ಇವತ್ತಿನ ವಿಷಯ ಪರೀಕ್ಷಾ ಪೂರ್ವ ಅವಧಿಯ ತೃಪ್ತಿಕರ ಘೋಷಣೆ ಹೇಗೆ ಅಂತ ?
ನಾವು ನೌಕರರು ಪಾಲಿಸಬೇಕಾದ ನಿಯಮಗಳು , ಒದಗಿಸಬೇಕಾದ ಮಾಹಿತಿಗಳು , ಸಲ್ಲಿಸಬೇಕಾದ ಪ್ರಮಾಣ ಪತ್ರಗಳು , ...etc. ಗಳ ಬಗ್ಗೆ ಒಂದು ಕಿರು ನೋಟ
STEP 1 :
ಎಲ್ಲ ಕಿರಿಯ ಸಹಾಯಕರು ಮೊದಲು ಪರಿಶೀಲಿಸ ಬೇಕಾಗಿರುವ ವಿಚಾರ ಅಂದ್ರೆ ತಾನು ಪ.ಪೂ.ಅವಧಿ ತೃಪ್ತಿಕರ ಘೋಷಣೆಗೆ ಬೇಕಾಗಿರುವ ಕಡ್ಡಾಯ ಪರೀಕ್ಷೆಗಳನ್ನು ಪಾಸು ಮಾಡಿದ್ದೀನಾ ಅಂತ ಪರಿಕ್ಷಿಸಿಕೊಳ್ಳೋದು .....
SECRETRIAT MANUAL PART 1 & 2
ACCOUNTS LOWER
ಮೇಲಿನ ಎರಡೂ ಪರೀಕ್ಷೆಗಳು ಪ.ಪೂ.ಅವಧಿ ತೃಪ್ತಿಕರ ಘೋಷಣೆಗೆ ಕಡ್ಡಾಯ ...
[ ಇದಕ್ಕೂ ಹೆಚ್ಚಿನ ಪರೀಕ್ಷೆ ಪಾಸು ಮಾಡಿದ್ದರೆ ಯಾವ increment ಸಿಗುತ್ತೆ ಅಂತ ಕಾಯಬೇಡಿ ...! ]
STEP 2 :
ಪರೀಕ್ಷೆ ಪಾಸು ಮಾಡಿದ ಮಾತ್ರಕ್ಕೆ ನೀವು .ಪೂ.ಅವಧಿ ತೃಪ್ತಿಕರ ಘೋಷಣೆಗೆ ಅರ್ಹರಾಗುತ್ತೀರಿ ಅಂತ ತಿಳಿದಿದ್ದರೆ ತಪ್ಪು !!
ನಿಮ್ಮ ಬಳಿ ಇರುವ ಆ ಪರೀಕ್ಷೆ ಗಳ ಪ್ರಮಾಣ ಪತ್ರಗಳನ್ನು ಸಿ ಆ ಸು i ಆಡಳಿತ - ಡಿ ಶಾಖೆಯ ಸೇವಾ ಪುಸ್ತಕ
ಸಹಾಯಕರಿಗೆ ನೀಡಿ ಅದನ್ನ ಸೇವಾ ಪುಸ್ತಕದಲ್ಲಿ ನಮೂದಿಸುವ ಕೆಲಸ ಮಾಡಬೇಕು ..
ನೀವೆಲ್ಲ ಈ ಕೆಲಸ ಈಗಾಗಲೇ ಮಾಡಿದ್ದರೆ ..It's Well & Good...ಒಂದು ವೇಳೆ ಮಾಡಿಲ್ಲ ಅಂದ್ರೆ ತಕ್ಷಣ ಕಾರ್ಯ
ಪ್ರವೃತ್ತರಾಗಿ ...
ನಿಮ್ಮ ಬಳಿ ಇರುವ ಆ ಪರೀಕ್ಷೆ ಗಳ ಪ್ರಮಾಣ ಪತ್ರಗಳನ್ನು ಆ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಲಗತ್ತಿಸಿ ಮೇಲೊಂದು
Covering Letter ಹಾಕಿ ನಿಮ್ಮ ಮೇಲಧಿಕಾರಿಗಳಿಂದ Forward ಮಾಡಿಸಿಕೊಂಡು ಇಂದೇ ತಂದು ಆಡಳಿತ - ಡಿ ಶಾಖೆಗೆ ಸಲ್ಲಿಸಿ ...
STEP 3 :
ಮುಂದಿನ ಹೆಜ್ಜೆ ಪ್ರತಿ ಕಿರಿಯ ಸಹಾಯಕ...
ತಾನು ಕೆಲಸಕ್ಕೆ ಸೇರಿ ಎರಡು ವರ್ಷವಾದ ಪ್ರಯುಕ್ತ ,
ತಾನು ನಿಗದಿಪಡಿಸಿರುವ ಎಲ್ಲ ಇಲಾಖಾ ಪರೀಕ್ಷೆಗಳನ್ನ ಪಾಸು ಮಾಡಿರುವ ಪ್ರಯುಕ್ತ ,
ನಿಯಮದಂತೆ ನೌಕರ ಕೆಲಸಕ್ಕೆ ಸೇರಿ ಎರಡು ವರ್ಷಕ್ಕೆ ಪ.ಪೂ.ಅವಧಿ ತೃಪ್ತಿಕರ ಘೋಷಣೆ ಮಾಡಬೇಕಿರುವ ಪ್ರಯುಕ್ತ
[ತನ್ನ ಮೇಲೆ ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲದಿರುವ ಪ್ರಯುಕ್ತ ,-ಇದನ್ನ ನೀವು ಬರ್ಕೋಬಾರ್ದು]
....ತನ್ನ ಪ.ಪೂ.ಅವಧಿ ಯನ್ನು ತೃಪ್ತಿಕರ ಎಂದು ಘೋಷಿಸಬೇಕೆಂದು ಕೋರುವ ಒಂದು Covering Letter ಬರೆದು ನಿಮ್ಮ ಮೇಲಧಿಕಾರಿಗಳಿಂದ Forward ಮಾಡಿಸಿಕೊಂಡು ತಂದು ಆಡಳಿತ - ಡಿ ಶಾಖೆಗೆ ತಲುಪಿಸಬೇಕು .
[ ಇದು Compulsory Step ಅಲ್ಲ ]
STEP 4 :
ನಮ್ಮ ಬ್ಯಾಚ್ ನ ಹುಡುಗರ ( ಹುಡುಗಿಯರ ) ಮಟ್ಟಿಗೆ ಹೇಳೋದಾದರೆ ...
ನಮ್ಮದು ಒಟ್ಟು ನಾಲ್ಕು ಬ್ಯಾಚ್ ...
ಮೊದಲ ಬ್ಯಾಚ್ ಗೆ ಸಂಬಂಧ ಪಟ್ಟಂತೆ ಈಗಾಗಲೇ ಕಡತ ಮಂಡನೆಯಾಗಿ ತನ್ನ ನಿಗದಿತ ದಾರಿ ಯಲ್ಲಿ ಅದು
ಸಾಗಿದೆ ...
ಮುಂದೆ ಬರುವ ಮೂರೂ ಬ್ಯಾಚ್ ನವರಿಗೆ ಕಿವಿ ಮಾತು ಇಷ್ಟು :
೧. ಪ್ರತಿ ಬ್ಯಾಚ್ ನಲ್ಲಿ ಒಬ್ಬಿಬ್ಬರು ಮುಖಂಡ ನಂತೆ ವರ್ತಿಸಿ ಎಲ್ಲ ಕಿರಿಯ ಸಹಾಯಕರುಗಳು ಮೇಲೆ ಹೇಳಿದ 3
STEP ಗಳ ನ್ನು ಪಾಲಿಸುವಂತೆ ನೋಡ್ಕೋಬೇಕು .
೨. ಪ್ರತಿ ಕಿರಿಯ ಸಹಾಯಕ ತನ್ನ ಎರಡು ವರ್ಷಗಳ CR ಗಳನ್ನ ಸಿ ಆ ಸು ii ( ಸಿಬ್ಬಂದಿ -೨) ಶಾಖೆಗೆ ತಲುಪಿಸುವ ವ್ಯವಸ್ಥೆ
ಮಾಡಬೇಕು.
೩. ಕೊನೆಯ ಹಂತದಲ್ಲಿ ಆಡಳಿತ - ಡಿ ಶಾಖೆ ಯಿಂದ ಸಂಬಂಧಿಸಿದ ಕಿರಿಯ ಸಹಾಯಕನ ಶಾಖೆಗೆ SPECIAL
REPORT ನೀಡುವಂತೆ ಕೋರುವ ಒಂದು ಕೋರಿಕೆ ಬರ್ತದೆ ...ಅದನ್ನ ನೀವು ಮುಂಚೆಯೇ ಗ್ರಹಿಸಿ ನಿಮ್ಮ
Computer ನಲ್ಲಿ ಉತ್ತರ ರೂಪದ ಪತ್ರ ತಯಾರಾಗಿರಿಸಿಕೊಂಡಿರಬೇಕು ...ಆಡಳಿತ - ಡಿ ಶಾಖೆ ಯಿಂದ ಪತ್ರ ಬಂದ
ಒಂದು ಗಂಟೆಯೊಳಗೆ ನಿಮ್ಮ ಪ್ರತ್ಯುತ್ತರ ಪತ್ರ ಬಂದರೆ ನಿಮ್ಮ ಜವಾಬ್ದಾರಿ ಕಳೆಯಿತು .
ಇಷ್ಟು ಹಂತಗಳಿವೆ ಒಬ್ಬ ನೌಕರನ ಪ.ಪೂ.ಅವಧಿ ಘೋಷಣೆಯಾಗಬೇಕಾದರೆ ...
ಇನ್ನೂ ಏನಾದರೂ ಸಮಸ್ಯೆ ಸಂಶಯ ಬಂದರೆ ...call : 2677

ಇನ್ನು ಕಿ.ಸ. ಕೆಲಸ ಬಿಟ್ಟು ಮುಂದಿನ ಬೇರೆ ಕೆಲಸಕ್ಕೆ ಹೋಗಬೇಕೆನ್ದಿರುವ ಕಿರಿಯ ಸಹಾಯಕ ಮಿತ್ರರಿಗೆ ಕಿವಿ ಮಾತು :
LIEN ಅನ್ನೋ ಶಬ್ದವೊಂದಿದೆ ಮತ್ತು ಆ ಹೆಸರಿನ ನಿಯಮವೊಂದು ನಮ್ಮ KCSR ನಲ್ಲಿದೆ. ಇದರ ಪ್ರಕಾರ ಒಬ್ಬ ವ್ಯಕ್ತಿ ತಾನು ಮಾಡುತ್ತಿರುವ ಕರ್ತವ್ಯದಿಂದ ಬಿಡುಗಡೆಗೊಂಡು [ ಪ.ಪೂ. ಅವಧಿ ಘೋಷಣೆಯ ನಂತರ ] ಹೊಸದೊಂದು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಆ ಹೊಸ ಕರ್ತವ್ಯದಲ್ಲಿ ಪ.ಪೂ.ಅವಧಿ ಘೋಷಣೆ ಆಗುವವರೆಗೆ ತನ್ನ ಹಿಂದಿನ ಹುದ್ದೆಗೆ ಮರಳುವ ಹಕ್ಕನ್ನು ಹೊಂದಿರುತ್ತಾನೆ / ಉಳಿಸಿಕೊಂಡಿರುತ್ತಾನೆ.
ಹೀಗಾಗಿ ನೀವೂ ಹೊಸದಾಗಿ ಸೇರಬೇಕೆನ್ದಿರುವ ಹುದ್ದೆ ಯಲ್ಲಿ ಏನಾದರೂ ತೊಂದರೆ / ಸಮಸ್ಯೆ ಎದುರಾದಲ್ಲಿ ನಿಮ್ಮ ಈ ಹಳೆಯ ಆರಾಮದಾಯಕ ಹುದ್ದೆ ನಿಮಗಾಗಿ ಕಾದಿರುತ್ತೆ ಅಂತ ಮರೀಬೇಡಿ ...But Only Till The Declaration Of Probationary Period in Your New Job...Subject To Condition Your PP has Been Declared In This Old JA post.
nimmava ,
Revappa
No comments:
Post a Comment