17 May 2011

ನೀರಿನ ಸದ್ಭಳಕೆ: ಜೀವಸಂಕುಲದ ಸೆಲೆಯಾಗಿ ಜೀವದ್ರವ್ಯ ಉಳಿಸಿ

ನಾವು ಈ ಹಿಂದಿನ ಮನನ ಅಧ್ಯಯನ ಸಭೆಯಲ್ಲಿ  ಚರ್ಚಿಸಿದಂತೆ 'ನೀರಿನ ಸದ್ಭಳಕೆ'ಯ ಕುರಿತು ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆ.  ಸಚಿವಾಲಯದ ಗ್ರಂಥಪಾಲಕರಾದ ಬನವಾಸಿ ಕೃಷ್ಣಮೂರ್ತಿಯವರೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದು ಹಾಗೂ ಸಿಆಸು.ಇಲಾಖೆಯ ಕಾರ್ಯಕಾರಿ ಶಾಖೆಯಲ್ಲಿನ ಮೇಲ್ವಿಚಾರಕಾದ  ಶ್ರೀ ಲಕ್ಷ್ಮೀಕಾಂತ್ ರವರೊಂದಿಗೆ ಚರ್ಚಿಸಿ  ನೀರಿನ ಮಹತ್ವ, ಬಳಕೆ ಹಾಗೂ ನಮ್ಮ ಕಾರ್ಯಕ್ಷೇತ್ರದಲ್ಲಿ ವೆಚ್ಚವಾಗುತ್ತಿರುವ ನೀರಿನ ಪ್ರಮಾಣ, ಅದಕ್ಕೆ ತಗಲುವ ವೆಚ್ಚ ಹಾಗೂ ಘೋಷವಾಕ್ಯಗಳನ್ನೊಳಗೊಂಡ ಸಂಕ್ಷಿಪ್ತವಾದ ಒಂದು ಪುಟದ ಟಿಪ್ಪಣಿಯನ್ನು  ಸಿದ್ಧಪಡಿಸಿ, ಇದನ್ನು ಎಲ್ಲರಿಗೂ ಪ್ರಚುರ ಪಡಿಸುವ ನಿಟ್ಟಿನಲ್ಲಿ ದಿನಾಂಕ: 16.05.2011 ರಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ 'ವಿರಾಮದ ವೇಳೆಯಲ್ಲಿ ವಿಚಾರ ವೇದಿಕೆ' ಕಾರ್ಯಕ್ರಮದಲ್ಲಿ (ಪ್ರೊ.ಕೃಷ್ಣೇಗೌಡರವರ ಕಾರ್ಯಕ್ರಮ) ಟಿಪ್ಪಣಿಯ ಪ್ರತಿಗಳನ್ನು ಮಾಡಿ ಎಲ್ಲರಿಗೂ ಹಂಚುವ ಕಾರ್ಯವನ್ನು ನಮ್ಮ ಮನನ ತಂಡದಿಂದ ನಿರ್ವಹಿಸಲಾಯಿತು.
'ಮನನ' ಸಿದ್ದಪಡಿಸಿ, ಪ್ರಚುರಪಡಿಸಿದ  ಜೀವಸಂಕುಲದ ಸೆಲೆಯಾಗಿ ಜೀವದ್ರವ್ಯ ಉಳಿಸಿ ಕರಪತ್ರದ ಯಥಾಪ್ರತಿ ಕೆಳಗಿದೆ. ಇದನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ನಿಮ್ಮದೂ ಆಗಲಿ.ಜೀವಸಂಕುಲದ ಸೆಲೆಯಾಗಿ ಜೀವದ್ರವ್ಯ ಉಳಿಸಿ

ಮಾನ್ಯ ಸಹೋದ್ಯೋಗಿಗಳೇ..

ನೀರಿನ ರಕ್ಷಣೆ ಎಂಬುದು ಇವತ್ತು ನಮ್ಮ-ನಿಮ್ಮೆಲ್ಲರ ಹಾಗೂ ಮುಂದಿನ ಪೀಳಿಗೆಗಳ ಅಳಿವು-ಉಳಿವಿನ ಪ್ರಾಣಾಂತಿಕ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಆದ್ದರಿಂದ ಕೆಳಗೆ ನೀಡಿರುವ ಅಂಕಿ ಅಂಶಗಳನ್ನು ಗಮನವಿಟ್ಟು ಓದಿ.

>       ನಮ್ಮ ಈ ಭೂ ಮಂಡಲವು ಶೇ.70 ರಷ್ಟು ಭಾಗ ನೀರಿನಿಂದ ಆವೃತವಾಗಿದೆ.
>        ಈ  70 ಭಾಗದ ನೀರಿನಲ್ಲಿ ಕುಡಿಯಲು ಯೋಗ್ಯವಾದ ಸಿಹಿನೀರು ಕೇವಲ 2.5 ರಷ್ಟು ಮಾತ್ರ!
>       ಈ 2.5 ರಷ್ಟು ನೀರಿನಲ್ಲಿ ಶೇ.90 ಭಾಗ ಮಂಜುಗಡ್ಡೆಯ ರೂಪದಲ್ಲಿದೆ. ಈ ಮಂಜುಗಡ್ಡೆಯನ್ನು ಕರಗಿಸಿ ಸಿಹಿ ನೀರಾಗಿ ಪರಿವರ್ತಿಸುವುದೆಂದರೆ ಪ್ರಳಯಕ್ಕೆ ಸ್ವಯಂ ಆಹ್ವಾನವಿತ್ತಂತೆಯೇ!!
>      ಹಾಗಾಗಿ ಇಡೀ ಜಗತ್ತಿನ ಪಶು, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಾದಿ ಮನುಷ್ಯರೆಲ್ಲರ ಪ್ರಾಣಪೋಷಕವಾಗಿ ಲಭ್ಯವಿರುವ ಸಿಹಿನೀರಿನ ಪ್ರಮಾಣ -ದಯವಿಟ್ಟು ಗಮನಿಸಿ- ಕೇವಲ 0.26 ರಷ್ಟು ಮಾತ್ರ!!!

ನಮ್ಮ ಕಾರ್ಯಕ್ಷೇತ್ರದಲ್ಲಿ ನಾವು ಬಳಸುವ ನೀರಿನ ಪ್ರಮಾಣದ ತಿಂಗಳವಾರು ಅಂಕಿ-ಅಂಶ ಇಂತಿದೆ.

                                                                 ಕೃಪೆ: ಸಿಆಸು ಇಲಾಖೆ (ಕಾರ್ಯಕಾರಿ)
ವಿವರ
ವಿಧಾನಸೌಧ
ವಿಕಾಸಸೌಧ
ಬಹುಮಹಡಿ ಕಟ್ಟಡ
ಒಂದು ತಿಂಗಳಲ್ಲಿ ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ
8 ಲಕ್ಷ ಲೀಟರ್ ಗಳು
25 ಲಕ್ಷದ 6 ಸಾವಿರ ಲೀಟರ್ ಗಳು
01 ಕೋಟಿ 52 ಲಕ್ಷದ 03 ಸಾವಿರ ಲೀಟರ್ ಗಳು
ನೀರು ಸರಬರಾಜು ವೆಚ್ಚ
ರೂ. 46,930.00/-
ರೂ. 1,49,290.00/-
ರೂ. 6,90,310.00/-
ಇತರೆ ವೆಚ್ಚಗಳು ಸೇರಿ ಒಟ್ಟು ವೆಚ್ಚ
ರೂ. 57,124.00/-
ರೂ. 1,79,948.00/-
ರೂ. 8,45,213.00/-

ಮೂರೂ ಕಟ್ಟಡಗಳಲ್ಲಿ ಬಳಕೆಯಾಗುತ್ತಿರುವ ನೀರಿನ ಪ್ರಮಾಣ :  
 ಒಂದು ಕೋಟಿ ಎಂಬತ್ತೈದು ಲಕ್ಷದ ಒಂಭತ್ತು ಸಾವಿರ ಲೀಟರ್ ಗಳು

ಮೂರೂ ಕಟ್ಟಡಗಳಲ್ಲಿ ನೀರಿಗಾಗಿ ವೆಚ್ಚವಾಗುತ್ತಿರುವ ಒಟ್ಟು ಮೊತ್ತ: 
 ಹತ್ತು ಲಕ್ಷ ಎಂಬತ್ತೆರಡು ಸಾವಿರದ ಇನ್ನೂರ ಎಂಬತ್ತೈದು ರೂಪಾಯಿಗಳು
 
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವುಗಳು ಈ ಕೂಡಲೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಅದರಲ್ಲಿ :
1.   ನಮ್ಮ ಕಾರ್ಯಕ್ಷೇತ್ರದಲ್ಲಿ ನೀರು ಪೋಲಾಗದಂತೆ ತಡೆಯಲು ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕ್ರಮ ವಹಿಸುವುದು.
2.  ಅನಗತ್ಯವಾಗಿ ನೀರನ್ನು ಖರ್ಚು ಮಾಡುವುದನ್ನು ನಿಲ್ಲಿಸುವುದು.
3.   ನೀರಿನ ಮಹತ್ವವನ್ನು ನಾವೂ ತಿಳಿದು ಇತರರಿಗೆ ತಿಳಿಸಿ, ಅಮೂಲ್ಯವಾದ ಜೀವಜಲವನ್ನು ಸಂರಕ್ಷಿಸಲು ಬದ್ದರಾಗುವುದು.
4.   ನೀರು ಸೋರಿಕೆಯಾಗಿ ಅನಗತ್ಯ ಪೋಲಾಗುತ್ತಿದ್ದರೆ ಕೂಡಲೇ ತಿಳಿಸಬೇಕಾದ ಕಛೇರಿ/ದೂರವಾಣಿ:"-
* ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ): 22033278, 9481031480 
* ಮೇಲ್ವಿಚಾರಕರು  ವಿಕಾಸಸೌಧsÀ- 5054, ಬಹುಮಹಡಿ ಕಟ್ಟಡ 2404.
-----   *****  -----
"ನೀರಿನ ಸದ್ಬಳಕೆಯನ್ನು ಮತೆರ ದಿನ, ಭವಿಷ್ಯದ ಮರಣ ಶಾಸನ"
"ನೀರು ಜೀವಜಗತ್ತಿನ ಜೀವಾಧಾರ, ನಿಸರ್ಗಕ್ಕೆ ಮೂಲಾಧಾರ"

                                                                                                                                   

'ಮನನ'ದ ಕ್ರಿಯಾವಂತಿಕೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
 No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago