07 August 2009

Answers For Comp. 6

ಪೋರ ಪೋರಿಯರೇ ,

ಸೂ.ಶೀ.ಸ.ಸ ಇಂಗ್ಲಿಷ್ ಸ್ಪರ್ಧೆಯ EX.NO.6 (He/Him) ನ ಪಲಿತಾಂಶ;ಇಗೋ ನಿಮ್ಮ ಕಣ್ಣ ಮುಂದಿದೆ :-

ಅದಕ್ಕೂ ಮೊದಲು, ಒಂದು ವಿಶೇಷ ವಿಷಯವನ್ನು ನಿಮಗೆ ಹೇಳಲು ಬಯಸುತ್ತೇನೆ . ಅದೇನೆಂದರೆ, ಇದುವರೆಗೂ ನಮ್ಮ ಬ್ಲಾಗ್ನಲ್ಲಿ ನಮ್ಮ junior assistant ಗಳಲ್ಲದೆ , ನಮ್ಮ juniortypist ಮಿತ್ರರಾದಂತ ಪ್ರಕಾಶ್ ಪಾಟೀಲ್ ಹಾಗು ಪವನ್ ಭಾಗವಹಿಸುತ್ತಿದ್ದಾರೆ . ಆದರೆ ಈ ಬಾರಿ ನಮ್ಮ "Stenograper" ಮಿತ್ರರೊಬ್ಬರು ಭಾಗವಹಿಸಿದ್ದಾರೆ ಅವರು ಯಾರೆಂದರೆ -- ಶ್ರೀಮತಿ G.ಮಂಜುಳಾ. ಶ್ರೀಮತಿ ಮಂಜುಳಾರವರಿಗೆ ನಮ್ಮ ಬ್ಲಾಗ್ನಲ್ಲಿ ಬರುವ ಲೇಖನಗಳು ಹಾಗು ಈ ಸ್ಪರ್ಧೆಗಳ ಬಗ್ಗೆ ಕೆಲವು ದಿನಗಳ ಹಿಂದೆ ಪರಿಚಯ ಮಾಡಿಕೊಟ್ಟಿದ್ದೆ ಹಾಗು ನಮ್ಮ ಬ್ಲಾಗ್ನಲ್ಲಿ ಹಾಗು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದೆ .

ಈ "bracket" ನಲ್ಲಿ ಪದಗಳನ್ನು ಕೊಟ್ಟು ಸರಿಯಾದ ಪದವನ್ನು ಆರಿಸಿ ವಾಕ್ಯ ಪೂರ್ಣಗೊಳಿಸುವ ಸ್ಪರ್ಧೆಯ ಹಿಂದಿನ ಸಂಚಿಕೆಯೊಂದನ್ನು ವೀಕ್ಷಿಸಿದ್ದ ಅವರು " Fill in the blanks" ರೂಪದಲ್ಲಿ ಅಂತ ಪ್ರಶ್ನೆಗಳನ್ನು ಕೇಳಲು ಸೂಚಿಸಿದ್ದರು. ಆನಂತರದ ಇಂತ ಪ್ರಶ್ನೆ ಸಂಚಿಕೆಗಳಲ್ಲಿ ನಾನು ಆ ಮಾದರಿಯನ್ನೇ ಅಳವಡಿಸಿಕೊಳ್ಳಲು ಮೊದಲಾದೆ

ಬನ್ನಿ FRIENDs

"ನಮ್ಮ ಬ್ಲಾಗ್ ನಮಗಷ್ಟೇ ಸೀಮಿತವಲ್ಲ ; ನಮ್ಮ (ADM--D) ಗೆ ಒಳಪಡುವ 'Typist' ಮಿತ್ರರಷ್ಟೇ ಅದರಲ್ಲಿ ಭಾಗವಹಿಸಬಹುದೆಂದೇನಿಲ್ಲ ; ಯಾರು ಬೇಕಾದರು ಮುಕ್ತಮನಸ್ಸಿನ್ನಿಂದ ಪಾಲ್ಗೊಳ್ಳಬಹುದು--ಎಲ್ಲರಿಗೂ ಮುಕ್ತ ಅವಕಾಶ ಉಂಟು" ಎಂಬುದನ್ನು ತೋರಿಸಿಕೊಟ್ಟ ಶ್ರೀಮತಿ G.Manjula ರವರಿಗೆ , ಮುಗಿಲು ಮುಟ್ಟುವ "Claps" ನೊಂದಿಗೆ ಭಾರಿ ಬರ್ಜರಿ ಹೃತ್ಪೂರ್ವಕ ಭವ್ಯ ಸ್ವಾಗತವನ್ನು ನೀಡೋಣ...

"HEARTY WELCOME" TO YOU Smt. MANJULA.G


ಈಗ ,Ex no.6 ನ "Key Answers"

1) him
2) he
3) he
4) he
5) him
6) him
7) him
8) he
9) he
10) him


Today's winner :-REV------9/10 (90%)



ಇಂದಿನ "Time Pass" ಕಾರ್ಯಕ್ರಮ:-

ನಿಮ್ಮೆಲ್ಲರಿಗೂ ಕಮಲಹಾಸನ್ ಅಭಿನಯದ ತಮಿಳಿನ "INDIAN" ಚಿತ್ರ ನೆನಪಿರಬಹುದು. ಅದು ಹಿಂದಿಗೂ ಭಾಷಾಂತರಗೊಂಡು " HINDUSTANI" ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು. ಈ ಚಿತ್ರದ ಒಂದು ಜನಪ್ರಿಯ ಹಾಡು (ಆಸ್ಟ್ರೇಲಿಯಾದ ಸುಂದರ ಹೊರಾಂಗಣದಲ್ಲಿ ಕಾಂಗರೂಗಳ ಜೊತೆಜೊತೆಗೆ ಕಮಲಹಾಸನ್ ಹಾಗು ಮನೀಷಾ ಕೊಯಿರಾಲ ಹೆಜ್ಜೆ ಹಾಕಿರುವ ಹಾಡು ) ಹಿಂದಿಯಲ್ಲಿ ಇಂತಿದೆ :-

Telephone ದುನ್ (ಧ್ವನಿ) ಮೇ ಹಸ್ನೆವಾಲಿ
Melbourne ಮಚಲಿ ಮಚಲ್ನೆವಾಲಿ
..................................................
...................................................
ಸೋನ...ಸೋನ .........................
.....................................................

[ಮುಂದಿನ ಸಾಲುಗಳು ನನಗೆ ಗೊತ್ತಿಲ್ಲ :ಆದರೆ ಹಾಡಿನ ಧಾಟಿ(Tune & Rhythm) ಸ್ವಲ್ಪ ನೆನಪಿದೆ] ಈಗ ಆ ಧಾಟಿಯಲ್ಲಿ ಹಾಡಬೇಕಾದ ನನ್ನ ಸ್ವರಚಿತ(ಕೊಂಚ ಅನುವಾದಿತ) ಕನ್ನಡ ಹಾಡು ;ಇಗೋ ನಿಮ್ಮ ಮುಂದೆ :-

(ಹಾಡು ಭಾಗಶಃ ಮಾತ್ರವಿದೆ. ನನಗೆ ಸಂಪೂರ್ಣವಾಗಿ ರಚಿಸಲಾಗಲಿಲ್ಲ. ಮುಂದೊಂದು ದಿನ ಪೂರ್ಣವಾಗಬಹುದೇನೋ!)


ಟೆಲಿಫೋನ್ ಧ್ವನಿಯಲಿ ನಗುವ ಇವಳಾ
ಮದ್ದೂರ್ ಮಳ್ಳಿ ಕಮಲಿಯ ಮಗಳಾ ?
ಹೊಳೆವ ತುಟಿ ಕೆಂಪನೆ ಹವಳ
ನಾ ಬೇಡುವೆ ಇವಳ ಮುತ್ತಿನ ಕವಳ
ಮುತ್ತನು ಕೊಡುಬಾರೆ ಲೈಲಾ...
ಚಿನ್ನ ಓ ಚಿನ್ನ ,ನೀ ನನ್ನ ಪ್ರೀತಿಯ ಚಿನ್ನ
ಚಿನ್ನ ಓ ಚಿನ್ನ,ನೀ ನನ್ನ ಬಾಳಿನ ಚಿನ್ನ
ಆ ಬ್ರಹ್ಮ ,ಮಾಡಲು ನಿನ್ನ, ಕಂಪ್ಯೂಟರ್ ಬಳಸಿದನಾ ?


ಓಹೋಹೋ.....ಹೋ...ಹೋ....ಹೋ
ಓಹೋಹೋ....ಹೋ....ಹೋ,,,,ಹೋ
ಓಹೋಹೋ.....ಹೋ....ಹೋ....ಹೋ
ಓಹೋ...ಓಹೋ.....ಓಹೋ...ಓಹೋ
ಓ.....ಓ...ಓ


ನಿನ್ನಂತ ಹೆಣ್ಣ ನಾನು ಎಲ್ಲೂ ನೋಡಿಲ್ಲ
ಕಣ್ಣಾಣೆ ನೋಡಿಲ್ಲ
ನನ ಕೈಗೆ ಸಿಕ್ಕಿಹ ನಿನ್ನ ಎಂದಿಗು ಬಿಡೋಲ್ಲ
ನೀ ಬಿಟ್ಟರು ಬಿಡೋಲ್ಲ(ಲೈ)
ನಿನ ನೋಡಿದಾಗ ಒಲವು ಮೂಡಿತು ; ಹೃದಯ ಹಾಡಿತು
ನಿನ ಕೂಡಿದಾಗ ಹರುಷ ಹೊಮ್ಮಿತು; ವರುಷ ಚಿಮ್ಮಿತು


TELEPHONE ದನಿಯಲಿ ನಗುವ ಇವಳ
ಮದ್ದೂರ್.........................................
......................................................
......................................................
ಚಿನ್ನ ಓ ಚಿನ್ನ
...........................................

-----ಸಕ್ಕತ್ ಸಚ್ಚಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago