31 July 2009

'ಬಿಸಿ'ಲಿಗೆ ಕರಗಿದ ಮಂಜು ...




ಮುಂದುವರಿದ ಭಾಗ..........
ಭಾರತಿ ಹಿಂದಕ್ಕೆ ಒರಗಿದ ತಕ್ಷಣವೇ ಆತನಿಗೆ ಆಕೆಯ ಭುಜ ತಾಕಿ ಮೈಯಲ್ಲೆಲ್ಲಾ ವಿದ್ಯುತ್ ಹರಿದಂತಾಯಿತು. ಆ ಮನಸುಗಳಿಗೆ ಏನಾಯಿತೋ ಮಾತಾಡದೆ ಹಾಗೆಯೇ ಕುಳಿತರು. ಆ ಸ್ಪರ್ಶ ಅವರ ಮನಸ್ಸುಗಳನ್ನು ಬೆಸೆಯುತ್ತಿತ್ತು.. ಇದುವರೆಗೂ ಯಾವ ಹೆಣ್ಣಿನ ಸ್ಪರ್ಶವನ್ನೂ ಅನುಭವಿಸದ ಆತನಿಗೆ ಈ ಸ್ಪರ್ಶಾನುಭವ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿತ್ತು, ಭಾರತಿ ಹೇಗಾಗಿದ್ದಳೆಂದರೆ ಆತನ ಸಂಗವೇ ತನಗೆ ಶ್ರೀರಕ್ಷೆ ಎಂಬಂತಾಗಿದ್ದಳು. ಬಲವಾದ ಕಾರಣವೇ ಇಲ್ಲದೆ ಸ್ಪರ್ಶಮಿಲನದಲ್ಲಿ ಮಿಂದೇಳುತ್ತಿದ್ದ ಇವರಲ್ಲಿ ಮೌನ ಪ್ರವಾಹ ಸಿಡಿದೆಳುತ್ತಿತ್ತು. ಆ ಎರಡು ಚೊಚ್ಚಲ ಪ್ರೇಮಲ ಹೃದಯಗಳಲ್ಲಿ ಪ್ರೇಮಾಂಕುರ ಮೊಳೆಯುತ್ತಿತ್ತು, ಅದು ಎಷ್ಟು ಭಯಂಕರ ಮೌನ ಪ್ರತಾಪ ತಾಳಿತ್ತೆಂದರೆ ಇವೆರಡು ಮನಗಳಿಗೆ ಯಾರ ಸಂಗವೂ ಬೇಡವಾಯಿತು.

ಇವರ ಅವಸ್ಥೆಯನ್ನು ನೋಡುತ್ತಿದ್ದ ಮನು ಮತ್ತು ರವಿ ಇವರು ಭಾವುಕರಾಗುವುದನ್ನು ತಡೆಯಲು ಮಾತಾಡಿಸಲೆಂದು ಕೀಟಲೆಯ ಮಾತುಗಳನ್ನಾಡುತ್ತಿದ್ದರು. ಈ ಕೀಟಲೆಗಳಿಗೆ ಈ ಮನಸುಗಳು ಬಲವಂತದ ನಗೆ ಬೀರಿ ಸುಮ್ಮನಿರುತ್ತಿದ್ದವು. ಬರು-ಬರುತ್ತಾ ಕಿರುನಗೆ ಮಾಯವಾಗಿ ಆಂತರ್ಯದಲ್ಲಿ ಮೊಳೆತ ಪ್ರೇಮಾಂಕುರ ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಗಂಭೀರತೆ ಮನೆ ಮಾಡಿತು., ದುಗುಡ ಭಾವ ಆವರಿಸಿತು, ಇಷ್ಟೆಲ್ಲವನ್ನು ಗಮನಿಸುತ್ತಾ ಕೀಟಲೆ ಮಾಡುತ್ತಿದ್ದ ಮನು, ರವಿ ವಿರಹ ಗೀತೆಗೆಳ ಪಲ್ಲವಿಗಳನ್ನು ಹಾಡಲು ಶುರುಮಾಡಿದರು. ಇಂತಹ ಗೀತೆಗೆಳನ್ನು ಕೇಳುತ್ತಿದ್ದ ಈ ಮನಸುಗಳಿಗೆ ಅಗಲಿಕೆಯ ಭಾವ ಎದೆಯಲ್ಲಿ ಮನೆ ಮೂಡಿತು. ಏನಾದರೂ ಅವರು ಹಾಡುತ್ತಿದ್ದ ಪಲ್ಲವಿಗಳು ಪೂರ್ಣ ಹಾಡನ್ನು ಹೊಂದಿದ್ದರೆ, ಎಲ್ಲರಿಗೂ ಕಾಣುವಂತೆ, ಕೇಳಿಸುವಂತೆ ಜೋರಾಗಿ ಈ ಎರಡು ಅಪಕ್ವ ಹೃದಯಗಳು ಅತ್ತುಬಿದುತ್ತಿದ್ದರು.

ನೋಡುಗರಿಗೆ ಇದು ಹಾಸ್ಯವಾಗಿ ಕಂಡರೂ ಇವರಿಬ್ಬರ ಮನಸುಗಳ ಬೆಸುಗೆ ಒಂದು ಕಡೆ ಹೆಚ್ಚುತ್ತಿದ್ದರೆ, ಇನ್ನೊಂದು ಕಡೆ ವಿರಹ ವೇದನಯಿಂದ ಕರಗಿ ಹೋಗುತ್ತಿದ್ದವು. ಇವೆರಡು ಹೃದಯಗಳ ಬಡಿತ ಪ್ರೇಮ ಜ್ವಾಲೆಯನ್ನು ಬಡಿದ್ದೆಬ್ಬಿಸುತ್ತಿತ್ತು. ಉಳಿದವರೇನು ಬಲ್ಲರು ಈ ಬೆರೆತ ಮನಸುಗಳ ತಿರುಳನ್ನು.!

ಇವೆರಡು ಮುಖಗಳು ಅಗಲಿಕೆಯ ನೋವಿನಿಂದ ಬಿಕ್ಕಿ-ಬಿಕ್ಕಿ ಅತ್ತ ಮುಖಗಳನ್ತಿದ್ದವು. ಮುಖವೆಲ್ಲ ಎಣ್ಣೆ ತುಂಬಿದಂತಾಗಿತ್ತು. ಇಂತಹ ಹೃದಯಗಳ ಅವಸ್ಥೆಯನ್ನು ಕಂಡು ಭಾರತಿಯ ಅಕ್ಕ, ಅಕ್ಕನ ಸ್ನೇಹಿತೆ, ಅಮ್ಮ, ಚಿಕ್ಕಮ್ಮ ಎಲ್ಲರೂ ಗಂಭೀರವಾದರು. ವಿರಹದ ಈ ಚೇತನಗಳನ್ನು ನೋಡಿದ ಅವರ ಭಾವನೆಗಳು ದೈನ್ಯವಾದವು. ಈ ಎರಡು ಪುಟ್ಟ ಹೃದಯಗಳಿಗೆ ಮರುಕ ಪಡುವಂತಾಯಿತು, ಕರುಣೆದೊರುವಂತಾಯಿತು, ಎಲ್ಲರೂ ಮೌನವಾದರು.

ಈ ಹೃದಯಗಳಲ್ಲಿ ಎಂತಹ ಘರ್ಷಣೆ ನಡೆಯುತ್ತಿತ್ತೆಂದರೆ, ವಿರಹದಲ್ಲಿ ಈ ಚೇತನಗಳು ಕರಗಿ ಹೋಗುತ್ತವೇನೋ ಎಂಬಂತಹ ಭಾವನೆ ಎಲ್ಲರಲ್ಲಿಯು ಮನೆ ಮಾಡುತ್ತಿತ್ತು. ಇಷ್ಟೆಲ್ಲಾ ಆದರೂ ಆ ಮೌನವನ್ನು ಸೀಳುವಂತಹ ಶಬ್ದ ಯಾರಿಂದಲೂ ಬರಲಿಲ್ಲ. ರೈಲು ಚಲಿಸುತ್ತಿತ್ತು, ಭಾರತಿ ಮತ್ತು ಆತನ ಸ್ಪರ್ಶ ಅವರಿಬ್ಬರ ಮನಸ್ಸುಗಳನ್ನು ಮಾತಾಡಿಸುತ್ತಿತ್ತು, ಪ್ರೆಮಾನ್ಕುರದಲ್ಲಿ ವಿಹರಿಸಬೇಕಾದ ಈ ಹೃದಯಗಳು ವಿರಹ ವೇದನೆಯ ಬೆಂಕಿಯಲ್ಲಿ ಬಿದ್ದು ಒದ್ದಾಡುತ್ತಿದ್ದವು.

ಈ ಪ್ರವಾಹ ಘರ್ಷಣೆಗಳು ಸಾಗುತ್ತಿದ್ದಾಗಲೇ.................................... ದಾವಣಗೆರೆಯ ಸಮೀಪಕ್ಕೆ ರೈಲು ಬಂದಿತು., ರೈಲು ನಿಂತ ತಕ್ಷಣ ಎಲ್ಲರೂ ತಮ್ಮ-ತಮ್ಮ ಲಗೇಜುಗಳನ್ನು ತೆಗೆದುಕೊಂಡರು.

ಇವರಿಬ್ಬರ ಅಪ್ಪುಗೆ ಬಿಡಿಸಲಾರದನ್ತಾಗಿತ್ತು. ಎಲ್ಲರೂ ಹೊರಡುವ ಕೊನೆಯಲ್ಲಿ ಇವರುಬ್ಬರು ಬಲವಂತವಾಗಿ ಎದ್ದು ನಿಂತರು. ಎದ್ದು ನಿಂತಾಗ ಚೊಚ್ಚಲ ಹೃದಯಗಳ ಕಣ್ಣುಗಳು ಬೆರೆತವು. ಯಾಂತ್ರಿಕವಾಗಿ ಅವರ ಕೈಗಳು ಲಗೇಜುಗಳನ್ನು ಹಿಡಿದುಕೊಂದವು. ದೂರಾಗುವ ಭಯ ಹೆಜ್ಜೆ-ಹೆಜ್ಜೆಗೂ ಹೆಚ್ಚುತ್ತಿತ್ತು. ಬಾಯಿಂದ ಒಂದು ಶಬ್ದವೂ ಹೊರಡುತ್ತಿಲ್ಲ. ಗಂಟಲು ಬಿಗಿದಂತಾಗಿ ದುಃಖ ಉಕ್ಕಿ ಬರುತ್ತಿದೆ. ಕಣ್ಣುಗಳು ಕಲೆತು ಒಳಗಿನ ಯಾವ ಗುಟ್ಟನ್ನು ಕೇಳುತ್ತಾ-ಹೇಳುತ್ತಿದ್ದವೋ,!! ನೋಡುಗರಿಗೆ ವಿಚಿತ್ರ , ವಿಶೇಷ ಅನುಭವವಾಗುತ್ತಿತ್ತು, ರೈಲಿನಿಂದ ಕೆಳಗಿಳಿದ ತಕ್ಷಣ ಆತ ಹೊರ ಪ್ರಪಂಚಕ್ಕೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ. ತನಗೇನಾಗುತ್ತಿದೆಯೆಂದು ಅರಿಯದವನಾದ. ಭಾರತಿ ಆತನನ್ನು , ಭಾರತಿಯನ್ನು ಕಟ್ಟಿ ಹಾಕಿದಂತಿತ್ತು. ರೈಲು ದಾವಣಗೆರೆ ತಲುಪಿದಾಗ ಬೆಳಗ್ಗೆ ೧೧.೩೦. ಗಂಟೆಯಾಗಿತ್ತು.

ಕೆಳಗಿಳಿದ ಎಲ್ಲರೂ ಲಗೇಜುಗಳೊಂದಿಗೆ ನಿಂತು ಇವರಿಬ್ಬರನ್ನು ಕಾಯುತ್ತಿದ್ದರು. ಇವರೂ ಕೂಡ ಎಲ್ಲರೂ ಇದ್ದಲ್ಲಿಗೆ ಹೋದರು. ಆತ ದುಗುಡ ತುಂಬಿದ ಧ್ವನಿಯಿಂದ ಭಾರತಿಯ ಚಿಕ್ಕಮ್ಮನಿಗೆ "ಆಂಟಿ ನಾವು ಬರ್ತೇವೆ " ಎಂದು ತೊದಲು ನುಡಿದ. ಹಾಗೆಯೇ ಭಾರತಿಯ ಅಮ್ಮ , ಅಕ್ಕ , ಅಕ್ಕನ ಸ್ನೇಹಿತೆ ಎಲ್ಲರಿಗೂ "ಹೋಗ್ಗ್ ಬರ್ತೇವೆ " ಎಂದ.

ಆತನ ಮತ್ತು ಭಾರತಿಯ ಹೃದಯಗಳಲ್ಲಿ ಜ್ವಾಲಾಮುಖಿಯ ಅಲೆಗಳು ಸಿಡಿದೇಳುತ್ತಿದ್ದವು. ಆತ ಪ್ರಯಾಸದಿಂದ ಆ ಭಾವನೆಯನ್ನು ಅದುಮಿಟ್ಟುಕೊಂಡು ಭಾರತಿಯ ಮುಖವನ್ನೊಮ್ಮೆ ನೋಡಿ "ನಾನ್ ಹೋಗಿ ಬರ್ತೇನೆ........................." ಗದ್ಗದಿತನಾಗಿದ್ದ. ಇದು ಆತನ ಆಂತರ್ಯದಿಂದ ಬಂದದ್ದಾಗಿರಲಿಲ್ಲ..

ಅವಳ ಕಣ್ಣಲ್ಲಿ ಹನಿಯೊಡೆಯುತ್ತಿತ್ತು, ಏನೂ ಮಾತಾಡದೆ ತಲೆಯಾಡಿಸಿ ತಲೆ ತಗ್ಗಿಸಿದಳು. ಒಂದು ಹನಿ ಕಣ್ಣಿಂದ ಮುತ್ತಾಗಿ ಕೆಳಗೆ ಬಿತ್ತು. ಅದನ್ನೆಲ್ಲರೂ ಗಮನಿಸುತ್ತಿದ್ದರು. ಅಷ್ಟರಲ್ಲಿ ಭಾರತಿಯ ಚಿಕ್ಕಮ್ಮ " ನೀವು ದಾವನ್ಗೆರೆಗ್ ಬಂದ್ರೆ ನಮ್ಮನೆಗೆ ಬನ್ನಿ, ನಮ್ಮನೆ ಇಲ್ಲೇ ವಿನೋಬನಗರದ ೧೯ನೆ ಕ್ರಾಸ್......................." ಎಂದು ವಿಳಾಸವನ್ನು ಹೇಳಿದರು. ಆತ "ಆಯ್ತು ಆಂಟಿ ಖಂಡಿತ ಬರ್ತೇವೆ " ಎಂದ . ಆತ ಏನು ಮಾತಾಡಿದರೂ ತನ್ನೊಳಗೆ ಏಳುತ್ತಿದ್ದ ಭಾವನೆಗಳನ್ನು, ತನ್ನ ಮೇಲೆ ಬೀಳುತ್ತಿದ್ದ ಭಾರವಾದ ಹೆಬ್ಬಂಡೆಗಳನ್ನು ತಡೆಯದವನಾದ. ಮುಂದೇನು ಮಾಡಬೇಕೆಂಬುದೇ ಆತನಿಗೆ ತೋಚುತ್ತಿರಲಿಲ್ಲ ಕಣ್ಣು ಕತ್ತಲುಗೂಡಿಸುತ್ತಿದ್ದವು.

ಅವರೆಲ್ಲ ಹೊರಟರು ಆತ ಅಲ್ಲೇ ನಿಂತಿದ್ದ. ಭಾರತಿ ಆತನ ಮುಖವನ್ನೊಮ್ಮೆ ನೋಡಿದಳು. ಅವಳ ಕಣ್ಣಿನ ತೀಕ್ಷ್ಣತೆ ಅವನನ್ನು ಇರಿದು ಕೊಲ್ಲುತ್ತಿತ್ತು. ಅವನನ್ನು ನೋಡ-ನೋಡುತ್ತಲೇ ಕಾಲ್ಗಳು ಭಾರವಾದ ಹೆಜ್ಜೆ ಎಣಿಸುತ್ತಿದ್ದವು. ನಿಲ್ದಾಣದ ಆಚೆಗಿನ ದಾರಿಯಲ್ಲಿ ಅವರೆಲ್ಲ ಹೋದರು. ಇನ್ನೇನು ಆತ ಕುಸಿದು ಬೀಳುವನೇನೋ ಎಂದು ಭಾಸವಾಗುತ್ತಿತ್ತು , ಅವರೆಲ್ಲ ಮರೆಯಾಗುವ ಕೊನೆಯಲ್ಲಿ ಭಾರತಿ ಮತ್ತೊಮ್ಮೆ ತಿರುಗಿ ಆತನ ಕಡೆ ನಿರೀಕ್ಷೆಯ ಕಂಗಳನ್ನು ಬೀರಿದಳು. ಹಾಗೆ ಮರೆಯಾದಳು...........
ಆತನನ್ನು ರವಿ, ಮನು ನಿಲ್ದಾಣದ ಹೊರಗೆ ಕರೆ ತಂದು , ಆಟೋಕ್ಕಾಗಿ ಕಾಯುತ್ತಿದ್ದಾಗ ಮುಂದುಗಡೆಯಿಂದ ಒಂದು ಆಟೋ ಚಲಿಸಿತು. ಆ ಆಟೋದಲ್ಲಿ ಅವರೆಲ್ಲರೂ ಇದ್ದರು. ರವಿ ಮನು ಅವರಿಗೆ ವಿದಾಯ ಹೇಳಿದರು. ಭಾರತಿ ಕಾಣಲಿಲ್ಲ. ಆಟೋ ಅವರ ಮುಂದುಗಡೆಯಿಂದ ಎಡಕ್ಕೆ ಸಾಗಿ ಬಲಕ್ಕೆ ತಿರುಗಿತು. ಆಟೋದ ಬಲಭಾಗಕ್ಕೆ ಕುಳಿತಿದ್ದ ಭಾರತಿ ಆತ ಕಂಡ ತಕ್ಷಣ ಕೈ ಎತ್ತಿ ಟಾಟಾ ಮಾಡಲು ಶುರು ಮಾಡಿದಳು. ಆತನೂ ಕೂಡ ಆಕೆಗೆ ಸ್ಪಂದಿಸಿದ.

ಇವರಿಬ್ಬರ ಎತ್ತಿದ ಕೈಗಳು ಮುಂದೆಂದಾದರೂ ನಾವು ಒಂದಾಗೆ ಆಗುತ್ತೇವೆ.ಎಂಬ ಭರವಸೆಯ ಸಂದೇಶ ಸಾರುವನ್ತಿದ್ದವು. ಅದು ಭರವಸೆ ಮಾತ್ರವಾಗಿತ್ತು.ಆಟೋ ಮರೆಯಾದಾಗ ಆತನ ಎತ್ತಿದ ಕೈ ಭಾರವಾಗಿ ಧರೆಗುರುಳಿತು. ನಿಂತ ನೆಲ ಅದುರುತ್ತಿತ್ತು. ಕುಸಿದು ಬೀಳುವೆನೇನೋ ಅನಿಸುತ್ತಿತ್ತು.ರವಿ ಮನುವಿನೊಂದಿಗೆ ಆತ ಊರಿಗೆ ಹೋದ . ಊರಲ್ಲಿನ ಸ್ನೇಹಿತರ ಒಡನಾಟ ಅವನ ಮನಸ್ಸಿನ ದುಗುಡವನ್ನು ಸ್ವಲ್ಪ ಮರೆ ಮಾಡಿತು.

ಆದರೂ ಪದೇ-ಪದೇ ನೆನಪ[ಆಗುತ್ತಿದ್ದ ಭಾರತಿಯನ್ನು ನೋಡಬೇಕೆಂಬ ತವಕ ಆತನನ್ನು ಕಾಡಿದಾಗ ಆತನಿಗೆ ದಾವಣಗೆರೆಗೆ ಹೋಗಬೇಕೆನ್ನಿಸಿತು. ಈ ಘಟನೆ ನಡೆದದ್ದು ಶನಿವಾರ. ಆಗ ಭಾರತಿ 'ನಾವೆಲ್ಲಾ ಗುರುವಾರ ವಾಪಸ್ ಬೆಳಗಾವಿಗೆ ಹೋಗುತ್ತೇವೆ ' ಎಂದಿದ್ದಳು. ಆದರೆ ವಿರಹ ವೇದನೆಯಲ್ಲಿ ಮುಳುಗಿದ್ದ ಅವನಿಗೆ ಭಾರತಿಯ ಚಿಕ್ಕಮ್ಮ ಹೇಳಿದ್ದ ವಿಳಾಸ ಮರೆತು ಹೋಗಿತ್ತು. ಅಲ್ಲದೆ ಆತನ ಮನೆಯ ಕೆಲವು ಪರಿಸ್ಥಿತಿಯಿಂದಾಗಿ ಆತನಿಗೆ ಹೋಗಲು ಆಗಲಿಲ್ಲ.

ಈ ಮುರೂವರೆ ಘಂಟೆಯಲ್ಲಿ ನಡೆದ ಘಟನೆಯನ್ನು ಆತ ಈಗಲೂ ನೆನೆಸಿಕೊಳ್ಳುತ್ತಾನೆ. ಕೆಲವೇ ಸಮಯದಲ್ಲಿ ಆತನ ಹೃದಯವನ್ನು ಚುಂಬಿಸಿದ ಆ ಮಧುರ ಮನಸಿಗೆ ವಂದನೆ ಸಲ್ಲಿಸುತ್ತಾನೆ. ಒಂದು ರೀತಿಯ ಆನಂದವನ್ನು ಅನುಭವಿಸುತ್ತಾನೆ. ಆ ಪ್ರೀತಿಯನ್ನು ಆರಾಧಿಸುತ್ತಾನೆ. ಆತನ ಕಿವಿಯಲ್ಲಿ ಭಾರತಿಯ ಸ್ವರ ರಿಂಗಣಿಸುತ್ತಿರುತ್ತದೆ........
ಈಗ ಆತ ನನ್ನ ಹಾಗೆಯೇ ಸರ್ಕಾರಿ ನೌಕರಿಯಲ್ಲಿದ್ದಾನೆ. ಅವನು ಅಂದುಕೊಂಡ ಸಾಧನೆಗಳ ಗುರಿಯನ್ನು ತಲುಪಲು ಶ್ರಮ ಪಡುತ್ತಿದ್ದಾನೆ ಅವನ ಸಾಧನೆಗೆ ಅವಳ ನೆನಪು ಸಾಥ್ ಕೊಡುತ್ತಿದೆ. ಈಗ ಅವನೊಂದಿಗೆ ಭಾರತಿಯಿಲ್ಲ. ಆದರೆ ಅವಳ ನೆನಪು , ರೂಪು, ಚೆಲುವು, ಅವನ ಮನಸ್ಸಿಗೆ ಬೇಸರಾದಾಗ ಚೈತನ್ಯವನ್ನು ತುಂಬುತ್ತವೆ. ಆತ ನನಗೆ ತುಂಬಾ ಹತ್ತಿರದ ಸ್ನೇಹಿತ. ನಮ್ಮ ಊರಿನವನೇ ಆಗಿ ನನಗೆ ಆತ್ಮೀಯನಾಗಿದ್ದಾನೆ. ಇದು ಆತನ ಜೀವನದಲ್ಲಿ ನಡೆದ ಸತ್ಯ ಘಟನೆ. ಹೀಗೆಯೇ ಕೆಲವರ ಜೀವನದಲ್ಲಿ ಇಂತಹ ಘಟನೆಗಳು ನಡೆದಿರಬಹುದಲ್ಲವೇ. ...................................!



1 comment:

amartya-aditi said...

it is a beautiful story which blows the wind of tenderness and freshness.

Ramesha.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago