27 June 2010

ಲೋಕಾಯುಕ್ತರ ರಾಜೀನಾಮೆ ಪ್ರಕರಣ - ಮಧುಚಂದ್ರ ಅಭಿಪ್ರಾಯ



        

ಯಾಕೋ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಅನಿಸ್ತಿದೆ. ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೇ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳಂತೂ ಒಳಜಗಳ, ನಾಯಕರ ಪ್ರತಿಷ್ಠೆಗಳಲ್ಲಿಯೇ ಕಾಲ ಕಳೆಯುತ್ತಿದ್ದು, ಅಸ್ತಿತ್ವದಲ್ಲಿ ಇವೆಯೇ  ಇಲ್ಲವೇ ಎನ್ನುವುದೇ  ತಿಳಿಯದಾಗಿದೆ... ನಿಜವಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳ ಕೆಲಸ ಮಾಡುತ್ತಿರುವುದು ಮಾಧ್ಯಮಗಳು, ರಾಜ್ಯಪಾಲರು, ಲೋಕಾಯಕ್ತ ಮತ್ತು ಮಾನವ ಹಕ್ಕುಗಳ ಆಯೋಗಗಳು.

        ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇವುಗಳನ್ನೇ ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ. ಒಂದುಕಡೆ ರಾಜ್ಯಪಾಲರು ಸರ್ಕಾರದ ರೀತಿನೀತಿಗಳನ್ನು  ಪ್ರಶ್ನಿಸಿದರೆ ಸಂಪುಟದ ಸದಸ್ಯರು ರಾಜ್ಯಪಾಲರನ್ನೇ ಹೀಯಾಳಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ತಮ್ಮ  ಉದ್ಧಟತನ ಪ್ರದರ್ಶಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಕಾನೂನು ತಜ್ಞರಲ್ಲಿ ನಮ್ಮ ರಾಜ್ಯಪಾಲರೂ ಒಬ್ಬರು. ಅವರ ಸಲಹೆ ಗಳನ್ನು ಸ್ಪರ್ಧಾತ್ಮಕತೆಯಿಂದ ನೋಡದೇ ಪೂರ್ವಗ್ರಹಪೀಡಿತರಾಗಿ ನೋಡಿ ಅವರತ್ತ  ದಿವ್ಯ ನಿರ್ಲ್ಯಕ್ಷ್ಯ ತೋರುತ್ತಿರುವುದು ನಮ್ಮ ಸರ್ಕಾರದ ಸಾಚಾತನವನ್ನೇ ಅನುಮಾನದಿಂದ ನೋಡುವಂತಾಗಿದೆ.

ಇನ್ನು ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಿಗೆ ಅವರ ಅಂಗರಕ್ಷಕರನ್ನೇ ನೇಮಿಸದೇ ಅವರೇ ದೂರು ನೀಡುವಂತ ಪರಿಸ್ಥಿತಿ. ಅವರನ್ನು ಸಹ ಬಹಿರಂಗವಾಗಿ ತೆಗಳುತ್ತ ಮಾನಸಿಕ ಸ್ಥೈರ್ಯವನ್ನೇ ಹುದುಗಿಸುವ ಪ್ರಯತ್ನ ಮಾಡುತ್ತಿದೆ..
 
ಇನ್ನು ಲೋಕಾಯುಕ್ತರ ರಾಜೀನಾಮೆ ರಾಜ್ಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿದೆ...

ಸರ್ಕಾರದ ಅಸಹಕಾರ,  ದಿವ್ಯ ನಿರ್ಲ್ಯಕ್ಷ್ಯ, ನಿಷ್ಕ್ರೀಯತೆ, ಪರಮಾಧಿಕಾರ, ಗಣಿ ವಿಷಯ.... ಇವೆಲ್ಲವೂ ಲೋಕಾಯುಕ್ತರ ರಾಜೀನಾಮೆಗೆ ಕಾರಣವಾಗಿರಬಹುದು. ಆದರೆ  ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆ ರಾಜ್ಯದ ಜನತೆಯಲ್ಲಿ ಭ್ರಮನಿರಸನವನ್ನು ಮೂಡಿಸಿದೆ. ರಾಜೀನಾಮೆ ವಾಪಸ್ಸು ಪಡೆಯುವಂತೆ ಎಲ್ಲಡೆಯಿಂದ ಹೋರಾಟದ ಕೂಗುಗಳು ಕೇಳಿಬರುತ್ತದೆ. ರಾಜ್ಯಪಾಲರಂತೂ ಲೋಕಾಯುಕ್ತರ ರಾಜೀನಾಮೆ ಪ್ರಜಾಪಭುತ್ವ ವ್ಯವಸ್ಥೆಯ ಪ್ರಮುಖ ಸಂಸ್ಥೆಯಂದರ ಅವನತಿಯ ಸೂಚಕವೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಗೃಹ ಸಚಿವರೂ ಲೋಕಾಯುಕ್ತರು ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆಯಲು ಕೇಳಿಕೊಂಡಿರುವುದು ಅವರ ಮೌಲ್ಯವನ್ನು ತೋರಿಸುತ್ತದೆ. ರಾಷ್ಟ್ರ ಕಂಡ ಅತ್ಯುತ್ತಮ ನ್ಯಾಯಾವಾದಿಯಾಗಿ, ರಾಜ್ಯದ ಲೋಕಾಯುಕ್ತಾರಾಗಿ ಅವರ ಕಳಂಕರಹಿತ, ಜನಸ್ನೇಹಿ ಸೇವೆಯು ಜನತೆಯ ಮುಂದಿರುವಾಗ ರಾಜ್ಯದ ಬಿಜಿಪಿ ಮುಖಂಡರು ಅವರ ನಿಷ್ಠೆಯ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಹೇಯಕೃತ್ಯವೆಂದೇ ಹೇಳಬಹುದು..

      ಕೊನೆಯದಾಗಿ ಕರ್ನಾಟಕದ ಹಿತಕ್ಕಾಗಿ, ಭ್ರಷ್ಟರ ನಿರ್ಮೂಲನೆಗೆ, ಶ್ರೀ ಸಂತೋಷ್ ಹೆಗಡೆ ಯವರ ಅವಶ್ಯಕತೆ ತುಂಬಾ ಇದೆ ಆದ್ದರಿಂದ ರಾಜ್ಯದ ಜನತೆಗೋಸ್ಕರವಾಗಿಯಾದರೂ ತಮ್ಮ ನಿಲುವನ್ನು ಬದಲಿಸುವಂತಾಗಲಿ ಹಾಗೂ ಸರ್ಕಾರವು ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವತ್ತ  ಪ್ರಾಮಾಣಿಕವಾಗಿ ಪ್ರಯತ್ನಿಸುವಂತಾಗಲಿ ಎಂದು ಬಯಸೋಣ.... 
- ಮಧು

4 comments:

Anamika said...

ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತ ಬೊಬ್ಬೆ ಹಾಕುವ ಸರ್ಕಾರದಲ್ಲಿರುವವರಿಗೆ ಆ ನಿಟ್ಟಿನಲ್ಲಿ ಕೆಲಸ ಮಾಡುವವರನ್ನು ಕಂಡರೆ ಅಷ್ಟಕ್ಕಷ್ಟೆ. ಇದನ್ನ ದುರಂತ ಅಂತೀರೋ : 'ಮೊಸಳೆ ಕಣ್ಣೀರು' ಅಂತೀರೋ ... ಅಥವಾ ಆ ನಿಟ್ಟಿನಲ್ಲಿ ಕೆಲಸ ಮಾಡಿದವರ ಧಾಟಿ ಸರ್ಕಾರಕ್ಕೆ 'ಇಷ್ಟ' ಆಗಲಿಲ್ವೋ ಏನೋ ?!!

- ರೇವಪ್ಪ

ಮಂಜು said...

ಭ್ರಷ್ಟಾಚಾರ ಯಾವುದೇ ಒಂದು ದೇಶದ ಪ್ರಜಾಸತ್ತಾತ್ಮಕ ವಿನಾಶಕ್ಕೆ ರಹದಾರಿ. ಈ ಹಾದಿಯಲ್ಲಿ ತಾವೇ ರಾಜರೆಂದು ಸಾಗುತ್ತಾ ಇರುವುದೆಲ್ಲವನ್ನೂ ತಮ್ಮೊಳಗೆ ತುಂಬಿಕೊಳ್ಳುವ ಹಪಾಹಪಿಕೆಯಲ್ಲಿ ರೋಗ ಹತ್ತಿಸಿ ನರಳಿಸುವ ಚಾಳಿ ಬೆಳೆಸಿಕೊಂಡವರ ದಾರಿಯನ್ನು ಮುಚ್ಚಿ ಹಾಕಿ ಹೊಸ ದಾರಿ ನಿರ್ಮಿಸಲು ಹೊರಟಿದ್ದವರ ರೆಕ್ಕೆ ಮುರಿವ ಹುನ್ನಾರಗಳು ಇದ್ದೇ ಇದೆ. ನಾವು ವಿರೋಧಿಸದಿರುವುದೇ ಒಂದು ದುರದೃಷ್ಟಕರ ಮತ್ತು ಭಾಗಿಯಾಗಿದ್ದೇವೆನ್ನುವ ಪಾಪ ಪ್ರಜ್ಞೆ ಕಾಣುವ ಮೊದಲು ನಾವು ಸರಿಯಾಗಬೇಕಷ್ಟೆ.
-ಮಂಜು

Ferojasha said...

ಪ್ರಾಮಾಣಿಕತೆಯನ್ನು ಆಗಿಂದಾಗ್ಗೆ ಜ್ಞಾಪಿಸುತ್ತಿದ್ದ ಸಾರ್ವಜನಿಕ ವ್ಯಕ್ತಿ, ದಿಢೀರನೆ ಹುದ್ದೆಗೆ ರಾಜೀನಾಮೆ ನೀಡಿದ್ದು ಸಭ್ಯ-ಸುಜನರಿಗೆ ಆಘಾತಕಾರಿ. ಆದರೆ ಸಾರ್ವಜನಿಕ ಜೀವನದಲ್ಲಿ ಇಂಥಾ ಬಿ. ಪಿ (ಬಡಪಾಯಿ) ಜನರ ಪಾತ್ರವೇನೇನೂ ಇರುವುದಿಲ್ಲ. ಆಡಳಿತ ನಡೆಸುವ ಪುಢಾರೀ ಜನರಿಗಾದರೆ ಇದು ‘ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ’ ಅವಕಾಶ! ಯಾವ ವಶೀಲಿಯಿಂದ, ಈ ಹುದ್ದೆಗೆ, ಯಾವ ಬೇಕಾದವರನ್ನು ಹೇಗೆ ತಂದುಕೊಳ್ಳಬಹುದೆಂಬ ತಂತ್ರಗಾರಿಕೆಯಲ್ಲಿ ಅವರು ಬ್ಯುಸಿ ಇರಬಹುದು!
ಆದರೆ ನಮ್ಮ ಆತಂಕ, ಈ ಅಯೋಗ್ಯ ಆಡಳಿತ ವ್ಯವಸ್ಥೆಯಲ್ಲಿ ಗಾಳಗ್ರಸ್ತರೇ ಲೋಕಾಯುಕ್ತರೂ ಆಗಿ ಬಂದು ಕೂತುಬಿಟ್ಟರೇನಪ್ಪಾ ಗತಿ,ಎಂದು....!

sakkath sacchi.blogspot.com said...

Lokaayuktara asamaadaanavene irali avaru saamaajika honegaarikeyannu hottu rajinameyannu hintegedukondu adikaaradalli munduvareyuvudu holitu.yekendare aase haagu nambikeyinda; samaajada sudhaaraneya kanasannu lokayuktaru nanasu maaduvarendu; kaadu kulitiruva nonda benda besatta namma naadina janara vishwaasavannu ulisikollabekaaddu lokayuktara aadhya kartavya.Adhikaaradalliddukonde avaru "paramaadhikhaarada" illave "nigadipadisiruva" illave "neediruva yane vahisiruva sampoorna adhikhaarada grahikegaagi horata nadesuvudu lokaayuktara ghanatege sarihondutade. illave "kallaru"("sarkaara") tappisikollalu avare daari maadi kottantaaguttade

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago