31 December 2009

ಅನಿಸಿಕೆ

ನಿಲ್ಲದಿರಲಿ ಪಯಣ.....


ಹಿಂತಿರುಗಿ ನೋಡಿದರೆ ಇದೊಂದು ವರ್ಷ ಅದ್ಹೇಗೆ ಕಳೆದೋಯ್ತೋ ಗೊತ್ತಾಗುತ್ತಿಲ್ಲ. ನಮಗರಿಯದೇ ಜಾರಿದ ದಿನಗಳನ್ನು ನೆನೆಯುವ, ಮುಂಬರುವ ದಿನಗಳನ್ನು ಅರಿತು ಸವಿಯುವ ಹೊಸ ವರ್ಷದ ಹೊಸ ದಿನದಲ್ಲಿ ನಾವಿದ್ದೇವೆ. ವರ್ಷದ ಪ್ರಾರಂಭದಲ್ಲಿ ಆರಂಭವಾದ ನಮ್ಮ ಈ ಬ್ಲಾಗ್ ಸಂಬಂಧಕ್ಕೆ ಈಗ ಭರ್ತಿ ಒಂದು ವರ್ಷ. 'ಅದಮ್ಯ' ದಿಂದ 'ಪುನರ್ನವ'ದ ವರೆಗೆ ನಮ್ಮ ಬ್ಲಾಗ್ ಹಲವಾರು ಬದಲಾವಣೆಗಳನ್ನು ಕಂಡಿದೆ, ನನ್ನಲ್ಲಿನ ಬದಲಾವಣೆಗಳಿಗೂ ಕಾರಣವಾಗಿದೆ. ಈ ಮೊದಲೇ ನಾನು ನನ್ನ ಕಾಮೆಂಟ್ ಗಳಲ್ಲಿ, 'ವಕ್ರವೃಕ್ಷ' ದಲ್ಲಿ ನಮ್ಮ ಈ ಬ್ಲಾಗಿನಿಂದ ನಾನು ಕಲಿತಿದ್ದನ್ನು, ಪಡೆದ ಅನುಭವಗಳನ್ನು, ಅಂತರ್ಜಾಲ ವಲಯದಲ್ಲಿ 'ನಮ್ಮ ಬ್ಲಾಗ್' ನನಗೆ ಮಾರ್ಗದರ್ಶಕನಾಗಿ ಸಹಕರಿಸಿದ್ದನ್ನು ಪ್ರಸ್ತಾಪಿಸಿದ್ದೇನೆ. ಅಲ್ಲಿನ ನನ್ನ ಅನಿಸಿಕೆಯ ಒಂದು ತುಣುಕು ಹೀಗಿದೆ.

" ಕರ್ನಾಟಕ ಸರ್ಕಾರ ಸಚಿವಾಲಯ ಕಿರಿಯ ಸಹಾಯಕರ ಬ್ಲಾಗೊಂದು ಪ್ರಾರಂಭ ಗೊಳ್ಳುವವರೆಗೂ ನನಗೆ ಅಂತರ್ಜಾಲ ಲೋಕದಲ್ಲಿ ಇಂತಹದೊಂದು ಬ್ಲಾಗ್ ವಲಯ ಇದೆ ಎನ್ನುವುದೇ ಗೊತ್ತಿರಲಿಲ್ಲ.! ಅಂದು ಸಚ್ಚಿಯ ನ್ಯೂ ಇಯರ್ ಪಾರ್ಟಿಯಲ್ಲಿ ರೇವಪ್ಪ " ನಾನೂ ಒಂದು ಬ್ಲಾಗ್ ತೆರೆದಿದೀನಿ, ಅದರಲ್ಲಿ ಈ ಫೋಟೋ ಹಾಕ್ತೀನಿ" ಅಂತ ತಮ್ಮ ಮೊಬೈಲಿನಿಂದ ಫೋಟೋ ಕ್ಲಿಕ್ಕಿಸಿದಾಗಲೂ ನನಗೆ ತಳ-ಬುಡ ಅರ್ಥವಾಗಿರಲಿಲ್ಲ..!! ಮರುದಿನ ರೇವಪ್ಪರಿಂದ ಪಡೆದಿದ್ದ ಬ್ಲಾಗ್ ವಿಳಾಸವನ್ನು ಇಂಟರ್ ನೆಟ್ ಎಕ್ಸ್ ಪ್ಲೋರರ್ ನಲ್ಲಿ ಟೈಪಿಸಿ ಎಂಟರ್ ಒತ್ತಿದಾಗಲೇ ನಾನು ಬ್ಲಾಗ್ ಎಂಬ ಮಹಾಮನೆಯ ಮೆಟ್ಟಿಲ ಮೇಲೆ ಬಂದು ಬಿದ್ದಿದ್ದೆ."

ಹೀಗೆ ಪ್ರಾರಂಭವಾಯಿತು ನನ್ನ ಬ್ಲಾಗ್ ಪಯಣ. ಅಲ್ಲಿ ನನ್ನ ಬರಹಗಳಿಗೆ ಒಂದು ನೆಲೆಕೊಟ್ಟ ರೇವಪ್ಪ ಅವಕ್ಕೆ 'ಅಕ್ಷರ ಪಯಣ' ಎಂಬ ಒಂದು ಮುದ್ದಾದ ಹೆಸರು ಕೊಟ್ಟರು. ಆದರೆ ಆ ಪಯಣ ಎಲ್ಲಿವರೆಗೆ ಸಾಗಿತು ಎಂಬುದಕ್ಕೆ ನನ್ನಲ್ಲಿ ಸ್ಪಷ್ಟವಾದ ಉತ್ತರವಿಲ್ಲ. ಇಂದು ವರ್ಷದ ಕೊನೆಯಲ್ಲಿ ನಾನು ಒಬ್ಬನೇ ಕುಳಿತು ಯೋಚಿಸಿದರೆ ನನ್ನ ಅದೆಷ್ಟೋ ಆಲೋಚನೆಗಳನ್ನು ಅಕ್ಷರ ರೂಪಕ್ಕೆ ಇಳಿಸಲಾಗಲಿಲ್ಲವಲ್ಲ ಎಂಬ ಅಳುಕಾಗುತ್ತಿದೆ. ಪ್ರಕಟಿಸುವ ವೇದಿಕೆ ಇದ್ದು, ಓದುವ ಸ್ನೇಹಿತರಿದ್ದರೂ ಬರೆಯುವ ಕಾಯಕಕ್ಕೆ ನಾನು ತೊಡಗಲಿಲ್ಲ. ಇದಕ್ಕೆ ಕೆಲಸದಲ್ಲಿ ಬ್ಯುಸಿ ಅಂದರೆ ಅದು ಒಂದು ಸಬೂಬು ಮಾತ್ರವಾದೀತು ಆದರೆ ನಿಜವಾದ ಕಾರಣ ನನ್ನಲ್ಲಿರುವ 'ಆರಂಭ ಶೂರತ್ವ' ಎಂಬ ದೌರ್ಬಲ್ಯ. ಇದರಿಂದಾಗಿ ಕಾರಣವಿಲ್ಲದೆ ಕಟ್ಟೆ ಮ್ಯಾಲಿನ ಮಂದಿಯ ಮಾತು ನಿಂತಂತೆ ನನ್ನ ಬರಹಗಳೂ ಅರ್ಧರ್ಧಕ್ಕೆ ನಿಂತುಬಿಟ್ಟುವು. ಅದೆಷ್ಟೋ ಆಸೆಗಳು ಮನದಲ್ಲೇ ಕಮರಿದವು. ಕಾಲ ಕ್ಷಣ ಕ್ಷಣಕ್ಕೂ ಮುಂದೆ ಮುಂದೆ ಸಾಗುತ್ತಿದೆ. ಹಾಗೆ ಹೀಗೆ ಅನ್ನುತ್ತಿದ್ದಂತೆ ಹೊಸ ವರ್ಷವೂ ಬಂದೇ ಬಿಟ್ಟಿತು. ಮತ್ತೆ ಹೊಸ ಯೋಚನೆಗಳೊಂದಿಗೆ ಅಕ್ಷರ ಪಯಣ ಮುಂದುವರೆದು, ಉತ್ಸಾಹದಿಂದ ಪ್ರಾರಂಭಿಸಿದ ಬ್ಲಾಗ್ ಗಳಿಗೊಂದು ಚಲನೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಕಳೆದ ದಿನಗಳಲ್ಲಿ ಪುನರ್ನವ ಬಿತ್ತಿದ ಬೀಜ ಮುಂದಿನ ದಿನಗಳಲ್ಲಿ ಮೊಳೆತು, ಬೆಳೆದು ಫಸಲು ನೀಡಬಹುದೆಂಬ ಭರವಸೆಯು ಇದೆ.

ಇಂದಿನಿಂದ ಮತ್ತೆ 'ನಮ್ಮ ಬ್ಲಾಗ್' ಹೊಸ ಹೊಸ ಲೇಖನ, ಕಥೆ, ಕವನಗಳಿಂದ, ವೈಚಾರಿಕ ಬರಹಗಳಿಂದ ಒಡಲುದುಂಬಿ ಮುಂದುವರೆಯಲಿ ಎಂಬುದು ನನ್ನ ಆಶಯ. ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಬ್ಲಾಗ್ ನ ಸಮಸ್ತ ಓದುಗರಿಗೂ, ನೋಡುಗರಿಗೂ, ಲೇಖಕರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

"ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಮೂಡುತಿದೆ
ನವಜೀವನದುತ್ಸಾಹದ ಚೆಲುವಿಗೆ
ನವೀನ ಜೀವನ ಚಿಮ್ಮುತಿದೆ"

ಎಂಬ ಕವಿವಾಣಿಯ ನೆನೆಯುತಾ..............


ನಿಮ್ಮ
ಪರಶು..,

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago