08 November 2012

ಪುನರಾರಂಭದ ಆಶಯದೊಂದಿಗೆ...

ನಮಸ್ತೆ...

ದಿ.:07.11.2012, ಬುಧವಾರ ದ ದಿನ ನೆನಪಿನಲ್ಲಿಡಬೇಕಾದ ದಿನಾ ಆಗಿ ಹೋಯ್ತು ನೋಡಿ.

----------
:: STAT FACTS ::

ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾದ 139 ಜನರಲ್ಲಿ
118 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು.
--
ತದನಂತರದಲ್ಲಿ 31 ಜನ ಬೇರೆ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದಾರೆ.
--
02 ಜನ ವಯಸ್ಸಲ್ಲದ ವಯಸ್ಸಲ್ಲಿ ಇಹಲೋಕ ತ್ಯಜಿಸಿದ್ದಾರೆ.
--

ಈಗ 139+12(ಹೆಚ್ಚುವರಿ ಆಯ್ಕೆ ಪಟ್ಟಿ) ಜನ ಕಿರಿಯ ಸಹಾಯಕರಾಗಿ ಆಯ್ಕೆಯಾಗಿ ಬಂದ ನಾವುಗಳು 
ಇದೀಗ 01.01.2012ರಂದು ಪ್ರಕಟಗೊಂಡ  ಜ್ಯೇಷ್ಠತಾ ಪಟ್ಟಿಯಲ್ಲಿ 
87 ಜನ ಕಿರಿಯ ಸಹಾಯಕರಾಗಿ ಉಳಿದುಕೊಂಡಿದೀವಿ.
(87 ಜನರ ಪೈಕಿ 54 ಜನ ಸಹಾಯಕರಾಗಿ ಮುಂಬಡ್ತಿ ಪಡೆದಿದ್ದು 22+9=33 ಜನರಿಗೆ ಇನ್ನೇನು ಬಡ್ತಿ ಸಿಗಲಿದೆ.)
--
ಇಂತಿಪ್ಪ 87 ಜನ ಕಿರಿಯ ಸಹಾಯಕರುಗಳ ಪೈಕಿ ನಿನ್ನೆ ಹಾಜರಾಗಿದ್ದು 64 ಜನ.
ಜೊತೆಗೆ
ಬೇರೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದ 09 ಜನ ನಮ್ಮ ಸಂಗಡ ನಿನ್ನೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಹೀಗಾಗಿ ನಿನ್ನೆಯ ಸಂಭ್ರಮಕ್ಕೆ ಭರ್ತಿ 73 ಜನ ಸಾಕ್ಷಿಯಾದಂತಾಯ್ತು.

----------


ಇನ್ನು ಸಭೆಯ ಯಶಸ್ಸಿನ ಬಗೆಗೆ ಹೇಳಬೇಕಾದ ಅಗತ್ಯವಿಲ್ಲ. ಸ್ನೇಹದ ಕರೆಗೆ ಓಗೊಟ್ಟು ಬಂದಿದ್ದ ಎಲ್ಲ ಕಿರಿಯ ಸಹಾಯಕ ಮಿತ್ರರು ಈ ಯಶಸ್ಸಿನ ರೂವಾರಿಗಳು. ಮುಂಬರುವ ದಿನಗಳಲ್ಲಿ 60 ದಿನಗಳಿಗೊಮ್ಮೆ ಈ ರೀತಿಯ, ಅಲ್ಲ ಅಲ್ಲ, ಇದಕ್ಕಿಂತ ಉತ್ತಮವಾಗಿ ಆಯೋಜನೆಗೊಂಡ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾಗೋಣ.

ಈ ಬರಹ ಸುಮ್ಮನೆ ಹರಟೆ ಬರಹವಾಗೋದನ್ನ ತಪ್ಪಿಸಲು, ನಾವೆಲ್ಲ ಒಂದು ತಂಡವಾಗಿ ಮಾಡಬಹುದಾದ - ನನಗೆ ಸರಿ ಅನ್ನಿಸಿದ ಕೆಲವು ಚಟುವಟಿಕೆಗಳನ್ನು SUGGEST ಮಾಡ್ತೀನಿ. ನೀವೂ ಕೂಡ ನಿಮ್ಮ ಸಲಹೆಗಳನ್ನು COMMENTಗಳ ಮೂಲಕ SUGGEST ಮಾಡ್ತೀರಾ ಎಂಬ ಆಶಯದೊಂದಿಗೆ :

  • STUDY CIRCLE ನೆಪದಲ್ಲಿ ಪ್ರತಿ ವಾರ ತರಹೇವಾರಿ ವಿಷಯಗಳ ಚರ್ಚೆಗೆ  ನಾವೆಲ್ಲ ಒಟ್ಟಾಗಬಹುದು. ROTATION ಪದ್ಧತಿ ಅನುಸರಿಸಿ ಪ್ರತಿ ವಾರ ಒಬ್ಬ ವ್ಯಕ್ತಿ ಚರ್ಚೆಯ ಉಸ್ತುವಾರಿ ವಹಿಸಿಕೊಳ್ಳುವುದು. ವಾರದಿಂದ ವಾರಕ್ಕೆ ಚರ್ಚೆಯ ಸಾರ್ಥಕತೆಯನ್ನು ಸುಧಾರಿಸುತ್ತ ಹೋಗುವುದು ಗುರಿ.
  • ARTICLE SHARING - ನಮ್ಮಲ್ಲಿ ಬಹುತೇಕರು ದಿನಂಪ್ರತಿ ದಿನಪತ್ರಿಕೆ ಓದುವ ಹವ್ಯಾಸ ಹೊಂದಿರೋದು ತಿಳಿದಿರುವ ವಿಚಾರ. ಹೀಗೆ ಪತ್ರಿಕೆ / ವಾರ ಪತ್ರಿಕೆ / ಪುಸ್ತಕ ಓದುವಾಗ '' ಕಡ್ಡಾಯ ಓದು'' ಎನ್ನಿಸುವ ಲೇಖನ - ಪುಸ್ತಕ -  ಬರಹಗಳ ಬಗ್ಗೆ ನಮ್ಮ  ಇನ್ನುಳಿದ ಸ್ನೇಹಿತರೊಂದಿಗೆ ಆ ವಿಚಾರವಾಗಿ ಹಂಚಿಕೊಳ್ಳುವುದು.
  • ಹೊಸ ಜ್ಞಾನ - ವಿಷಯ - ವಿಚಾರ ಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದು. ಈ 'ಹಂಚಿಕೆ'ಗೆಂದೇ ಒಂದು FACEBOOK ಪುಟ ತೆರೆಯಲಾಗಿದ್ದು, ನಿಮಗೆ ಅದರ ವಿಳಾಸವನ್ನ ನಾಳೆ ತಿಳಿಸುತ್ತೇನೆ.
  • ಇನ್ನು ಸ್ವತಃ ಲೇಖನ ಬರೆದು ನಮ್ಮ ಜ್ಞಾನಕ್ಕೆ ಸಾಣೆ ಹಿಡಿಯುವುದು - ಇದು ನಿರಂತರ ಚಟುವಟಿಕೆಯಾಗಿದ್ದು ನಿಮ್ಮ ತಲೆಯಲ್ಲಿ ಮೂಡಿ ಬರುವ ವಿಚಾರಗಳಿಗೆ ಅಕ್ಷರ ರೂಪ ನೀಡಿ , ನಿಮ್ಮಲ್ಲಿ ಸುಪ್ತವಾಗಿರುವ ಬರಹಗಾರನೊಬ್ಬನನ್ನ ಸದಾ ಜಾಗೃತವಾಗಿಡುವುದು ಈ ಸಲಹೆಯ ಹಿಂದಿರುವ  ಉದ್ದೇಶ. ನೋಡಿ , ನನಗೆ ಲೇಖನ ಬರೆಯುವಷ್ಟು ಶಬ್ದ ಸಂಪತ್ತಿಲ್ಲ  ಎಂದೆಲ್ಲ ಅಲವತ್ತುಕೊಳ್ಳುವವರು ಕಡೇ ಪಕ್ಷ ಬರೆದಿರುವ ಲೇಖನಗಳಿಗೆ ಮೆಚ್ಚುಗೆ / ಟೀಕೆ ವ್ಯಕ್ತಪಡಿಸುವಷ್ಟು ಶಬ್ದಗಳನ್ನಾದರೂ ಒಟ್ಟುಗೂಡಿಸಿಕೊಳ್ಳಲು ವಿನಮ್ರ ಮನವಿ.
  • ಇಂಥ ಯಾವುದೇ ಹುಚ್ಚಾಟಗಳಿಗೆ ನನ್ನಲ್ಲಿ ಆಸಕ್ತಿಯೇ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರು, ವಯಸ್ಸಿನಲ್ಲಿದ್ದಾಗ ಇದ್ದಂಥ ಆಸಕ್ತಿಗಳನ್ನ ಜ್ಞಾಪಿಸಿಕೊಳ್ಳುತ್ತಾ ಕಾಲ ಕಳೆಯಲು ಅಡ್ಡಿಯಿಲ್ಲ.
ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,
ರೇವಪ್ಪ

2 comments:

ಪರಶು.., said...

ಆತ್ಮೀಯ ಸ್ನೇಹಿತರೇ...,
ನಮ್ಮಲ್ಲಿ ದಿಢೀರನೆ ಇಂತಹದೊಂದು ಬೆಳವಣಿಗೆ ಆಗುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲ. ಹೊಸತನದಲ್ಲಿ ಅಂದ್ರೆ 2007 ರಲ್ಲಿ ನಾವು ಸಚಿವಾಲಯಕ್ಕೆ ಕಿರಿಯ ಸಹಾಯಕರಾಗಿ ಬಂದಾಗ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ನಾವು ಕೆಲವರು ಎಂ.ಎಸ್.ಬಿ. ಪಾರ್ಕ್ ನಲ್ಲಿ ಕುಳಿತು ಹರಟುತ್ತಿದ್ದುದನ್ನು ಬಿಟ್ಟರೆ ನಾವೆಲ್ಲಾ ಒಟ್ಟಾಗಿ ಕುಳಿತು ಕಲೆತದ್ದೇ ಇಲ್ಲ. ಹಾಗಾಗಿ ನಿನ್ನೆಯ ದಿನ ರೇವಪ್ಪ ಹೇಳಿದಂತೆ ನೆನಪಿನಲ್ಲಿಡಬೇಕಾದ ದಿನ.
ನಮ್ಮ ನಂತರ ಸಚಿವಾಲಯ ಸೇವೆಗೆ ಬಂದ ಸಹಾಯಕರು, ಬೆರಳಚ್ಚುಗಾರರ ಬ್ಯಾಚ್ ನ ಗ್ರೂಪ್ ಫೋಟೋ ವನ್ನು Face Book, Orkut ನಂತಹ ತಾಣಗಳಲ್ಲಿ ಕಂಡಾಗ 'ಛೇ ನಾವು ಹೀಗೆ ಒಟ್ಟಿಗೇ ಸೇರೋಕೆ ಸಾಧ್ಯನೇ ಆಗಲಿಲ್ವಲ್ಲಾ' ಅನ್ನೋ ಕೊರಗಾಗುತ್ತಿತ್ತು. ಅಂತಹ ಒಂದು ಕೊರಗಿಗೆ ಇತಿಶ್ರೀ ಹಾಡಿತು ನಿನ್ನೆಯ ನಮ್ಮ ಸಂಭ್ರಮದ ದಿನ!
ಈ ಸಂದರ್ಭದಲ್ಲಿ ನಮ್ಮನ್ನೆಲ್ಲಾ ಒಂದೆಡೆ ಕಲೆಹಾಕಿ, ಸವಿಯೂಟವ ನೀಡಿ, ಮುಂದೂ ಇಂತಹ ಸನ್ನಿವೇಶಗಳ ನೆರವೇರಿಕೆಗೆ ನಾಂದಿ ಹಾಡಿದ ಹತ್ತು ಮನಸುಗಳಿಗೆ ಹಾಗೂ ಕರೆಗೆ ಓಗೊಟ್ಟು ಬಂದು ನಮ್ಮೊಡನೆ ನಗುನಗುತ ಎರಡು ತಾಸು ಕಳೆದ ನನ್ನೆಲ್ಲಾ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು.

ನಮ್ಮ ಸೇವಾವಧಿಯ ಅಂತಿಮ ದಿನಗಳವರೆಗೂ ನಾವು ಆಗಾಗ ಹೀಗೆ ಒಂದೆಡೆ ಸೇರಿ ಸಂಭ್ರಮಿಸುವ ಸಂದರ್ಭಗಳು ನಿರಂತರವಾಗಿ ಜರುಗಲಿ.
ಜೊತೆಗೆ ಪರಿವರ್ತನಾಶೀಲ ಸಮಾಜದ ಆಶೋತ್ತರಗಳಿಗೆ ನಮ್ಮದೇ ಆದ ಧಾಟಿಯಲ್ಲಿ ಪ್ರತಿಸ್ಪಂದಿಸುವ ಮನೋಭಾವ ನಮ್ಮೆಲ್ಲರಲಿ ಬೆಳೆಯಲಿ.


ನಿಮ್ಮ
ಪರಶು..,

Ferojasha said...

ಸಂಗಾತಿಗಳೆ...

ರೇವ್ ಇಲ್ದೆ ಕಳೆಗುಂದಿದ್ದ ನಮ್ಮ ಕಿರಿಯ ಸಹಾಯಕರ ಬಳಗ ಮತ್ತೊಮ್ಮೆ ಅವರ ಸಚಿವಾಲಯ ಸೇವೆಯ ಮರುಪ್ರವೇಶದಿಂದ ಕಳೆಗಟ್ಟಿದೆ ಇದು ಇನ್ನು ಮುಂದೆ ಹೀಗೆ ಮುಂದುವರಿವುದೆಂಬ ಆಶಯ ನಮ್ಮೆಲ್ಲರದು.....!! ಹಾಗೆಯೇ ನಮ್ಮೆಲರನ್ನು ಒಂದು ವೇದಿಕೆಗೆ ತಂದು ಸವಿಯೂಟವನ್ನು ಉಣಬಡಿಸಿ ಆತ್ಮೀಯತೆಯನ್ನು ಹೆಚ್ಚಿಸಿದ ನನ್ನ ಮಿತ್ರರಿಗೆ ಹಾಗೂ ನನ್ನ ಕಿರಿಯ ಸಹಾಯಕ/(ಸಹಾಯಕ) ಸಂಗಾತಿ ಮಿತ್ರರಿಗೆ ಧನ್ಯವಾದಗಳು. ಫಿರೋಜ್ ಷಾ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago