29 June 2009


ಸಂತೋಷ ಆದಾಗ celebrate ಮಾಡೋಕೆ , ಬೇಸರ ಆದಾಗ ರಮಿಸೋಕೆ ಜೀವನದಲ್ಲಿ ಒಬ್ಳು ಗೆಳತಿ ಅನ್ನೋಳು ಇರಬೇಕ್ರಿ . ಅಂತಾ ಗೆಳತಿಯೊಂದಿಗಿನ ಒಡನಾಟ ಇದ್ರೆ ಅದೇನೋ ಜಯಿಸಿದ ಹಾಗೆ ಹುಡುಗರಿಗೆ. ಗೆಳತಿಯ ಹತ್ತಿರ ಮಾತಾಡೋದು ಅಂದ್ರೆ ಏನೋ ಒಂತರಾ ಮನ್ಸಿಗೆ ಹಿತಾ. ಗೆಳೆಯನಿಗಾಗಿ ಮರಗೋ ಹೃದಯ, ಬೊಗಸೆ ತುಂಬಾ ಪ್ರೀತಿ, ಕಣ್ಣುಗಳಲ್ಲಿನ ಆ ಮಿಂಚು, ಹಿತವಾದ ಸ್ಪರ್ಶ ಇವು ಎಲ್ಲೆಲ್ಲೊ ಕರಕೊಂಡು ಹೋಗಿ ಬಿಡುತ್ವೆ ಒಮ್ಮೊಮ್ಮೆ ನಮ್ಮನ್ನ.

ಆದ್ರೆ ಈ ಹುಡುಗಿ ಚೆನ್ನಾಗಿ ಓದಿರೋಳು, ಒಳ್ಳೆ ಮಾರ್ಕ್ಸ್ ತೆಗೆದೋಳು. ಯಾವಾಗಲು ಕಿಲಾ ಕಿಲಾ ನಗ್ತಾನೆ ಇರೋ ಮಗುವಿನ ಮನಸಿನವಳು, ಗುಳು ಗುಳು ಅಂತಾ ಮಾತ ಹೇಳೋ ಚಿನಕುರುಳಿ. ಯಾವಾಗಲು ಜಿಂಕೆ ತರಹ ಅವಸರವಸರವಾಗಿ ಓಡಾಡೋಳು.

ಅದ್ಕೆ ನಾನು --

“ಬಿದ್ದಿಯೇ ಮಾರಾಯ್ತಿ ಹಾಗೆ ಓಡಾಡಿ ಬಿದ್ರೆ ನನ್ನ ಎದೇನಾ ಕಲ್ಲ ತಗೊಂಡು ಜಜ್ಜಿದಾಂಗ ಆಗುತ್ತೆ ಸ್ವಲ್ಪಾ ಮೆತ್ಗೆ” ಕಾಲು-ಗಿಲು ಮುರ್ಕೊಂಡಿಯಾ ಆಮೇಲೆ ನಿನ್ನ್ಯಾರೇ ಮದ್ವೆ ಆಗ್ತಾರೆ ಅಂದ್ರೆ ಸಾಕು ಅದಕ್ಕೂ ಒಂದು ಉತ್ರಾ ರೆಡಿ "ನೀನಿದ್ದಿಯಲ್ಲ ಊರುಗೋಲು ತರಾ, ನಿನ್ನನ್ನೇ ಆಗ್ತೀನಿ" ಅನ್ನೋಳು.

ನನ್ಗೆ ತಿಳಿದ ಮಟ್ಟಿಗೆ ಸಲಿಗೆಯ ಮಾತು, ಮುಂಗೋಪ, ಮನಸಿಗೆ ತೋಚಿದ್ದನ್ನು ಅಡಿಬಿಡೋದು ಇವೆಲ್ಲ ಅವಳ
ಹುಟ್ಟಿನಲ್ಲಿಯೇ ಬೆಳೆದು ಬಂದಂತವು ಅನ್ಸುತ್ತೆ.

ಕೆಲಸ ಮಾಡೋದು, ಕೈ ತುಂಬಾ ಸಂಬಳ ಮಾಡೋದು, ತಾನು ತನ್ನ ಸಂಸಾರ ಹಾಯಗಿರ್ಬೇಕು ಅನ್ನೋದು, ಸಾಯೋದ್ರೊಳಗೆ ನಿನ್ನನ್ನ ಕಣ್ಣಾರೆ ನೋಡೋದು. ಇವು ಮಹಾದಸೆಗಳು ಅವಳಿಗೆ.

ಕವಿಗಳು ಬರೆಯೋ ಕವಿತೆಯ ಸಾಲು ನನ್ನ ಗೆಳತಿ. ಆ ಚಂದಿರನ ಮುಖ, ಜಿಂಕೆಯಂತ ಕಣ್ಣು, ಮೀನಿನಂತ ಹುಬ್ಬು, ಸಂಪಿಗೆಯ೦ತ ಮೂಗು , ಮೊನಾಲಿಸ ನಗು, ರೆಷ್ಮೆಯಂತ ಕೇಶರಾಶಿ ಹೀಗೆ …………..

ಅವಳು ಎಲ್ಲರ ತರಹ ಅಲ್ಲಾ. ಬಾಲ್ಯದ friends ಸಿಕ್ರೆ ಗಂಟೆಗಟ್ಟಲೆ ಮಾತಾಡೋಳು, ಚಿಕ್ಕ ಮಕ್ಳು ಹಿಡಕೊಂಡು ಕಣ್ಣು-ಕೆನ್ನೆ, ಮುಟ್ಟಿ-ಮುಟ್ಟಿ ಅಕ್ಕರೆ ಮಾಡೋಳು, ಬಡವರ ಕಂಡ್ರೆ ಮರುಕ ಪಡೋಳು. ಪೊರ್ಕಿ ಹುಡುಗರ್ನ ಕಂಡ್ರೆ ಬೈಯೋಳು, ತನ್ನಿಂದ ಅವರಿಗೆ ಶಿಕ್ಷೆ ಕೊಡೋಕಾಗಲ್ಲ ಅಂತಾ ತಿಳಿದಾಗ ಮನಸಲ್ಲೇ ಶಪಿಸೋಳು.

ಆದ್ರು ಈ ಪೊರ್ಕಿ ಹುಡುಗ ಸದಾ ತನ್ನ ಜೊತೇಲೇ ಇರ್ಬೇಕು ಅನ್ನೋ ಆಸೆ ಅವಳಿಗೆ.

ಅವಳು ತನ್ನ ಮನಸ್ಸಿನಲ್ಲಿನ ತಳಮಳ ಹೇಳಿಕೊಳ್ಳದೆ ಎಂದೂ ಕಣ್ಣಿಗೆ ಕಣ್ಣು ಹಚ್ಚಿದವಳಲ್ಲ. ಶುಭ ಕಾರ್ಯ ಆದ್ರೆ, ಮನೆಗೆ ಹೊಸ guest ಬಂದ್ರೆ , ಮನೆ ನಾಯಿ ಮರಿ ಹಾಕಿದ್ರೆ ಇಂತಾ ಹತ್ತು ಹಲವಾರು ಸಂಗತಿಗಳನ್ನು ಮೊದ್ಲು ತಿಳಿಸ್ತಾ ಇದ್ದಿದ್ದು ನನ್ಗೆ. ಅಷ್ಟೊಂದು ಹಚ್ಚಿಕೊ೦ಡವಳವಳು.

ನಾವು ಜೊತೆ ಜೊತೆಲೇ ಪಾರ್ಕು, ಫಿಲಂ, ಹೋಟೆಲ್ ಅಂತೆಲ್ಲಾ ಸುತ್ತಿದ್ರುನು ಅವಳೆಂದು ನನ್ನ ಕೈಯನ್ನು ಬಿಟ್ಟವಳಲ್ಲ. ಯಾಕೆ ಅಂತಾ ಕೇಳಿದ್ರೆ?

“ನೀನೆಲ್ಲಿ ನನ್ನ ಬಿಟ್ಟು ಹೋಗಿ ಬಿಡ್ತಿಯೋ ಅಂತಾ ಭಯಾ”.

**************************************************

ಹಾಡೋ ಕೋಗಿಲೆ ಒಮ್ಮಿಂದೊಮ್ಮಿಲೇ ಮೌನ. ಯಾಕೆ ಏನಾಯ್ತು? ಸಪ್ಪಗಿದ್ದಿಯಾ.................

"ನಿಜ ಹೇಳೋ ನಂಗೆ ಮತ್ತೆ ಕಣ್ಣು ಬರುತ್ತಾ".

"ಅವಳು ಹುಟ್ತಾ ಕುರುಡಿ"

ಕಣ್ಣು ಮತ್ತೆ ಬರಲ್ಲಾ ಅಂತ ಹಲವಾರು ವೈದ್ಯರುಗಳ ಅಂಬೋಣ. ಆದ್ರೆ ಏನು ಮಾಡೋದು ವಿಧಿ ಆಟ
ಅಂತವಳನ್ನ ಮಗುವಿನ ತರಹ ನೋಡಿಕೊಂಡು ಬಂದೋನು ನಾನು. ದಿನಾಲೂ ದೇವರನ್ನು ಶಪಿಸೋದೆ ಆಗಿದೆ.




- ಪುಟ್ಟ

3 comments:

ಪರಶು.., said...

ಹಾಯ್ ಪುಟ್ಟಾ...
ಪುಟ್ಟ ಪುಟ್ಟ ಹೆಜ್ಜೆ ಇಟ್ಟಂತೆ ಭಾಸವಾಗುವ ನಿನ್ನ ಪುಟ್ಟ ಬರಹ ತುಂಬಾ ಸೊಗಸಾಗಿದೆ... ಆದರೆ ಅಂತ್ಯವ್ಯಾಕೋ ಅವಸರದಲ್ಲಿ ಮುಗಿದಂತಾಗಿದೆ... ಕೊನೆಯಲ್ಲಿ 'ಅವಳು ಹುಟ್ಟಾ ಕುರುಡಿ' ಎಂಬ ವಾಕ್ಯವೇ ಮೊದಲ ಮಾತುಗಳೆಲ್ಲಾ ಸುಳ್ಳೇನೋ ಎಂದು ಭಾವಿಸಲು ಎಡೆ ಮಾಡಿಕೊಟ್ಟಿದೆ.. "ನಿಜ ಹೇಳೋ ನನಗೆ ಮತ್ತೆ ಕಣ್ಣು ಬರುತ್ತಾ..?" ಎಂಬ ಮಾತಿನಲ್ಲಿ 'ಮತ್ತೆ' ಎಂಬುದು ಈ ಮೊದಲು ದೃಷ್ಠಿ ಇತ್ತು ಎಂಬುದನ್ನು ಸೂಚಿಸುವಂತಿಲ್ಲವೇ..!?

ಇರಲಿ, ನಿಮ್ಮ ಪ್ರಯತ್ನ ಹೀಗೇ ಸಾಗಲಿ...

Unknown said...

'ಪುಟ್ಟ'ಅವರೇ, 'ಹುಡುಗಿಯರ ಪ್ರಪಂಚ'ವನ್ನು ಸ್ವಲ್ಪ ಮಟ್ಟಿಗೆ 'ಕುರುಡಿ ಹುಡುಗಿಯ' ಮೂಲಕ ಅನಾವರಣಗೊಳಿಸಿದ ನಿಮ್ಮ ಬರಹ, ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿದೆ.ಆದರೆ,ಇದಕ್ಕೊಂದು ಚಂದದ 'ಶೀರ್ಷಿಕೆ' ನೀಡಬಹುದಿತ್ತಲ್ಲಾ?

Ferojasha said...

Super ಪುಟ್ಟ......!

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago