ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ, ಸಂದರ್ಭದಲ್ಲಿ ಎಲ್ಲರೂ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ, ರಾಷ್ಟ್ರ ಗೌರವವನ್ನು ಮೈಗೂಡಿಸಿಕೊಳ್ಳುವುದನ್ನು ನೆನಪಿಸಿಕೊಳ್ಳೋಣ. ರಾಷ್ಟ್ರಕ್ಕಾಗಿ ಏನಾದರು ಮಾಡಬೇಕೆಂಬ ಹಂಬಲವನ್ನು ಹೊಂದೋಣ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರುತ್ತಾ, ನನ್ನ ಈ ಕವಿತೆಯನ್ನು ನನ್ನ ರಾಷ್ಟ್ರಕ್ಕಾಗಿ ಸಮರ್ಪಿಸುತ್ತಿದ್ದೇನೆ.
ಪಣ ತೋಡು ದೇಶಕೆ ಭಕ್ತ ಏಳಲೋ ದೇಶದ ಭಕ್ತ ಇಳೆಯು ನಿನ್ನದೇ ಎಂದೂ ಅನಂತ | ಸೆಳೆಯುತಿಹಳು ಭಾರತ ಶಕ್ತಿ ಕಳೆಯುತಿಹಳು ದುರಭಿಮಾನವ ಸುತ್ತಿ || ಹಿಂದೂಸ್ಥಾನದಿ ಅನ್ಯರೆಂದೆ ಎಂದೋ ಇಲ್ಲಿಗೆ ಬಂದವರೆಂದೆ | ಕುಂದಿಹ ಶಕ್ತಿಯ ಎಚ್ಚರಿಸೋ ಬಂಧುವೆಂಬ ಮಳೆ ಸುರಿಸೋ || ನೀ ನಾಸ್ತಿಕ ನಾನ್ ಆಸ್ತಿಕ ಎಂಬೀ ಭಾವವು ನೀನಿರುವೆಡೆ ಬೆಳೆದಿಹುದು | ನಾನುತ್ತಮ ನೀನಧಮನೆಮ್ಬೀ ಭೇದವು ನಿನ್ನಲ್ಲಿಯೇ ಬೇರ್ಬಿಟ್ಟಿಹುದು || ಶಾಂತಿ ಮಂತ್ರದ ಬೀಡಿದು ಆಗಿಹುದೊಂದೇ ಜನ್ತಿಗಳೇಣಿಸುವ ಶತ್ರುಗಳೋಡಿಸು ಇಂದೇ | ಭ್ರಾಂತಿಯ ಬಿತ್ತುವ ಬೀಜವ ಕೊಳೆಸು ಮುಂದೆ ಶಾಂತಿಯ ನಾಡನು ಕಟ್ಟುವೆ ನಿಂದೆ || ಹೊಮ್ಮಿಸು ಬಂಧುವೇ ನರನಾಡಿಯಲಿ ಚಿಮ್ಮಿಸು ಶಾಂತಿಯ ನಡೆನುಡಿಗಳಲಿ | ಹೆಮ್ಮರದಂತಹ ನಿನ್ನೀ ನಾಡಲಿ ಅಮ್ಮನ ರಕ್ಷಿಸೋ ತೊಟ್ಟಿಹ ಪಣದಲಿ || ಮನ-ಮನದಲಿ ಬಿತ್ತು ತನು-ತನುವಿಡಿದೆತ್ತು | ಕಾಣದ ಸೌಹಾರ್ದತೆ ನೇಣಿಗೆ ಹೋಗುವ ಜಡತೆ || ಬಿಟ್ಟುಬಿಡು ದೇಶದ ಭಕ್ತ ಸುಟ್ಟುಬಿಡಿಂದೆ ಭೇದದ ಭಾವ | ಕಟ್ಟಿಡು ದೇಶದ ಭದ್ರತೆ ಮೆಟ್ಟಿ ನಿಲ್ಲುತ ನಿನ್ನೆಲವ || |
No comments:
Post a Comment