18 October 2009

Back Again..!!

HEY !! WE R BACK ... ( LET ME NOT SAY I'M BACK)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು...

{ POST FACTO, I AGREE. BUT PLEASE ACCEPT }


ಮತ್ತೆ ಎಲ್ಲ ಆರಾಮಾಗಿದೀರಿ ಅನ್ಕೋತೀನಿ...

ಒಂದು ತಿಂಗಳು ನಮ್ಮ ಜೀವನದಲ್ಲಿ 'ನಮ್ಮ ಬ್ಲಾಗ್' ABSENT ಆಗಿತ್ತು ... ಆದ್ರೆ ನೀವು ಸಿಕ್ಕಾಗ ಅದರ ಬಗ್ಗೆ ನನ್ನ ಹತ್ರ ವಿಚಾರಿಸಿ ಅದು ನಿಮ್ಮ ಮನಸಿಂದ ದೂರ ಆಗಿಲ್ಲ ಅನ್ನೋದನ್ನ ಪದೇ ಪದೇ ಸಾಬೀತು ಮಾಡೀದೀರಿ.. Thanks A Lot.

ನಾನು ನಿಮಗೆ ಹೇಳಿದ ಹಾಗೆ ಹೊಸತನದೊಂದಿಗೆ ಬರ್ತೀನಿ ಅಂದಿದ್ದೆ ...ಬಂದಿದೀನಿ : ತಂದಿದೀನಿ ಕೂಡ ...

ಇನ್ಮೇಲೆ ಇಲ್ಲಿನ ಬರಹಗಳ ಆಯಾಮ ಬದಲಿಸೋಣ ಅಂತಿದೀನಿ...

ಎಲ್ಲಿಂದಲೋ ಕದ್ದ ಸರಕು ಹೊರತುಪಡಿಸಿ ಎಲ್ಲ ಥರದ ಜ್ಞಾನ ಪ್ರಸಾರ ಇಲ್ಲಾಗ್ಲಿ...

ನಿಮಗೆ ಗೊತ್ತಿರೋ ಹೊಸ ಸುದ್ದಿ..
  • ಹೊಸ ಉದ್ಫ್ಯೋಗಾವಕಾಶಗಲಿರಬಹುದು...
  • ನೀವು ಓದಿದ ಹೊಸ ಪುಸ್ತಕ ಇರಬಹುದು
  • ಹೊಸ ಸದಭಿರುಚಿಯ ಚಿತ್ರ / ಹಾಡು - ನೀವು ನೋಡಿದ್ದು / ಕೇಳಿದ್ದು
ಹೀಗೆ NIMMA ಶಕ್ತ್ಯಾನುಸಾರ ಹಂಚಿಕೊಳ್ಳಿ ...
  • ನಿಮ್ಮ ಕವಿತೆ / ಗದ್ಯ ಗಳಿಗೆ ಎಂದಿನ ಸ್ಥಾನ ಇದ್ದೇ ಇದೆ .

ಆದ್ರೆ ಇನ್ಯಾವತ್ತೂ " ಏನ್ ರೇವಪ್ಪ ಬ್ಲಾಗ್ ಅಲ್ಲಿ ಏನೂ ಬರೀಲೇ ಇಲ್ಲ ? " ಅಂತ ಕೇಳೋ ಧೈರ್ಯ ಮಾತ್ರ ಮಾಡೋಕ್ಕೋಗ್ಬೇಡಿ ..ನಮ್ಮ ಬ್ಲಾಗ್ ನಮ್ಮೆಲ್ಲರದು - ನಾನು ಕಾರಣ ಮಾತ್ರ ವ್ಯಕ್ತಿ ..ಇಲ್ಲಿನ ಸಮಸ್ತ ಆಗುಹೋಗುಗಳು ನನ್ನ ಕೈಯಲ್ಲಿವೆ ಅನ್ನೋದು ನಿಮ್ಮ ಕರ್ತವ್ಯ ಪ್ರಜ್ಞಾ ಶೂನ್ಯತೆ ಎತ್ತಿ ತೋರಿಸುತ್ತೆ...

ಇನ್ಮೇಲೆ ಥರ ನನ್ನ ಪ್ರಶ್ನೆ ಮಾಡ್ಲಿಕ್ಕೊಗ್ಬೇಡಿ ... ಗೊತ್ತಾಯ್ತೋ ?

ಇಲ್ಲಿ ದಿನ ದಿನ ಹೊಸತನ ಬೇಕು ಅನ್ನೋದಾದ್ರೆ " ಇದು ಪ್ರಕೃತಿ ವ್ಯಾಪರದಷ್ಟು ದೈವಿಕವಾದದ್ದಲ್ಲ " - ಅನ್ನೋ ಸತ್ಯ ನಿಮಗೆ ಗೊತ್ತಿರಲಿ ... Even ಪ್ರಕೃತಿ ವ್ಯಾಪಾರ ಕೂಡ ಹೊಸತಾಗಿ ಕಾಣೋದು ನೋಡೋ ಕಣ್ಣಿನ ಶಕ್ತಿಯನ್ನ ಅವಲಂಬಿಸಿದೆ ..ಸೂರ್ಯ ದಿನವೂ ಹೊಸಬ .. ಆದ್ರೆ , ಅವನನ್ನ ದ್ರಿಷ್ಟಿಯಲ್ಲಿ ದಿನವೂ ನೋಡೋರೆಷ್ಟು ಜನ ? !
ಹೊಸತನ ಬೇಕು ಅನ್ನಿಸಿ ಬಯಸೋರು ತಮ್ಮ ಪಾಲು ಕೊಡೋದನ್ನ ಮರೆತರೆ ಅವರಿಗೆ ನರಕದಲ್ಲಿ ಒಂದು SEAT RESERVE ಆಗಿದೆ ಅನ್ನೋದನ್ನ ಮರೀಬಾರ್ದು ....

ಇಷ್ಟು ನಾನು ಹೇಳಲೆಬೇಕಾಗಿದ್ದು ...

ಇನ್ನು ನೀವು ತಿಳ್ಕೊಬೇಕಾದ್ದು ...

" ಹೊಸತನವನ್ನ ನಾಲ್ದೆಸೆಯಿಂದ ಬಯಸಿ ಪಡೆದರೆ ಸಾಲದು ಮರಳಿ ನಮ್ಮ ಪಾಲನ್ನು ನೀಡೋ ಸಹೃದಯತೆ ಬೇಕೇ ಬೇಕು. "


ನಿಮ್ಮವ,
ರೇವಪ್ಪ
------------------------------

ಇನ್ನೊಂದು ವಿಚಾರ : ಕೆಲವರಿಗೆ Personal ಅನ್ನಿಸಿದ್ರೂ ನನಗೆ ಯಾಕೋ ಹೇಳ್ಕೊಂಡೇ ಬಿಡೋಣ ಅನ್ನಿಸ್ತಿದೆ ...ಕೇಳಿ.

PDO ಪರೀಕ್ಕ್ಷೆ ಬರೆಯೋ ನೆಪದಲ್ಲಿ ನಂಗೆ ನಾನೇ ಒಂದು ಆಮಿಷ ಒಡ್ಡಿಕೊಂಡಿದ್ದೆ..

"ಪರೀಕ್ಷೆ ಸರಿಯಾಗಿ ಆದ್ರೆ ನಿನಗೊಂದು Mobile Gift ಕೊಡ್ತೀನಿ " ಅಂತ ..

ಆಮೇಲಾಮೇಲೆ ಓದಲಿಕ್ಕೆ ಕೂತಾಗೆಲ್ಲ ಅದೇ ಕಣ್ಣ ಮುಂದೆ ಬರೋದು . ಕಡೆಗೆ ನನ್ನ ವಾಗ್ದಾನಾನ ಸ್ವಲ್ಪ ಬದಲಾಯಿಸಿ ಒಂದು CORRIGENDUM issue ಮಾಡ್ದೆ ...

" ಒಳ್ಳೆ ಅಂಕ ತೆಗೆದ್ರೆ...

"ಶಾಭಾಶ್ ! ರೇವಪ್ಪ . ನಿನ್ನ ಪ್ರಯತ್ನಕ್ಕೆ ಮೆಚ್ಚಿ ಈ ಕಿರು ಕಾಣಿಕೆ ಕೊಡ್ತಿದೀನಿ ..ಒಪ್ಪಿಸ್ಕೋಬೇಕು "

ಅಂತ

ಪರೀಕ್ಷೆ ಹಾಳಾಗಿ ಹೋಯ್ತು ಅಂತಾದ್ರೆ

" ರೇವಪ್ಪ ss ... ಧೈರ್ಯ ಕಳ್ಕೋಬೇಡ . ನಿನ್ನ ಪ್ರಯತ್ನ ಮೆಚ್ಚಬೇಕಾದ್ದು . ಮುಂದಿನ ಪರೀಕ್ಷೆಯಲ್ಲಿ ನಿನ್ನ ಶ್ರೇಯಸ್ಸನ್ನ ಹಾರೈಸಿ ಇದೊಂದು ಚಿಕ್ಕ ಉಡುಗೊರೆ ನೀಡ್ತಿದೀನಿ ...ಸ್ವೀಕರಿಸ್ಬೇಕು"



ಅಂತ
.

ಪರೀಕ್ಷೆ ಹೇಗಾಯ್ತು ಅಂತ ಹೇಳೋ ಸ್ಥಿತೀಲಿ ಇಲ್ಲ ... ಇಡೀ ವ್ಯವಸ್ಥೆನೆ ರಾಜಕೀಯದಷ್ಟು ****** ( . ಯಾವ ಶಬ್ದನೂ ಸಿಗಲಿಲ್ಲ .)

ಇಂಥ ಪರಿಸ್ತಿತೀನಲ್ಲಿ ಏನು ಮಾಡ್ಬೇಕು ಅಂತ ಯಾವ Clause ಅಲ್ಲಿನೂ ಹೇಳಿರಲಿಲ್ಲ ... ಈಗ ಏನ್ ಮಾಡೋದು ?

ಏನಿಲ್ಲ ಸೀದಾ Mobile ಅಂಗಡಿಗೆ ಹೋಗೋದು ಅಂತ ತೀರ್ಮಾನ ಆಯ್ತು...ಹೋದೆ ..ತಂದೆ .

& Now It's My Love.

It's An Intelligent Phone..Has Most Of The Advanced Features.

It Has MS Office

Wi Fi

3G

Dictionary

Turn By Turn Maps

16 GB memory

... Lot's : That's Enough in Abundance.

& Cost ? [ ಬೇಡ .. ಒಬ್ಬ Junior Assistant ಅದನ್ನ ಹೇಗೆ Afford ಮಾಡ್ತಾನೆ ಅಂತ ಅನ್ನಿಸದೆ ಇರದು ]


ಇದೆಲ್ಲ ಡಂಗುರ ಸಾರೋ ಅವಶ್ಯಕತೆ ಏನಿತ್ತು ಅಂತ ಯಾರ್ಯಾರಿಗೆ ಆನಿಸಿದೆಯೋ ಅವರೆಲ್ಲ
ಇದನ್ನ " ರೇವಪ್ಪನ ಹೊಸ Mobile " ಅಂತ Heading ಹಾಕೊಂಡು ಪ್ರಬಂಧದ ರೂಪದಲ್ಲಿ ಓದಬೇಕಾಗಿ ವಿನಂತಿ.



2 comments:

sakkath sacchi.blogspot.com said...

ಹಾಯ್ "ಬ್ಲಾಗ್ ಭಯಂಕರ " ರೇವ್ , ನಮ್ಮ ಬ್ಲಾಗ್ ; ಹೊಸದಾಗಿ ಮದುವೆಯಾದ ಗಂಡು ಸಿಂಗರಿಸಿಕೊಂಡು ಠೀವಿಯಿಂದ ಹೊಸ ಹುರುಪಿನಿಂದ ಸಡಗರ ಸಂಭ್ರಮಗಳೊಂದಿಗೆ ಮೊದಲ ದೀಪಾವಳಿಗೆ ಮಾವನ ಮನೆಗೆ ಬರುವಂತೆ ಈ ದೀಪಾವಳಿಯ ಸಂಧರ್ಬದಲ್ಲಿ ನಮ್ಮ ಬಳಿಗೆ ಬರುತ್ತಿರುವುದು ; ಬಂದಿರುವುದು ನಮಗೂ ಸಂಭ್ರಮವನ್ನುಂಟು ಮಾಡಿದೆ . ನಾವು ನಮ್ಮ ಬ್ಲಾಗನ್ನು ಸಡಗರದಿಂದ ಬರಮಾಡಿಕೊಳ್ಳುತ್ತಿದ್ದೇವೆ ಹಾಗು ಎಂದಿನಂತೆ ಹೊಸ ಹುರುಪಿನೊಂದಿಗೆ ಬ್ಲಾಗಿನಲ್ಲಿ ಪಾಲ್ಗೊಳ್ಳಲಿದ್ದೇವೆ . ನಿನಗೂ , "ನಮ್ಮ ಬ್ಲಾಗಿಗೂ" ನಮ್ಮ ಅಭಿನಂದನೆಗಳು ಹಾಗು ನಮ್ಮಿಂದ ನಮ್ಮೆಲ್ಲರಿಗೂ "ಬಣ್ಣ", "ಬೆಳಕು" "ಶಬ್ದ"ಗಳ ಹಬ್ಬ ದೀಪಾವಳಿಯ ಹಾರ್ದಿಕ ವಿಳಂಬ ಶುಭಾಶಯಗಳು. "ನಮ್ಮ ಬ್ಲಾಗ್" ಬಣ್ಣಬಣ್ಣದ "ಬಣ್ಣ"ಗಳೊಂದಿಗೆ ; ಹತ್ತು ಹಲವಾರು ರೀತಿಯ ಸಂಗೀತ ಸಮಾನವಾದ "ಶಬ್ದ"ವನ್ನು ಮಾಡುತ ಜ್ಞಾನ ಹಾಗು ಸ್ನೇಹದ "ಬೆಳಕು" ಚೆಲ್ಲುತ ನಿತ್ಯ ನಿರಂತರ ದೀಪಾವಳಿಯನ್ನು ಆಚರಿಸಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ
ಎಂದು ನಿಮ್ಮವ
ಖತರ್ನಾಕ್ ಕರಿಯ
ಸಕ್ಕತ್ ಸಚ್ಚಿ

madhu.br said...

ಮತ್ತೆ ನವೀಕರಣಗೊಂಡು ಬ್ಲಾಗ್ ಲೋಕಕ್ಕೆ ಮರಳುತ್ತಿರುವ ಪುನರ್ನವಕ್ಕೆ ಶುಭಾಶಯಗಳು .....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago