20 July 2009

200 ದಿನಗಳು



ನಿನ್ನೆಗೆ ನಮ್ಮ ಬ್ಲಾಗ್ ಗೆ 200 ದಿನ ತುಂಬಿತು ...




ಜೊತೆಗೆ ಶನಿವಾರವೇ ಅಂದರೆ 199 ನೇ ದಿನವೇ ನಮ್ಮ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ 2000 ಮುಟ್ಟಿತು ...

ನಿಮ್ಮ ಪ್ರೋತ್ಸಾಹ , ಸಹಕಾರ ಇದಕ್ಕೆಲ್ಲ ಪ್ರೇರಕ ಶಕ್ತಿ....... ಧನ್ಯವಾದಗಳು.

ಆಡಳಿತ - ಡಿ ಶಾಖೆಯಿಂದ ನಿಮ್ಮ ಜೊತೆ ಕೊಂಡಿಯಾಗಲು ಬಯಸಿ ಶುರುವಾದ ಬ್ಲಾಗ್,

ಇಂದು ಜ್ಞಾನ ಪ್ರಸಾರದ ಒಳ್ಳೆ ಕೆಲಸ ಮಾಡುವ ಸಾಹಸಕ್ಕೆ ಕೈ ಹಾಕಿದೆ ...


--------------------------

ಸಂಭ್ರಮದ ಹೆಸರಲ್ಲಿ ಕಾಲಹರಣ ಸಲ್ಲ ಅನ್ನೋ ಕಾರಣಕ್ಕೆ

ಇವತ್ತಿನ ದಿನನೇ ಒಂದು (ಭೂಪಟದ ಬಗ್ಗೆ) ಮಾಹಿತಿಯುಕ್ತ POST ಕೊಟ್ಟಿದ್ದೀನಿ ...

-------------------------

ಜೊತೆಗೆ ನನಗೆ ಗೊತ್ತಿರೋವಷ್ಟರ ಮಟ್ಟಿನ ಕಂಪ್ಯೂಟರ್ ಜ್ಞಾನವನ್ನ ನಿಮ್ಮ ಜೊತೆ ಹಂಚಿಕೊಳ್ಳೋ ಮನಸ್ಸಾಗಿದೆ ..

ನಮ್ಮಲ್ಲಿ ನೀವು ಎಷ್ಟೋ ಜನ ಕಂಪ್ಯೂಟರ್ ಬಗ್ಗೆ ಗಾಬರಿ ಮಿಶ್ರಿತ ಭಾವನೆ ಹೊಂದಿದ್ದೀರಿ ...

ಅದನ್ನ ಹೋಗಲಾಡಿಸೋ ಪ್ರಯತ್ನ ನಾನು ತಕ್ಕ ಮಟ್ಟಿಗೆ ಮಾಡೋ ವಿಚಾರ ಮಾಡಿದೀನಿ ...

ಆದರೆ ನನ್ನ ಹತ್ರ ಇರೋದು ಕೇವಲ ಹತ್ತು ದಿವಸ ...

ಯಾಕಂದ್ರೆ ಆಮೇಲೆ ನೀವ್ಯಾರೂ ನನಗೆ ಸಿಗೋದಿಲ್ಲ ...

ರಜೆ ಹಾಕಿ ಮನೇಲಿ ಓದೋ ವಿಚಾರ ಮಾಡಿದೀರಿ ಸಾಕಷ್ಟು ಜನ ...

31 ರ ಒಳಗೆ ಎಲ್ಲ ಮುಗೀಬೇಕು ...

ನನ್ನ ಹತ್ರ ಇರೋ ನೋಟ್ಸ್ ನಿಮಗೆ ಎರಡು ಮೂರೂ COPY XEROX ಮಾಡಿ ಕೊಡ್ತೀನಿ ...

ತುಂಬ ಸರಳವಾಗಿದೆ ... ಅದನ್ನ ಓದಿ ನಿಮಗೆ ತಿಳೀದೇ ಇದ್ರೆ ನನಗೆ e-mail ಮಾಡಿ ...

ನಿಮ್ಮ ಪ್ರಶ್ನೆಗಳನ್ನ ಬ್ಲಾಗ್ ನಲ್ಲೇ ಚರ್ಚಿಸೋಣ ... ಇನ್ನೊಬ್ಬರಿಗೂ ಅದೇ ಸಮಸ್ಯೆ ಇದ್ದೀತು ...

ನಿಮ್ಮ ಪ್ರತಿಕ್ರಿಯೆ ಇಲ್ದೆ ನಾನು ಒಂದು ಹೆಜ್ಜೆ ಮುಂದೆ ಇಡಲ್ಲ...


ಕಡೆಗೆ ನನ್ನ ಪರಿಸ್ಥಿತಿ ...ಸರ್ವಜ್ಞ ಹೇಳೋ ಹಾಗೆ

" ಕೇಳದೆ ಹೇಳುವವನ , ಕರೆಯದೆ ಬರುವವನ
.....................................................................
.......................ಹೊಡೆಯೆಂದ ಸರ್ವಜ್ಞ || "

ಅಂದಂಗೆ ಆದೀತು ಅನ್ನೋ ಭಯ ಅಂತೂ ಇದ್ದೇ ಇದೆ ..


1 comment:

yashavanth said...

ಬ್ಲಾಗಿನ ಸೂತ್ರಧಾರನ್ಗೆ.....
ಮೇಣ್ ಅಭಿಮಾನಿಗಳ್ಗೆ..... ಬರಹಗಾರರ್ಗೆ....
ಕಡ್ಡಾಯ , ಅತಿಥಿ... ಓದುಗ ಮಹಾಶಯರೆಲ್ಲಾರ್ಗೆ....ಇನ್ನೂರನೇ ದಿನದ ಶುಭಾಶಯಗಳು....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago