24 May 2009

`

ನಮಸ್ಕಾರ ...

ಎಲ್ಲರಿಗೂ ಶುಭ ಮುಂಜಾವು ....

ಇವತ್ತಿನ ವಿಷಯ 'ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ 1.೦'.....

ಏನಪ್ಪಾ ಅದು ಕೊನೆಗೆ 1.೦ ಅಂತ ಬಾಲ ಬೇರೆ ಸೇರಿದೆಯಲ್ಲ ...ಅಂತ ತಲೆ ಕೆಡಿಸಿಕೊಬೇಡಿ ...

ಹಾಗಂದ್ರೆ ....

Software ಜಗತ್ತಿನಲ್ಲಿ Already Existing ಇರೋ ಒಂದು ಜನಪ್ರಿಯ Product ಏನು ಇರುತ್ತಲ್ಲ

ಅದರ Version Release ಮಾಡ್ತಾರೆ ...

ಹಾಗೇನೆ ನಾವೂ ಕೂಡ ಇಲ್ಲಿ ನಮ್ಮ ಈ ಜನಪ್ರಿಯ ಬ್ಲಾಗ್ ನ ಎರಡನೇ ಆವೃತ್ತಿ ಬಿಡುಗಡೆ ಮಾಡೋಣ ...

ಆವೃತ್ತಿ ಎರಡನೇದು...

ಆದರೆ, 1.೦ ಅಂತ ಕರೆದದ್ದು ಅರ್ಥ ಆಗಿದೆಯಲ್ಲ ...OK...

ಈಗ ಮುಂದೆ ಹೋಗೋಣ .

ಈ ಎರಡನೇ ಆವೃತ್ತಿಯಲ್ಲಿ ನಾನು ಈ ಕೆಳಗಿನ ಅಂಶಗಳನ್ನ ADD ಮಾಡಬೇಕು

ಅನ್ಕೊಂಡಿದೀನಿ...ಒಂದ್ಸರಿ ಕಣ್ಣು ಹಾಯ್ಸಿ ...

1. ಹೊಸದಾಗಿ ಕೆಲವೊಂದು ಉಪಯುಕ್ತ Gadget ಗಳನ್ನ ADD ಮಾಡಬೇಕು ಅಂತ ...

 • My Shared File - ಅಂತ ಮೊದಲನೇದು ...ಇದು ನನ್ನ ಬಹಳ ದಿನಗಳ ಕನಸಿನ Gadget ....ಇಲ್ಲಿ ನಾವು ನಮ್ಮಲ್ಲಿರೋ File ಗಳನ್ನ Share ಮಾಡ್ಕೋಬಹುದು ...ಅದು word, excel, ppt, pdf, Single Music File ಯಾವುದಾದರು ಸರಿ ...ನಮ್ಮಲ್ಲಿರೋ ಉಪಯುಕ್ತ ಮಾಹಿತಿ ಹಂಚಿಕೆಗೆ ಅತ್ಯುತ್ತಮ ವೇದಿಕೆ ...ಇದನ್ನ ಒದಗಿಸಿದ Box.net ಗೆ ಕೋಟಿ ಕೋಟಿ ಧನ್ಯವಾದಗಳು ...ಇಲ್ಲಿ ನೀವು ಮಾಡಬೇಕದ್ದಿಷ್ಟು....ನಿಮ್ಮಲ್ಲಿರೋ ಮಾಹಿತಿಪೂರ್ಣ File ( word, excel, ppt, pdf, Single Music File....) ಗಳನ್ನ ನನ್ನ e-mail ID ಗೆ mail ಮಾಡಿ ...ಅವುಕಡ್ಡಾಯವಾಗಿ ಮಾಹಿತಿಯುಕ್ತವಾಗಿರಬೇಕು ..ಸಾಮಾನ್ಯವಾಗಿ e-mail ಗಳಲ್ಲಿ Circulate ಆಗೋ....Awesome Photos, Really Really Nice, ಅಂತ ಬರೋ mail ಗಳಿಗೆ NO ENTRY....ಕಳಸೋ file ನಲ್ಲಿ ನಾಲ್ಕು ಉಪಯುಕ್ತ ಮಾಹಿತಿ ಇರಬೇಕು ...ಅನೇಕ ಪುಸ್ತಕಗಳು [pdf] Portable Document Format ನಲ್ಲಿ ಲಭ್ಯ ಇದಾವೆ ....ಅಂತಹವುಗಳನ್ನ ಕಳಿಸಿ ...Word ಅಲ್ಲಿ ನೀವೇ ಟೈಪ್ ಮಾಡಿರೋ ಮಾಹಿತಿಯನ್ನ ಕಳಿಸಿ ...Excel Sheet ಅಲ್ಲಿ ನೀವು ಮಾಡಿರೋ ಏನೋ ಒಂದು ಉಪಯುಕ್ತದ್ದನ್ನ ಕಳಿಸಿ ಆಯ್ತಾ ? ಆಮೇಲೆ ಅದನ್ನ ತಗೋಳೋದು ಹೇಗೆ ಅಂತ ತಲೆ ಕೆಡಿಸಿಕೊ ಅವಶ್ಯಕತೆಯಿಲ್ಲ ...Just ...ಆ ಮಾಹಿತಿ ಪೆಟ್ಟಿಗೆ ಯಲ್ಲಿರೋ File ಮೇಲೆ Click ಮಾಡಿ ಅದು ಕೇಳುತ್ತೆ Download ಆ ಅಥವಾ Sharing ಆ ....ಅಂತ ...ಸರಿನಾ ?


 • ಇನ್ನೊಂದು ಅತ್ಯುಪಯುಕ್ತ Gadget ಹುಡುಕಿದಿನಿ...ನಿಮಗಿದು ಖಂಡಿತ ಇಷ್ಟ ಆಗಲೇ ಬೇಕು ...Double Click For Answer From Answer.Com...ಬಹಳ ಉದ್ದ ಆಯ್ತು ಹೆಸರು ಅಂತೀರಾ ...ಆದ್ರೆ ಬಳಸೋ ಪದ್ಧತಿ, ಇದಕ್ಕೆ ತದ್ವಿರುದ್ಧ..... ತುಂಬ Simple...ನಿಮಗೆ ಈ ಬ್ಲಾಗ್ ಅಲ್ಲಿ ಯಾವುದೇ ಇಂಗ್ಲಿಷ್ ಶಬ್ದದ ಅರ್ಥ ಗೊತ್ತಾಗಲಿಲ್ಲ ಅನ್ಕೊಳ್ಳಿ...ತಕ್ಷಣ ಆ ಶಬ್ದದ ಮೇಲೆ Double Click ಮಾಡಿ ...ಒಂದು ಅರೆ ಅದೃಶ್ಯ ಸಣ್ಣ ಕಿಟಕಿಯಲ್ಲಿ ಉತ್ತರ I Mean Definition / ಅರ್ಥ ನಿಮ್ಮಮುಂದೆ ....ಆದರೆ ಕನ್ನಡ ಶಬ್ದಗಳಿಗೆ ಈ option work ಆಗೋದಿಲ್ಲ ...ಅದು ಅವಶ್ಯಕತೇನೂ ಇಲ್ಲ ಅಂತೀರಾ ...ಆದ್ರೆ ಒಂದು ವಿಷಯ ನಮ್ಮನ್ನಿಲ್ಲಿ ವಿಚಾರಕ್ಕೀಡು ಮಾಡುತ್ತೆ ...ಇಷ್ಟು ಜನ ಕನ್ನಡಿಗ Software Engineer ಗಳು ದಿನದ 12 ಗಂಟೆ ಕಂಪ್ಯೂಟರ್ ಮುಂದೆ ಮೊಳೆ ಹೊಡ್ಕೊಂಡು ಕೂತಿರ್ತಾರೆ ಇಂಥ ಒಂದು Gadget ಮಾಡ್ಲಿಕ್ಕೆ ಏನು ರೋಗ ...ಗೊತ್ತಿಲ್ಲ ? ನಿಮ್ಮನೇಲಿ ಯಾರಾದರು Software Engineer ಇದ್ರೆ ಕಿವಿಹಿಡಿದು ಕೇಳಿ ಅವ್ರಿಗೆ ....


 • ಇನ್ನೊಂದಿದೆ. ಅದು ಸ್ವಲ್ಪ 'ಅರೆ Gadget' ಥರ ...ಹೆಸರು Inline Comment ಅಂತ ...ಯಾರೇ, ಏನೇ ಬರಿಲಿ, ಈ ಬ್ಲಾಗ್ ಅಲ್ಲಿ ಮತ್ತು ನಿಮ್ಮ target ಶಬ್ದ ಎಲ್ಲೇ ' ಬರ್ಗರ್ ನಲ್ಲಿ ಸಿಕ್ಕಿರೋ tomato ಥರ ಆಗಿದ್ರುನುವೆ ' ಅದರ ಮೇಲೆ ನಿಮ್ಮ comment ಬರಿಬಹುದು ...ಆದರೆ ಒಂದು ನ್ಯೂನ್ಯತೆಇದೆ ...ನೀವು ಪ್ರತಿಕ್ರಿಯೆ ಬಯಸುವ ಶಬ್ದ ಆ ಇಡೀ ಲೇಖನದಲ್ಲಿ Unique ಆಗಿರಬೇಕು ...ನೀವು ಮಾಡಬೇಕದ್ದಿಷ್ಟು : ನೀವು Inline Comment ಮಾಡಬೇಕೆಂದಿರುವ ಶಬ್ದವನ್ನು ನಿಮ್ಮ Mouse Cursor ಬಳಸಿ Select ಮಾಡಿ ...ಮುಂದೆ ತಾನೇ ಅದು ಹೇಳುತ್ತೆ ...ಸ್ವಲ್ಪ Sign IN ಆಗೋ ಕೆಲಸ ಇದೆ ..ನೋಡಿ ಉಪಯೋಗ ಆಗಬಹುದು.

 • ನಮ್ಮ ಬ್ಲಾಗ್ ಗೆ ಭೇಟಿ ನೀಡೋ ವಿದೇಶಿ ಯಾತ್ರಿಕರಿಗೆ ನಿರಾಶರಾಗೋದು ಬೇಡ ಅನ್ನೋ ದೃಷ್ಟಿಯಿಂದ ಇನ್ನೊಂದು Gadget ಗೆ ಅವಕಾಶ ನೀಡೋಣ ಅಂತ ಬಯಸಿದೀನಿ...ನಮ್ಮ ಬ್ಲಾಗ್ ಇರೋದು internet ನಲ್ಲಿ ...ಹೀಗಾಗಿ ನೂರಾರು ಜನ ನೋಡ್ತಾರೆ / ಓದ್ತಾರೆ ....ಇಲ್ಲಿ ಫಾಹಿಯಾನ್ ಆದರೂ ಬರಲಿ ಹ್ಯುಯೆನ್ ತ್ಸಾಂಗ್ ಆದರೂ ಬರಲಿ ಅವರಿಗೆ ತಕ್ಕ ಅತಿಥಿ ಗೌರವ ಸಲ್ಲಿಸೋದು ನಮ್ಮ ಸಂಸ್ಕೃತಿಯ ಪ್ರತೀಕ ... Gadgetನಲ್ಲಿರೋ ಬ್ಲಾಗ್ ಎಲ್ಲ ಆಂಗ್ಲ ಭಾಷೆ ಬರಹಗಳು ಅವರು Dropdown List ಇಂದ ಆಯ್ಕೆ ಮಾಡಿದ ಭಾಷೆಗೆ Transliterate ಆಗೋದರ ಜೊತೆಗೆ ಅದರ Original ಏನಿತ್ತು ಅಂತನೂ ಪಕ್ಕದಲ್ಲಿ ಒಂದು ಅರೆ ಅದೃಶ್ಯ ಕಿಟಕಿಯಲ್ಲಿ ಕಾಣುತ್ತೆ ...

 • ಬ್ಲಾಗ್ ಮೊದಲ ಬಾರಿಗೆ ನೋಡಿ ...ಅಲ್ಲಿ ಬಂದಿರೋ ಯಶವಂತನ ಕಥೆ ಓದಿಯೋ ಅಥವಾ 3 ತಿಯ ಕವನ ಓದಿಯೋ ಅಥವಾ ನಾಗರತ್ನ ಅವರ ಲೇಖನ ಓದಿಯೋ ...." ..!! ಪರ್ವಾಗಿಲ್ಲ ಹುಡುಗರು ಚನ್ನಾಗೇ ಬರಿತಾರೆ " ಅಂತ ಮನಸ್ಸಿನಲ್ಲೇ Certificate ಕೊಟ್ಟು ...ಇನ್ನೂ ಏನೇನು ಬರಿದಿದಾರೆ ಹುಡುಗರು ಅಂತ ಯಾರಿಗಾದ್ರು ಓದೋ ಮನಸ್ಸಾದ್ರೆ ...ಏನು ಮಾಡಬೇಕು ...Older Posts ...Older Posts ಅಂತ Click ಮಾಡ್ತಾ ಹೋಗಬೇಕು ಅಲ್ವಾ?ಇದು ಇಷ್ಟು ದಿನದ ಕಥೆ ಇನ್ನು ಮೇಲೆ ಹೊಸ Gadget ಬಂದಿದೆ ...ಅದರ ಹೆಸರು Random Posts ಅಂತ ...ಇಲ್ಲಿ ಪ್ರಕಟ ಆಗಿರೋ Post ಗಳನ್ನ Random ಆಗಿ ತೋರ್ಸುತ್ತೆ ...ನಾವು ಕೂಡ ಬೇಜಾರಾದಾಗ ಅದನ್ನ Click ಮಾಡಿದ್ರೆ ಒಳ್ಳೆ TimePass ಮಾಡಬಹುದು ...

 • ಹೀಗೆ ಬಂದ ವಿದೇಶಿ ಯಾತ್ರಿಕರನ್ನ ಸುಮ್ಮನೆ ಕಳಿಸಲಿಕ್ಕಾಗುತ್ತಾ...? ಅವರು ಓದಿ ನೋಡಿದ ನಮ್ಮ ಬ್ಲಾಗ್ ಬಗ್ಗೆ ಮೆಚ್ಚುಗೆ ಸೂಚಿಸೋ ಮನಸ್ಸಾದ್ರೆ ಅಲ್ಲೇ ಪಕ್ಕದಲ್ಲೇ ಇನ್ನೊಂದು Option ಇರಲಿ ಅಂತ ...ಅದು Rating ನೀಡೋ ಒಂದು ಪುಟ್ಟ Gadget ...ನೀವು ಬ್ಲಾಗ್ ಗೆ ಐದಕ್ಕೆ ಎಷ್ಟು ಅಂಕ / star ಕೊಡ್ತೀರ ಅಂತ ಕೇಳಿ ತಗೊಳ್ಳುತ್ತೆ .

 • ನಮ್ಮಲ್ಲೇ ಕೆಲವು Su Do Ku ಪ್ರಿಯರು ಇರಬಹುದು ..ಅವರಿಗಾಗಿ Su Do Ku ಇದೆ ..ಇಲ್ಲಿ ಅನೇಕ Ineteresting Options ಗಳಿದಾವೆ....ನೀವು ಮೊದಲ ಅಂಕಿ ತುಂಬಿದ ತಕ್ಷಣ ನಿಮ್ಮ ಸಮಯ ಶುರು ಆಗುತ್ತೆ ...ಕೊನೆ ಅಂಕಿ ತುಂಬಿದ ತಕ್ಷಣ Stop ಆಗುತ್ತೆ ..ಅಂದ್ರೆ ನೀವು ಲೆಕ್ಕ ಬಿಡಿಸಲಿಕ್ಕೆ ತೆಗೆದುಕೊಂಡ ಸಮಯ ಗೊತ್ತಾಗುತ್ತೆ ...ಮತ್ತೆ Difficulty Level ಗಳು ಇವೆ ...ನೀವು ಲೆಕ್ಕದ ಅರ್ಧಕ್ಕೆ ಬಂದಾಗ " ಎಲ್ಲೋ ತಪ್ಪಾಯ್ತು ..." ಅಂತ ಅನ್ನಿಸಿದರೆ ಅದೇ ಲೆಕ್ಕವನ್ನ Reload ಮಾಡಬಹುದು ...ಬೇಡ ಅಂದ್ರೆ ಹೊಸ Game ತಗೋಬಹುದು ...ಮತ್ತೆ ನಿಮ್ಮ ಉತ್ತರ ಸರಿಯೋ ತಪ್ಪೋ ಅಂತ Check ಮಾಡಬಹುದು ...ಇದು ಏನೂ ತಿಳಿಲಿಲ್ಲ ಅಂದ್ರೆ Help ಇದ್ದೇ ಇದೆ ....

 • ಇನ್ನು ಒಂದನ್ನ ಜಾಲಾಡಿದೀನಿ....ಅದಕ್ಕೆ ಹರಟೆ ಕಟ್ಟೆ ಅಂತ ಹೆಸರಿಟ್ಟಿದೀನಿ ..ಇಲ್ಲಿ ನೀವು ನನ್ನ ಜೊತೆ, ನಾನು Online ಇದ್ದಾಗ ಹರಟಬಹುದು / ಅಥವಾ ಬ್ಲಾಗ್ ಗೆ ಸಂಭಂಧಿಸಿದಂಗೆ ನಿಮ್ಮ ಪ್ರಶ್ನೆಗಳನ್ನ ಕೇಳಬಹುದು... ನಿಮ್ಮ Computer ಮುಂದೆ ಕುತ್ಕೊಂಡೆ...ಇದು Google Talk...So ನೀವು ನಿಮ್ಮ g-mail ID ಬಳಸಿ ನನ್ನ ಜೊತೆ ಮಾತಾಡಬಹುದು ...ಈಗ ನಿಮಗೆ ಗೊತ್ತಾಗಿರಬಹುದು GMAIL Importance.

ಇವೆಲ್ಲ ಕ್ಷಣದ ವರೆಗೆ ದೊರಕಿರೋ ಅಂಥವುಗಳು...
ಪ್ರತಿ
ದಿನ
,
ತನ್ನ ಜೋಳಿಗೆಯಲ್ಲಿ
ನಮಗೆ ಅಂತ ಏನೋ ಒಂದನ್ನ ತಂದಿರುತ್ತೆ
,
Gift
ಆಗಿ ...

ಅವುಗಳಲ್ಲಿ
ನಮಗೆ ಬೇಕಾಗೋ ಯಾವುದಾದರು ಹೊಸ Gadget ಸಿಕ್ರೆ ಬಳಸೋಣ ...ಆಯ್ತಾ ?
2. ಇನ್ನು ಕೆಲವು ಸ್ವಂತ ಶ್ರಮ ಬಯಸೋ ಕೆಲಸಗಳಿಗೂ ಕೈ ಹಾಕಬೇಕು ಅಂತಿದಿನಿ ...

ಅವುಗಳಲ್ಲಿ ಕೆಲವು ನಮ್ಮ ಕನ್ನಡ ಸಾಹಿತ್ಯಕ್ಕೆ ಕೈ ಮುಗಿಯುವ ಕಾರ್ಯಗಳು ... • ಇಲ್ಲಿ ಬಲಭಾಗದಲ್ಲಿ MotivationalQuotes, Words of Wisdom, Quotation of The Day ಅಂತೆಲ್ಲಇದೆಲ್ಲ ಅದನ್ನ ತೆಗೆದು ಹೊಸತಾಗಿ ಹಿತ್ತಲ ಗಿಡದಿಂದ ಮದ್ದು ಮಾಡೋಣ ಅನ್ಕೊಂಡಿದಿನಿ ...ಇವೆಲ್ಲ ದೈನಂದಿನ Update ಬಳಸೋ ವಿಷಯಗಳು ...ಆದರೆ ವಾರದ ಒಂದು ದಿನ ಮಾತ್ರ ..ಅಂದ್ರೆ ಸೋಮವಾರ ಕಗ್ಗ , ಮಂಗಳವಾರಸರ್ವಜ್ಞ ವಚನ , ಬುಧವಾರ ಚೌಪದಿ , ಗುರುವಾರ ಗಾದೆ, ಶುಕ್ರವಾರ ಶರಣರ ವಚನ, ಶನಿವಾರ ಸುಭಾಷಿತ....ಹೀಗೆ. ಏನಂತೀರಾ?
 • ಇನ್ನು ಈ ಕಡೆ Wooden Shelf ನಲ್ಲಿ ವಾರಕ್ಕೊಂದು ಇಂಗ್ಲಿಷ್ ಪುಸ್ತಕ ಪರಿಚಯ ಮುಂದುವರಿತದೆ ....ಅದರ ಜೊತೆಜೊತೆಗೆ ವಾರದ ಒಂದು ದಿನ ಒಂದು ಕನ್ನಡ ಪುಸ್ತಕ ಪರಿಚಯ ಇಟ್ಕೊಳೋಣ ಅಂತ ಇನ್ನೊಂದು ವಿಚಾರ..ಶುಕ್ರವಾರ ಆ ಕೆಲಸ ಇಟ್ಕೊಳೋಣ ...ಯಾಕಂದ್ರೆ ಅವತ್ತು ಅಥವಾ ಮರುದಿನ ಪುಸ್ತಕನ ಗ್ರಂಥಾಲಯದಿಂದ ಪಡೆದು ರವಿವಾರ ಓದಬಹುದು ...ಇಷ್ಟವಿದ್ದವರು / ಇನ್ನೂ ಅದನ್ನ ಓದದೆ ಇರೋರು ...ಓಕೆ? ಆದರೆ ನಾನು ಮಾತ್ರ ಈ ಕೆಲಸಮಾಡಬೇಕು ಅಂತ ಯಾವ ನಿಬಂಧನೆ , ಕಟ್ಟಳೆ ಇಲ್ಲ ...ಎಲ್ರೂ ತಮಗಿಷ್ಟವಾಗಿರೋ ಪುಸ್ತಕದ ಕಿರು ಪರಿಚಯ & 2 Line ವಿಮರ್ಶೆ ಬರಿಬಹುದು , ಬರೀಬೇಕು , ಬರಿಲೇಬೇಕು ... • ಈ ವಾರ ಬೆಂಗಳೂರಿನಲ್ಲಿ ನಡೆಯೋ ಪ್ರಮುಖ, ಅನ್ನೋದಕ್ಕಿನ್ನ ಆಸಕ್ತಿದಾಯಕ ಕಾರ್ಯಕ್ರಮಗಳ ಪಟ್ಟಿ..ಶಾಸ್ತ್ರೀಯ ಸಂಗೀತ ಕಚೇರಿ , ಚಿತ್ರಕಲೆ ಪ್ರದರ್ಶನ , ಚಲನಚಿತ್ರೋತ್ಸವ , ಕಾರ್ಯಾಗಾರಗಳು (workshop) , ...ಹೀಗೆ ಉಪಯೋಗ ಮಾಡ್ಕೊಬಹುದದಂಥ ಕಾರ್ಯಕ್ರಮಗಳ ಪಟ್ಟಿ ಪ್ರತಿ ಸೋಮವಾರ ನೀಡಬಹುದು ...ಏನಂತೀರಾ

 • ಪ್ರತಿ ತಿಂಗಳ ಮೊದಲ ದಿನ ಈ ತಿಂಗಳಲ್ಲಿ ನಡೆಯಲಿರೋ Sports Event ಗಳ ಪಟ್ಟಿ ಮಾಡಬಹುದು ..ಕ್ರಿಕೆಟ್ , ಹಾಕಿ , ಫುಟ್ಬಾಲ್, ಚೆಸ್ ....ಹೀಗೆ

 • ಪ್ರತಿ ಗುರುವಾರ ಮರುದಿನ ನಗರದಲ್ಲಿ ಬಿಡುಗಡೆ ಆಗಲಿರೋ 'ಪ್ರಮುಖ' ಚಿತ್ರಗಳ ಪಟ್ಟಿ ...{ ಈ ಪಟ್ಟಿ ನನ್ನ ಕಾಲೇಜು ದಿನಗಳ Adventure ಗಳಿಗೆ Tribute ಅಂತ ವಿಚಾರ ಮಾಡಿದಿನಿ ...ಆ ದಿನಗಳಲ್ಲಿ ಒಂದೇ ದಿನ ನಾಲ್ಕೂ ಪ್ರದರ್ಶನಗಳನ್ನ ಒಂದರ ಹಿಂದೆ ಒಂದರಂತೆ ಯಾವುದೇ Flaw ಇಲ್ಲದೆ ಪೂರೈಸಿದ ವಿರಳ ಸಾಧನೆ ನನ್ನದು ...ನಿಮ್ಮಲ್ಲಿ ಅನೇಕ ಜನ ಈ ಥರದ ಸಾಧನೆಗೆ ಭಾಜನರಾಗಿದ್ದಿರಿ ಅಂತ ನಾನು ಕೇಳಿ ಬಲ್ಲೆ ...ನಿಮ್ಮ ಆ ದಿನಗಳ ಮೆಲುಕಿಗೆ ಇದೊಂದು tribute }

 • ಇನ್ನು ಒಂದು ಚಿತ್ರ ಕೊಟ್ಟು ನಿಮ್ಮ ಭಾವನೆಗಳನ್ನ ಹರಿಯಬಿಡಿ ಅಂತ ಹೇಳಬಹುದು ...ಕಳೆದ ಸಾರಿ ಥರ ಇಡಿ ಚಿತ್ರ ಗುಚ್ಛ ವನ್ನೇ ನೀಡೋದು ಬೇಡ ...ಆರು ಜನ ಬರೆದರೂ ಒಂದು ವಾರ ಹೌಸ್ಫುಲ್.ಇಲ್ಲಿ ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ಆ ಚಿತ್ರವನ್ನ ನೋಡ್ತಾರೆ ..ನೀವು ಜೀವನದ ವಿವಿಧ ಮಗ್ಗುಲುಗಳನ್ನ ಆಗ ಕಾಣಬಹುದು ..

 • ಆಮೇಲೆ ..ನೀವು ಓದಿದ ಈ ವಾರದ ಒಂದು Miss ಮಾಡಬಾರದು ಅನ್ನೋವಂಥ ಲೇಖನ ಏನಾದ್ರು ಇದ್ರೆ ತಕ್ಷಣ ತಿಳಿಯಪಡಿಸಬಹುದು ...ಅದು ಬೆಳಗೆರೆ ಬಾಟಮ್ ಐಟಂ ಆಗಿರಬಹುದು ...ಪ್ರತಾಪ್ ಬೆತ್ತಲೆಜಗತ್ತಾಗಿರಬಹುದು...ಜೋಗಿಯ ಕಥೆಯಾಗಿರಬಹುದು ....ನಾಗತಿಹಳ್ಳಿ ಹೊಳೆ ದಂಡೆ ಯಾಗಿರಬಹುದು ...ಒಂದುವಿಷಯ ಇಲ್ಲಿ ಗಮನ ಕೊಡಬೇಕಾದ್ದು ಅಂದ್ರೆ ಆ ಪತ್ರಿಕೆ Archives ಹೋಗೋದಕ್ಕಿನ್ನ ಮೊದಲುನಿಮ್ಮ ಸುದ್ದಿ ತಲುಪಬೇಕು ...ಇನ್ನೊಂದು ವಿಷಯ ಆ ಲೇಖನಗಳನ್ನ ನೀವು ಎರಡು ಉದ್ದೇಶಗಳಿಂದ ಇಲ್ಲಿಪರಿಚಯಿಸಬಹುದು ..ನಿಮ್ಮಂಥವೆ ವಿಚಾರಗಳನ್ನ ಹೊಂದಿರೋ ಸ್ನೇಹಿತರಿಗೆ & ನಿಮಗೆ ತದ್ವಿರುದ್ಧವಾದವಿಚಾರಗಳನ್ನ ಹೊಂದಿರೋ ಸ್ನೇಹಿತರಿಗೆ... ಮೊದಲನೆಯದು ನೋಡು ನಮ್ಮ ವಿಚಾರಗಳಿಗೆ ಇಂಬು ಕೊಡೊ ಥರ ಬರೆದಿದಾನೆ ಅಂತ ..ಎರಡನೆಯದು ಛೇಡಿಸಲಿಕ್ಕೆ..ನೋಡು ನಿನ್ನ ವಿಚಾರಗಳು ಇಲ್ಲಿ ತಪ್ಪಿವೆ ಈಗಲಾದರೂ ಇದನ್ನಓದಿ ತಿದ್ದಿಕೋ ಅಂತ ...ಇದು ಹೇಗೆ ಪ್ರಮುಖ ಪತ್ರ ವಹಿಸುತ್ತೆ ಅಂದ್ರೆ ನೀವು ಕಾಲೇಜು ದಿನಗಳಲ್ಲಿ ಅಥವಾ ದಿನೇ ದಿನೇಬೆಳಿತಾ ಬೆಳಿತಾ ಕೆಲವು ಸಿದ್ಧಾಂತಗಳನ್ನ್ ಬೆಳೆಸಿಕೊಂಡಿರುತ್ತಿರಿ...ಆದರೆ ಕೆಲವೊಂದು ಸಂದರ್ಭಗಳಲ್ಲಿ ಉದಾಹರಣೆಗೆ ನಿಮ್ಮ ಗೆಳೆಯನ ಜೊತೆ ವಾದ ಮಾಡಬೇಕಾದರೆ ನಿಮಗೆ ಒಂದು imp. Point ನಿಮ್ಮ ಮಾತನ್ನ / ವಾದವನ್ನ Justify ಮಾಡುವಂಥದ್ದು ಹೊಳೆಯೋದಿಲ್ಲ ...ಅದನ್ನ ನೀವು ಈ ಪ್ರಬುದ್ಧರಿಂದ ಎರವಲು ಪಡೆದು ಅವರನ್ನ ಮತ್ತೆ ಛೇಡಿಸಬಹುದು ....ಸರಿಯಾ ತಪ್ಪಾ ?


ಇಲ್ಲಿ ಬಹು ಮುಖ್ಯವಾದ ವಿಷಯ ಅಂದ್ರೆ ....

ಮೇಲೆ ನಾನು ಕೊಟ್ಟಿರೋ ಎಲ್ಲ ಅಂಶಗಳನ್ನ,

ನೀವುಗಳು

ಬ್ಲಾಗ್ ಸುಧಾರಣೆಗೆ ರೇವಪ್ಪ ನೀಡಿರೋ ಸಲಹೆಗಳು ಅಂತ ತೆಗೆದುಕೊಳ್ಳತಕ್ಕದ್ದು...

ಇವು ಯಾವುವೂ ನಿರ್ಧಾರಗಳಲ್ಲ...

ಸಲಹೆಗಳಿಗೆ ನಿಮ್ಮ ಸಹಿ ಬಿದ್ರೆನೆ ಮುಂದೆ ಎಲ್ಲ ...ನೀವ್ಯಾರೂ ನಿಮ್ಮಲ್ಲಿ ನೀವೇ ಅಧೈರ್ಯ ತಂದುಕೊಳ್ಳುವಂಥ ಕೆಲಸ ಮಾಡಬೇಡಿ ...

"ನನಗೆ ಇವೆಲ್ಲ ಗೊತ್ತಿಲ್ಲಪ್ಪ...ಏನೋ ಹುಡುಗರು ಒಳ್ಳೆ ಕೆಲಸ ಮಾಡ್ತಿದಾರೆ ... ಮಾಡ್ಲಿ "

ಅಂತ ದೂರ ಉಳಿಯೋದು ....

"ನನಗೂ ಒಂದೆರಡು ಸಲಹೆ ಕೊಡಬೇಕು ಅಂತ ಇದೆ ...ಆದ್ರೆ ...."

ಇವೆಲ್ಲ ಇನ್ನು ಮೇಲೆ ಬಿಟ್ಬಿಡಿ ...

ಈ ಕಗ್ಗವನ್ನ ಮನನ ಮಾಡ್ಕೊಳಿ ...
ನಿನಗಿರದ ಕಣ್ಬಾಯಿ ವಾಲ್ಮೀಕಿಗೆನ್ತಾಯ್ತು ?

ಮುನಿಕವಿಗೆಂತು ನಿನ್ನೆದೆಯೊಳೆಡೆಯಾಯ್ತು ?

ಘನಮಹಿಮನೋಳ್ ಜ್ವಲಿಸುತಿತರರೊಳು ನಿದ್ರಿಸುತೆ

ಅನಲನೆಲ್ಲರೊಳಿಹನು - ಮಂಕುತಿಮ್ಮ
1 comment:

niharika said...

ನಿಮ್ಮ ವಿಚಾರಗಳು ತುಂಬಾ ಚೆನ್ನಗಿದೆ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  6 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  8 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago