04 November 2009

I Said Breath New .. & Here He Is ... Our New Friend...

ಕನಸಾಗದ ' ಹೂ '



ಸೂರಿಲ್ಲದಾ ಗೂಡು-

ಕನಸಿನ ಜೋಂಪು ಹತ್ತಿದೊಡನೆ

ನಕ್ಷತ್ರಗಳು ಮೈಮೇಲೆ ಬೀಳುತ್ತವೆ !

ಬೆಳಕಿನಲ್ಲಿ ಹೇಗೆ ಕನಸು ಕಾಣುವುದು-

ಸರಿ ಸೂರಿಗೆ

ಗೋಡೆ, ಛಾವಣಿ ಹಾಕಿಸಿದೆ.

ಇನ್ನು ನೆಮ್ಮದಿಯಾಗಿ

ಕನಸು ಕಾಣೋಣವೆಂದರೆ

ಹಾಳಾದ್ದು ಗೂಡೊಳಗೆ ನಿದ್ರೆಯೇ ಬರುತ್ತಿಲ್ಲ !

ಅಲೆದೂ ಅಲೆದೂ

ಕತ್ತಲ ರಾಜ್ಯವೊಂದಕ್ಕೆ ಬಂದೆ ;

ಅಲ್ಲೊಬ್ಬ ಸಂತ

ತೆರೆದ ಕಣ್ಣುಗಳಿಂದಲೇ ಕನಸು ಕಾಣುತ್ತಿದ್ದ ;

ಪರಿಯಾಗಿ ಅವನಲ್ಲಿ ಬಿನ್ನಹಿಸಿದೆ -

ಕನಸು ನಿದ್ರಿಸಿದಾಗಲೇ ಬರಬೇಕೆಂದಿಲ್ಲ

ತೆರೆದ ಕಣ್ಣುಗಳಲ್ಲೇ ಕನಸು ಕಾಣಬಹುದು ;

ಅದೋ ಅಲ್ಲಿ ಮುಳ್ಳಿನ ರಾಶಿ ಕಾಣುತ್ತಲ್ಲ

ಅದರ ಮೇಲೆ ನಡೆದು ಸಾಗಿದರೆ

ಅಂತ್ಯಕ್ಕೆ ನಿನಗೆ ಹೂ ರಾಶಿ ಸಿಗುತ್ತದೆ ;

ಹೂ ರಾಶಿಯ ಮೇಲೆ ನಡೆದು ಸಾಗಿದರೆ

ನಂತರ ಸಿಗುವುದೇ ಕನಸು !

ಮುಳ್ಳಿಲ್ಲದೆ ಹೂವಿಲ್ಲ ; ಹೂವಿಲ್ಲದೇ ಕನಸಿಲ್ಲ !

ತಡ ಮಾಡದೇ ಓಡಿದೆ -

ಮುಳ್ಳುಗಳ ತುಳಿಯುತ್ತ

ರಕ್ತ ಒಸರುತ್ತಿದ್ದರೂ ಓಟ ನಿಲ್ಲಲಿಲ್ಲ ;

ಕಾಲ್ಗಳು ದಣಿಯಲಿಲ್ಲ

ಮುಳ್ಳುಗಳು ನಲುಗಲಿಲ್ಲ !

ಅಂತ್ಯಕ್ಕೆ ಸಿಕ್ಕೇಬಿಟ್ಟಿತು

ಹೂಗಳ ರಾಶಿ,

ನೋಟ ಹಾಯ್ದಷ್ಟೂ ಹೂ ರಾಶಿ

ಕಪ್ಪು ಕೆಂಪು ಅಲ್ಲಲ್ಲಿ ಬಿಳಿ ಹೂಗಳದ್ದೇ ಬಣ್ಣ ;

ಇಷ್ಟು ಹೊತ್ತೂ ನಾನಲ್ಲದ ನಾನು

ಈಗ ನಾನೇ ಆಗಿಬಿಟ್ಟಿದ್ದೆ !

ಕಾಲಿಟ್ಟರೆಲ್ಲಿ ಹೂಗಳು ನಲುಗುವುದೋ

ಎಂದು ಮರುಗಿದೆ !

ಹೂರಾಶಿ ತುಳಿದು ಕನಸಿಗೆ ಕಾಲಿಡಲು

ಮನಸಾಗುವುದಾದರೂ ಎಂದೋ ?

------------------------------------


ನಮ್ಮ ಹೊಸ ಮಿತ್ರನಿಗೆ ನಮ್ಮೆಲ್ಲರ ಪರವಾಗಿ ಪುನರ್ನವ ಕುಟುಂಬಕ್ಕೆ ಸ್ವಾಗತ ಕೋರ್ತೀನಿ...


ಇವರ ಯಾರು ? ಏನು ಹೆಸರು ? ಎಲ್ಲಿ ಕೆಲಸ ಮಾಡ್ತಾರೆ... ಅಂತೆಲ್ಲ ತಿಳಿಬೇಕಾದ್ರೆ ... ನಾಳೆ ನಮ್ಮ ಬ್ಲಾಗ್ ತಪ್ಪದೇ ನೋಡಿ...ಆದ್ರೆ ಅವರ ಕವನ ಮೆಚ್ಚುಗೆ ಆಗಿದ್ರೆ ... ಅದನ್ನ ಸೂಚಿಸಲಿಕ್ಕೆ ನಾಳೆವರೆಗೆ ಕಾಯೋದು ತಪ್ಪು.. ಸರಿನಾ ..ಮೆಚ್ಚುಗೆ ಅನ್ನೋದು Spontanious ಆಗಿದ್ರೆ ಬೆಲೆ ಜಾಸ್ತಿ...

Comment ಬರೀಲಿಕ್ಕೆ WebSense ಭೂತ ಕಾಡಿದ್ರೆ ಅವರಿಗೆ e-mail ಮಾಡಿ ::

cheluvantha@yahoo.co.in

- ರೇವಪ್ಪ

3 comments:

Unknown said...

ಅರ್ಥಪೂರ್ಣವಾದ ಕವನ.ತುಂಬಾ ಚೆನ್ನಾಗಿದೆ.....

Anamika said...

ಹೊಸ ಸ್ನೇಹಿತನ ಹೊಸ ಕವನ ಪ್ರಾಸವಿಲ್ಲದೆಯೂ ಸುಂದರ ಕವನ ಬರೆಯೋದು ಅಂದ್ರೆ ಹೇಗೆ ಅಂತ ತೋರಿಸಿಕೊಟ್ಟಿದಾರೆ..

ಭೇಷ್ ಅನ್ನೋಣ...

ನಿಮ್ಮವ,
ರೇವಪ್ಪ

sakkath sacchi.blogspot.com said...

"ನಮ್ಮ ಬ್ಲಾಗ್"ನಲ್ಲಿ ಹೊಸತನ ಬೇಕು ಎಂದರೆ ಹೊಸಬರು ಬರಬೇಕು; ಹೊಸಬರು ಬರೀಬೇಕು ಎಂದು ನಾ ಯಾವಾಗಲು ನಂಬಿದ್ದೆ ಹಾಗು ವ್ಯಕ್ತಪಡಿಸಿದ್ದೆ .ನನ್ನ ನಂಬಿಕೆ ಸುಳ್ಳಾಗಲಿಲ್ಲ .ಹೊಸಬರ ಕವಿತೆಯು ಸರಳ ಸುಂದರ ಹಾಗು ಆಳವಾಗಿಯೂ ಅರ್ಥಪೂರ್ಣವಾಗಿಯೂ ಮೂಡಿಬಂದಿದೆ. ಈ ಹೊಸಬರಿಗೆ ಹೃತ್ಪೂರ್ವಕ ಸ್ವಾಗತ ಹಾಗು ಇವರು ಹೀಗೆ ಇನ್ನು ಮುಂದೆಯೂ ನಮ್ಮ ಬ್ಲಾಗಿನಲ್ಲಿ ಹೊಸತನದೊಂದಿಗೆ ಕಾಣಿಸಿಕೊಳ್ಳಲಿ . "ನಮ್ಮ ಬ್ಲಾಗ್" ನ ಮರುಚಾಲನೆಯು ಹೊಸತನದಿಂದ ಕೂಡಿದ್ದು ನಿಜಯಗಿಯು ಅರ್ಥಪೂರ್ಣವಾಗಿದೆ
---ನಿಮ್ ಹುಡ್ಗ
ಸಕ್ಕತ್ ಸಚ್ಚಿ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago