Compute The Points In Your Mind & With The Help of Those Points Locate The Main Idea / Motive Behind The Paragraph. Your Must Confirm The Central Idea of tHe Paragraph. The Accessory or The secondary Points May Be True But They Have A Partial Identity & Thus They Cannot Be The Correct Answers.

ಆಮೇಲೆ 3 ನೆ ಥರದ Very Short Type ಪ್ಯಾರಾ ಗಳಲ್ಲಿ ಪ್ರಶ್ನೆಗಳನ್ನ ಕೇವಲ ಅಲ್ಲಿ ನೀಡಿರೋ ಮಾಹಿತಿ ಅಲ್ದೇನೆ ಪ್ಯಾರದಲ್ಲಿ ಬಂದಿರುವ ಒಂದು ಶಬ್ದ ಎತ್ಕೊಂಡು ಅದರ ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಶಬ್ದ ಬರೀಲಿಕ್ಕೆ ಕೇಳಬಹುದು ..


ಇಷ್ಟನ್ನನೀವು ಮನನ ಮಾಡಿಕೊಂಡರೆ ಥರದ ಪ್ರಶ್ನೆಗಳನ್ನ ಸರಳವಾಗಿ ಬಿಡಿಸಬಹುದು ...

NOTE : ಇಲ್ಲಿ ನೀಡಿರೋ ಮಾಹಿತಿ/ವಿಧಾನ ನನಗೆ ಸರಳ ಅನ್ನಿಸಿರೋದು ... ಇದಕ್ಕಿನ್ನ ಸರಳ - ಸುಲಭ ಮಾರ್ಗ ನಿಮಗೆ ತಿಳಿದಿದ್ದರೆ ಅದನ್ನ ಹೇಳಲು ಹಿಂಜರಿಬೇಡಿ ...


ನಿಮ್ಮವ,
ರೇವಪ್ಪ




1 comment:

sakkath sacchi.blogspot.com said...

dear REV,you are really "GREAT".What a noble "IDEA"! and "What an inspiring "DEED"? I WISH YOU ALL THE BEST AND GREAT SUCCESS IN YOUR ENDEAVOUR-YOUR'S FOREVER-SAKKAT SACCHI

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago