24 July 2009

ಮುಂಜಾನೆಯ ಮಂಜಿನ ಹನಿ






ಕವಿತೆಗಳ ಜೊತೆಗೆ ಒಂದು ಕಿರು ಕತೆಯನ್ನು ಬರೆಯಬೇಕು ಅನ್ನಿಸಿದ್ದರಿಂದ ಒಂದು ಕಿರು ಕತೆಯನ್ನು ಪ್ರಾರಂಭಿಸಿದ್ದೇನೆ. ಈಗ ನಿಮ್ಮ ಮುಂದೆ ಇಡುತ್ತಿರುವ ಕತೆ ನನಗೆ ತಿಳಿದಿರುವಂತೆ ಸತ್ಯ ಕತೆಯಾಗಿದೆ. ಸ್ವಚಂದವಾಗಿ ನಲಿದಾಡಬೇಕಾದಂತಹ ಎರಡು ಹೃದಯಗಳು ವಿರಹ ವೇದನೆಗೆ ಒಳಗಾಗಿ ಹಪಹಪಿಸುವ ನೈಜ ಕತೆ ಇದಾಗಿದೆ. ಕತೆಯಲ್ಲಿ ಬರುವ ಸಂಭಾಷಣೆಯಲ್ಲಿ ಯುವತಿಯ ಸಂಭಾಷಣೆಯ ಮಾತುಗಳು ಬೆಳಗಾವಿಯ ಭಾಷೆಯಲ್ಲಿದ್ದರೂ ಓದುಗರಿಗೆ ಸರಳವಾಗಿ ಅರ್ಥವಾಗಬೇಕೆಂಬ ಉದ್ದೇಶದಿಂದ ಗ್ರಾಂಥಿಕ ಭಾಷೆಯಲ್ಲೇ ಸಂಭಾಷಣೆಯನ್ನು ನೀಡಲಾಗಿದೆ. ಇದಕ್ಕಾಗಿ ಓದುಗರು ಸಹಕರಿಸಬೇಕಾಗಿ ವಿನಂತಿಸುತ್ತೇನೆ.



ಮುಂಜಾನೆಯ ಮಂಜಿನ ಹನಿ


ಯಾವ ದೈಹಿಕ ಆಕರ್ಷಣೆಯು ಇಲ್ಲ, ಎಲ್ಲರಂತೆ ಪ್ರಪೋಸ್ ಮಾಡಲಿಲ್ಲ, ಪ್ರೀತಿ ಹುಟ್ಟಲು ಕಾರಣವೇನೆಂದು ಆತನಿಗೆ ತಿಳಿಯಲಿಲ್ಲ ಅಂಥಹ ಪ್ರೀತಿಯಾ ಅವಧಿ ಕೇವಲ ಮುರೂವರೆ ಗಂಟೆ ಅಷ್ಟೇ. ಅದು ಆತ ಜೀವನದಲ್ಲಿ ಮಂಜಿನ ಹನಿಯಂತೆ ಕರಗಿ ಮರೆಯಾಗಲಿಲ್ಲ. ಮರೆಯುವನ್ಥಹದ್ದು ಅಲ್ಲ. ಪ್ರತಿ ವರ್ಷದ ಬೋ.....ರೆಂದು ಮೊರೆಯುವ ಮುಂಗಾರು ಮಳೆಯಂತೆ, ಅವನೆದೆಯಲ್ಲಿ ನೆನಪುಗಳ ಮೊರೆತ-ಅಲೆತ ಏಳುತ್ತಲೇ ಇರುತ್ತದೆ. ಒಂದು ರೀತಿಯ ಮಧುರತೆಯನ್ನು ಆತ ಅನುಭವಿಸಿದ್ದಾನೆ , ಅನುಭವಿಸುತಿದ್ದಾನೆ.... ಯಾಕೆಂದರೆ ಆತನಿಗೆ ಉಳಿದಿರುವುದು- , ಎದೆಯಲ್ಲಿ ಹಚ್ಚಿ ಹೋದ ಮಧುರ ಚೊಚ್ಚಲ ಪ್ರೇಮದ ಅನುಭವದ ನೆನಪು ಮಾತ್ರ. ಅದಕ್ಕೆ ಕಾರಣವಾದ ಪ್ರೇಮಿ ಸಿಗಲಿಲ್ಲ, ಸಿಗುವುದು ಬೇಡವೆಂದೇ ಭಾವಿಸಿದ್ದಾನೆ. ನೆನಪುಗಳ ಉಯ್ಯಾಲೆಯಲ್ಲಿ ಮನಸ್ಸನ್ನು ಮುದಗೊಳಿಸುತ್ತ ಆನಂದಿಸುತ್ತಾನೆ. ಒಂದು ರೀತಿಯಲ್ಲಿ ಆತ ಮನಸ್ಸು ಪ್ರೆತಿಗೆ ಕರಗಿ ಹೋಗುವಂಥಹದ್ದು.


ಧಾರವಾಡದ ಪದವಿ ಕಾಲೇಜೊಂದರಲ್ಲಿ ಬಿ.. ಓದುತ್ತಿರುವ ಆತ, ತನ್ನ ದ್ವಿತೀಯ ವರ್ಷದ ಪರೀಕ್ಷೆಯನ್ನು ೨೦೦೩ರ ಎಪ್ರಿಲನಲ್ಲಿ ಮುಗಿಸಿ , ತನ್ನ ಊರಿಗೆ ಹೋಗುವ ಸಿದ್ದತೆಯಲ್ಲಿದ್ದಾನೆ. ಅಂತಿಮ ವರ್ಷದಲ್ಲಿ ತಾನು ಕಾಲೇಜಿನ UNION LEADER ಆಗುತ್ತೀನೆಂಬುದು ಆತನಿಗೆ ತಿಳಿದಿಲ್ಲ . ಊರಿಗೆ ಹೋಗುವುದೆಂದರೆ ಆತನಿಗೆ ಎಲ್ಲಿಲ್ಲದ ಸಡಗರ. ಪರೀಕ್ಷೆ ಮುಗಿದಿದ್ದರಿಂದ ಮುಂದಿನ ಅಂತಿಮ ವರ್ಷದ ತರಗತಿಗಳು ಪ್ರಾರಂಭವಾಗುವವರೆಗೆ ತನ್ನ ಊರಲ್ಲಿ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಕಾಲ ಕಳೆಯುತ್ತಾ ಉಲ್ಲಾಸದಿಂದಿರಬೆಕೆಮ್ಬುದು ಆತ ಲೆಕ್ಕಾಚಾರ. ಆತ ಊರಿಗೆ ಹೊರಟಾಗ ತನ್ನ ಜೊತೆಗೆ ಸಹಪಾಟಿಯಾದ, ತನ್ನ ಆತ್ಮೀಯನಾದ, ತನ್ನ ಊರಿನವನೇ ಆದ 'ಮನು' ವಿನ ಜೊತೆಗೆ ಧಾರವಾಡದಿಂದ ಹೊರಟು ಹುಬ್ಬಳ್ಳಿ ತಲುಪಿದ. ಅಲ್ಲಿಂದ ಅವರು ರೈಲಿನಲ್ಲಿ ಪ್ರಯಾಣ ಬೆಳೆಸಿ ದಾವಣಗೆರೆ ತಲುಪಬೇಕಿತ್ತು. ದಾವಣಗೆರೆಯಿಂದ ಅವರ ಊರು ೩೫ ಕಿ.ಮೀ. ದೂರದಲ್ಲಿತ್ತು(ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮ).


ಬೆಳಗ್ಗೆ ಗಂಟೆಗೆ ರೈಲು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಾಗ ಆತ & ಆತನ ಸ್ನೇಹಿತ ಮನು ರೈಲು ಹತ್ತಿ ಇಬ್ಬರೂ ಎದುರು-ಬದುರಾದ ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತರು. ರೈಲು ಪ್ರಯಾಣವೆಂದರೆ ಅವರಿಗೆ ಹಾಯಾಗಿ ಹೋಗುವುದು, & ಕಿಟಕಿಯಿಂದ ಕಾಣುವ ಸುಂದರ ತಾಣಗಳನ್ನು ನೋಡುತ್ತಾ ಸವಿಯುವುದಾಗಿತ್ತು. ಇವರು ಕುಳಿತಿದ್ದ ಸೀಟಿನ ಪಕ್ಕದ ಸೀಟುಗಳು ಖಾಲಿ ಇದ್ದವು. ಕುಳಿತುಕೊಳ್ಳುವುದಕ್ಕೆ ಖಾಲಿ ಸೀಟುಗಳನ್ನು ಹುಡುಕುತ್ತಾ ಒಂದು ಕುಟುಂಬ ಬರುತ್ತಿತ್ತು. ಇವರ ಪಕ್ಕದಲ್ಲಿದ್ದ ಕಾಲಿ ಸೀಟುಗಳನ್ನು ನೋಡಿ ಕುಳಿತುಕೊಳ್ಳಲು ನಿರ್ಧರಿಸಿದರು. ಅವರಲ್ಲಿನ ಒಬ್ಬ ಮಧ್ಯ ವಯಸ್ಸಿನ ಮಹಿಳೆ "ಯಾರಾದರೂ ಬರುವವರು ಇದ್ದಾರಾ.. " ಎಂದು ಕುಳಿತಿದ್ದವರನ್ನು ಕೇಳಿದರು. ಅದಕ್ಕೆ ಆತ "ಯಾರೂ ಇಲ್ಲ ಬನ್ನಿ ಕುಳಿತುಕೊಳ್ಳಿ " ಎಂದ. ಆಗವರು ತಮ್ಮ ಲಗೇಜುಗಳನ್ನು ಮೇಲಕ್ಕಿತ್ತು ಕುಳಿತುಕೊಳ್ಳಲು ಸಿದ್ದರಾದರು. ಆತ ಪಕ್ಕ ಮಹಿಳೆ ಕುಳಿತರು, ಮಹಿಳೆಯ ಪಕ್ಕ ಅವರ ಅಕ್ಕನ ಹಿರಿಯ ಮಗಳು ಕುಳಿತರು, ಅವರ ಪಕ್ಕದಲ್ಲಿ ಹುಡುಗಿಯ ಸ್ನೇಹಿತೆ ಕುಳಿತರು. ಆತ ಎದುರ ಮನು ಕುಳಿತಿದ್ದ. ಮನು ಪಕ್ಕದ ಖಾಲಿ ಸ್ಥಳದ ಕೊನೆಯಲ್ಲಿ ಮೊದಲು ಬಂದಿದ್ದ ಮಹಿಳೆಯ ಅಕ್ಕ ಕುಳಿತುಕೊಂಡರು. ಮನು ಪಕ್ಕ ಒಂದು ಸೀಟು ಖಾಲಿ ಇತ್ತು. ಆತ & ಮನು ಇವರೆಲ್ಲರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಸಂದರ್ಭದಲ್ಲಿಯೇ ಆತ ಕಣ್ಣಿಗೆ ಬಿದ್ದದ್ದು ಕೊನೆಯಲ್ಲಿ ಬಂದ ಸುಂದರ ರೂಪು. ಮುಂಜಾನೆಯ ಸೂರ್ಯನ ಬಿಸಿಲಿಗೆ ಚಲ್ಲಿದ ನೀರು ಹೊಳೆ-ಹೊಳೆವ ಹಾಗೆ ಯುವತಿಯ ಚಲುವಿನ ರೂಪು ಆತ ಕಣ್ಣಿಗೆ ತಂಪೆರೆಯಿತು. ಯುವತಿ ಮನು ಪಕ್ಕದಲ್ಲಿದ್ದ ಖಾಲಿ ಸೀಟಿನಲ್ಲಿ ಬಂದು ಕುಳಿತಳು. ಆಕೆಯನ್ನು ನೋಡಿದ ತಕ್ಷಣ ಆತ ಒಂದು ಕ್ಷಣ ಮಾತು ನಿಲ್ಲಿಸಿದ. ಆತ ಅಂತರಂಗ ಯುವತಿಯ ಚೆಲುವಿಗೆ ವಂದನೆ ಸಲ್ಲಿಸಿತು. ತುಂಬಿದ ಯೌವನದಿನ್ದ ಕಂಗೊಳಿಸುತ್ತಿದ್ದ ಆಕೆ ಕಾಲೇಜು ಓದುತ್ತಿರುವ ಯುವತಿಯೇ ಇರಬೇಕೆಂದು ಆತ ಭಾವಿಸಿದ. ಅಷ್ಟರಲ್ಲಿ ಸಮಯ ಬೆಳಗಿನ .೩೦ ಗಂಟೆ ಆಗಿತ್ತು. ರೈಲು ಹೊರಟಿತು.


ಆತ & ಮನು ಅವರೊಂದಿಗೆ ಮಾತನಾಡುತ್ತಿರುವಾಗಲೇ ಆತ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ತನ್ನ ಸ್ಥಳದಲ್ಲಿ ತನ್ನ ವರ್ಷದ ಮಗನನ್ನು , ಮಗುವಿನ ಪಕ್ಕ ತನ್ನ ಅಕ್ಕನ ಮಗಳನ್ನು (ಯುವತಿ) ಕೂರಿಸಿ, ಮನುವಿನ ಪಕ್ಕದ ಸೀಟಿನಲ್ಲಿ ಮಹಿಳೆ ಕುಳಿತರು. ಆತ ಪಕ್ಕದಲ್ಲಿ ಬಾಲಕ ಕೂತಿದ್ದ. ಬಾಲಕನ ಪಕ್ಕ ಯುವತಿ ಬಂದು ಕುಳಿತಾಗ ಆತ ಎದೆಯಲ್ಲಿ ಒಂದು ರೀತಿಯ ಧವಗುಟ್ಟುವಿಕೆ ಪ್ರಾರಂಭಿಸಿತು. ತನಗೆ ಏನಾಗುತ್ತಿದೆ ಎಂಬುದು ಆತನಿಗೆ ತಿಳಿಯಲಿಲ್ಲ. ತನ್ನೊಳಗಾಗುತ್ತಿರುವ ಹೊಸದಾದ ಬದಲಾವಣೆಯನ್ನು ತೋರಗೊಡದೆ ಅವರೊಂದಿಗೆ ಮಾತಾಡುತ್ತಿದ್ದ.


(ಮೊದಲು ಬಂದವರು ಯುವತಿ ಚಿಕ್ಕಮ್ಮ. ನಂತರ ಯುವತಿಯ ಅಕ್ಕ & ಅಕ್ಕನ ಸ್ನೇಹಿತೆ, ಮನು ಪಕ್ಕದ ಸೀಟಿನ ಕೊನೆಯಲ್ಲಿ ಬಂದು ಕುಳಿತವರು ಯುವತಿ ತಾಯಿ.ಯುವತಿಯ ತಾಯಿಯ ತವರು ಮನೆ ಹುಬ್ಬಳ್ಳಿ. ಹುಬ್ಬಳ್ಳಿಯಿಂದ ಯುವತಿ ಚಿಕ್ಕಮ್ಮನ ದಾವಣಗೆರೆಯ ಮನೆಗೆ ಇವರೆಲ್ಲ ರಜೆಯ ಸವಿಯನ್ನು ಅನುಭವಿಸಲು ಹೊರಟಿದ್ದರು).


ರೈಲು ಚಲಿಸುತ್ತಾ ಕುಂದಗೋಳ ನಿಲ್ದಾಣಕ್ಕೆ ಬರುವ ಹೊತ್ತಿಗೆ ಆತನಿಗೆ & ಮನುಗೆ ಅವರೆಲ್ಲಾ ಪರಿಚಿತರಂತೆ ಆತ್ಮೀಯರಾದರು. ಕುಂದಗೋಳದಲ್ಲಿ ರೈಲು ನಿಂತಿತು. ಆತ & ಮನು ಜೊತೆಗೂಡಿ ಉಪಹಾರ ಮಾಡಲೆಂದು ಕೆಳಗಿಳಿದರು. ಉಪಹಾರ ಮುಗಿಸಿ ಬರುವಷ್ಟರಲ್ಲಿ ರೈಲು ಹೊರಟಿತು. ಅವರು ರೈಲು ಹತ್ತಿ ತಮ್ಮ ಸ್ಥಳಗಳಲ್ಲಿ ಬಂದು ಕುಳಿತರು. ಕುಳಿತುಕೊಳ್ಳುವ ಸ್ಥಳದಲ್ಲಿ ಒಂದು ವ್ಯತ್ಯಾಸವಾಗಿತ್ತು. ಆತ ಪಕ್ಕದಲ್ಲಿ ಕುಳಿತಿದ್ದ ಬಾಲಕ ಎದ್ದು ಎದುರುಗಡೆಗೆ ತನ್ನ ತಾಯಿಯನ್ನಾಶ್ರಯಿಸಿ ಕುಳಿತುಕೊಂಡಿದ್ದ. ಆತ ಪಕ್ಕದಲ್ಲಿ ಕುಳಿತಿರುವವರು ಯುವತಿ. ಯುವತಿಯನ್ನು ಪರಿಚಯಿಸಿಕೊಲ್ಲೋಣವೆಂದು ಆತ "ನೀವು ಕಾಲೇಜಿಗೆ ಹೋಗುತ್ತಿದ್ದೀರಾ," ಎಂದು ಯುವತಿಯನ್ನು ವಿಚಾರಿಸಿದ. ಅವನ ಊಹೆ ತಪ್ಪಾಗಲಿಲ್ಲ. ಅದಕ್ಕವಳು "ಈಗತಾನೇ ೧೦ನೆ ತರಗತಿ ಪರೀಕ್ಷೆ ಮುಗಿಸಿದ್ದೇನೆ. ನಂತರ ಕಾಲೇಜಿಗೆ ಹೋಗಬೇಕು." ಎಂದಳು.


ಇಲ್ಲಿಂದ ಪ್ರಾರಂಭವಾಯಿತು, ಇವರಿಬ್ಬರ ಮಾತುಕತೆಯ ವಿಚಾರ. ಆತನಿಗೆ ಮೊದಲಿದ್ದ ಧವಗುಟ್ಟುವಿಕೆ ಕಡಿಮೆಯಾಗಿತ್ತು. ಇವರ ಮಾತು ಹಲವಾರು ವಿಚಾರಗಳತ್ತ ತಿರುಗಿತು. ಯುವತಿಯದು ಬೆಳಗಾವಿ. ಆಕೆ ಬೆಳಗಾವಿಯಲ್ಲಿ ಓದುತ್ತಿದ್ದಾಳೆ. ಯುವತಿ ತಂದೆಯ ಊರು ಕಿತ್ತೂರು. ಆಕೆಯ ತಂದೆಗೆ ಬೆಳಗಾವಿಯಲ್ಲೇ ನೌಕರಿ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು.


ಆತ & ಯುವತಿ ಮಾತು ಹಳಿಯಿಲ್ಲದ ರೈಲಿನಂತೆ ಹರಿಯುತ್ತಿತ್ತು. ಇದರಲ್ಲಿ ವಿಶೇಷವೆಂದರೆ ಇವರಿಬ್ಬರ ಟೇಸ್ಟ್ ಒಂದೇ ಆಗಿದ್ದುದು. ಒಂದು ನಿದರ್ಶನವೆಂದರೆ, ಆತ ಯುವತಿಗೆ "ನಿಮ್ಮ ಕಡೆ ರೊಟ್ಟಿ ಊಟದಂತೆ ನಮ್ಮ ಕಡೆ ಮುದ್ದೆ ಊಟ ಹೆಚ್ಹಾಗಿ ಮಾಡುತ್ತಾರೆ. ಆದರೆ ನನಗೆ ಮುದ್ದೆಗಿಂತ ರೊಟ್ತಿಯೆಂದರೆ ತುಂಬಾ ಇಷ್ಟ. ನಾನು ಧಾರವಾಡದಿಂದ ನಮ್ಮ ಮನೆಗೆ ಹೋಗುತ್ತಿದ್ದೇನೆಂದು ತಿಳಿದರೆ ಸಾಕು ನಮ್ಮ ಮನೆಯಲ್ಲಿ ನನಗಾಗಿ ರೊಟ್ಟಿ ಊಟ ತಯಾರಾಗಿರುತ್ತದೆ", ಎಂದು ಹೇಳಿದ. ಅದಕ್ಕೆ ತಕ್ಷಣ ಆಕೆ "ಹೌದು ನಮ್ಮ ಕಡೆ ರೊಟ್ಟಿ ಊಟ ಹೆಚ್ಹಾಗಿ ಬಳಸುತ್ತಾರೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಚಪಾತಿ ಜಾಸ್ತಿ ಮಾಡ್ತಾರೆ. ನಾನು ಸ್ಕೂಲಿಗೆ ಹೋಗುವಾಗ ಚಪಾತಿ ಊಟ ಒಯ್ಯುತ್ತೇನೆ. ಅಲ್ಲಿ ನನ್ನ ಸ್ನೇಹಿತೆಯರಿಗೆ ಚಪಾತಿಯನ್ನು ಕೊಟ್ಟು ನಾನು ಅವರಿಂದ ರೊಟ್ಟಿಯನ್ನು ತಿನ್ನುತೇನೆ. ರೊಟ್ತಿಯೆಂದರೆ ನನಗೆ ಪಂಚಪ್ರಾಣ" ಎಂದಳು.


ಮುಂದಿನ ಸಂಚಿಕೆಯಲ್ಲಿ ..............


3 comments:

yashavanth said...

ಹುಡುಗ ಹುಡುಗಿರಿಬ್ಬರನ್ನು ಮಾತಿಗೆಳೆಸಲು... ಇ...ಷ್ಟೊಂ......ದು........ ದೊಡ್ಡ ಹಿನ್ನೆಲೆ , ವಿವರಣೆ .... ವಿವರಣೆಗೊಂದು ವಿವರಣೆ.... ಅದಕ್ಕೊಂದು ಸಮಜಾಯಿಷಿ.... ಕಥಾ ಮಾಲೆಯ ಶಕ್ತಿಯೋ ..ಲೋಪವೋ ತಿಳಿಯುತ್ತಿಲ್ಲ....... ಗುರುವೇ... ಅಪರಿಚಿತ ಪ್ರಯಾಣಿಕರ ಸೀಟು ಹಂಚಿಕೆ ಬಗ್ಗೆ ಒಂದು ಕ್ವಿಜ್ ಮಾಡಿದ್ರೆ .... ನಾನಂತು ಫೇಲು.... ಹುಡ್ಗಿ ಬೆಳಗಾವಿ ಭಾಷೆಯಲ್ಲಿ ಮಾತಾಡಿದ್ರೆ ನೀವ್ಯಾಕೆ ಅದರ ಸೊಗಸನ್ನ ಹಾಳುಗೆಡವುತ್ತೀರ...? ಓದುಗರಿಗೆ ಸರಳವಾಗಿಸಲು ಕತೆ ಪಠ್ಯ ಅಲ್ಲ ಅಲ್ವಾ...?
ಸಾಧರಣ ಓದುಗನಾಗಿ ಪ್ರತಿಕ್ರಿಯಿಸಿರುವೆ ಅನ್ಯತಾ ಭಾವಿಸಬೇಡಿ....ಮುಂದಿನ ಮಾಲಿಕೆಯ ನಿರೀಕ್ಷೆಯಲ್ಲಿ....

ಪರಶು.., said...

ಹಾಯ್ ಮಂಜು
ಕಥೆಯನ್ನು ಸಂಪೂರ್ಣ ಓದದೇ ಪ್ರತಿಕ್ರಿಯಿಸುವುದು ತರವಲ್ಲ....
ಆದರೂ

ಕಥೆಯಲ್ಲಿ ಸಂಭಾಷಣೆಯನ್ನು ಗ್ರಂಥಸ್ಥ್ಯಗೊಳಿಸದೇ ಅವರದೇ ಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದ್ದರೆ ಕಥೆಯ ಸೊಗಸು ಹೆಚ್ಚುತ್ತಿತ್ತು ಅನಿಸುತ್ತಿದೆ...
ಭಾಷೆಯ ಶ್ರೀಮಂತಿಕೆ ಉಳಿದಿರುವುದೂ ಆಯಾ ಪ್ರದೇಶದ ಜನರ ಆಡುಮಾತಿನಲ್ಲಾದ್ದರಿಂದ ಅದನ್ನು ಯಥಾವತ್ತು ಬಳಸುವುದರಿಂದ ಬರಹದ ಶ್ರೀಮಂತಿಕೆ ಕೂಡಾ ಹೆಚ್ಚಬಲ್ಲದು...

ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ...

yashavanth said...

ಹಾಯ್... ನನ್ನ ಪ್ರತಿಕ್ರಿಯೆ ಈ ಸಂಚಿಕೆಗೆ ಮಾತ್ರ ಕುರಿತದ್ದಾಗಿದೆ ಎಂದು ಸ್ಪಷ್ಟಪಡಿಸ ಬಯಸುತ್ತೇನೆ... ನಾನೂ ಕೂಡ ಕತೆಯ ಮುಂದುವರೆದ ಭಾಗದ ನಿರೀಕ್ಷೆಯಲ್ಲೇ ಇದ್ದೀನಿ... ಲೇಖಕರು ಯಾರೆಂದು ತಿಳಿದು ಬರಲಿಲ್ಲ... ಲೇಖಕರ ಕಥಾ ಶೈಲಿ ಎಲ್ಲವನ್ನೂ ವಿಶದವಾಗಿ ಅರ್ಥೈಸುವ ಹಠಕ್ಕೆ ಬಿದ್ದವರ ಹಾಗಿದೆ... ಎಂದು ತಿಳಿಸುವುದಷ್ಟೇ ನನ್ನ ಉದ್ದೇಶವಾಗಿತ್ತು... ಅನ್ಯತಾ ಭಾವಿಸಬೇಡಿ.... ಮುಂದಿನ ಮಾಲಿಕೆ ಇದಕ್ಕಿಂತ ಸೊಗಸಾಗಿರ ಬೇಕೆಂಬ ಪ್ರೀತಿಗಾಗಿ ಮಾತ್ರ ನಾನು ಪ್ರತಿಕ್ರಿಯಿಸಿದ್ದು....
ಮತ್ತಷ್ಟು ಪ್ರೀತಿಯಿಂದ... ಯಶವಂತ್...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago