01 June 2009

ಪುನರ್ನವ

ಪುನರ್ನವ .........ಹೇಗಿದೆ ಹೆಸರು ?

ಇನ್ನು ಮೇಲೆ ಅಂದರೆ ಇವತ್ತಿನಿಂದಾ ನಮ್ಮ ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ ಹೊಸ ರೂಪಕ್ಕೆ ಹೊಸ ಹೆಸರು ...

'ಪುನರ್ನವ - ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ 1.0'


ಇಂದು ನಮ್ಮ ಬ್ಲಾಗ್ ನಲ್ಲಿ Almost ಎಲ್ಲವು ಹೊಸತಾಗಿದೆ ....

ಪ್ರತಿ ದಿನ ಹೊಸಬನಾಗಿ ಹುಟ್ಟಿ ಬರೋ ಭಾಸ್ಕರನೇ ನಮಗೆ ಸ್ಫೂರ್ತಿ .


"ಹರಿದರೆ ಹರಿಯಬೇಕು ಹೊಳೆಯಾಗಿ
ನಿಂತರೆ ನಿಲ್ಲಬೇಕು ಕಡಲಾಗಿ ;
ಪಾಚಿಗಟ್ಟಿ ಹೊಂಡವಾಗಿ ಇಂಗುವ ಬದುಕು
ಯಾರಿಗೆ ಬೇಕು ?"

ಅಂತ ನಮ್ಮ ಸಿ.ಪಿ.ಕೆ. ಯವರ ಪ್ರಶ್ನೆ /ಇಂಗಿತ ....

ಬದಲಾವಣೆ ಅನ್ನೋದು ಹೊರರೂಪಕ್ಕೆ ಆದರೆ ಸಾಲದು ...ಅಂತರಂಗದ ಬದಲಾವಣೆ ಅತಿ ಮುಖ್ಯ ...

ನನಗೆ ಸಾಹಿತ್ಯಿಕವಾಗಿ ಬರೆಯೋದಕ್ಕೆ ಬರೋದಿಲ್ಲ ...

ಹೀಗಾಗಿ ಸುಮ್ನೆ ಬ್ಲಾಗ್ ಸುಧಾರಣೆ ಕಡೆಗೆ ಗಮನ ನೀಡೋದು ನನ್ನ ಕೆಲಸವಾಗುತ್ತೆ ....

ಬರಿಲಿಕ್ಕೆ ದೇವರಿಂದ ವರ ಪಡೆದುಕೊಂಡು ಬಂದಿರೋ ನಿಮ್ಮಲ್ಲಿರೋ Chosen Few ಗಳು ಕಥೆ , ಕವನಬರಿಬೇಕಾಗಿದೆ .

ನಮ್ಮ ಬ್ಲಾಗ್ ನಲ್ಲಿ ಇನ್ನು ಮೇಲೆ ಕಥೆ ಕವನಗಳ ಜೊತೆ ಜೊತೆಗೆ ಇನ್ನೂ ಹಲವು ಪ್ರಾಕಾರದ ಬರವಣಿಗೆಗಳನ್ನುಪ್ರಯತ್ನಿಸಬಹುದು .

...
 • ಕಾದಂಬರಿ - ಅಂದರೆ ಕನಿಷ್ಠ ನಾಲ್ಕು ದಿವಸ ಎಳೆದುಕೊಂಡು ಹೋಗಬಹುದಾದ ದೊಡ್ಡ ಕತೆಗಳು
 • ವ್ಯಕ್ತಿತ್ವ ನಿರ್ಮಾಣಕ್ಕೆ ಅನುಕೂಲ ಆಗೋ ಅಂತ ಲೇಖನಗಳು
 • ಜ್ಞಾನ ವೃದ್ಧಿಗೆ ಸಹಾಯ ಮಾಡೋವಂಥವು
 • ಚಿತ್ರ ಕಥೆಗಳು / ಕವನಗಳು - ಅಂದ್ರೆ ಕೊಟ್ಟಿರೋ ಚಿತ್ರ ನೋಡಿ ಕಥೆ /ಕವನ ಊಹಿಸಿ ಬರೆಯೋದು
 • ನಾಲ್ಕಾರು ಜನರನ್ನ ಮೊದಲೇ ಅಹ್ವಾನಿಸಿ, ಒಂದು Topic ಮೇಲೆ ಚರ್ಚೆ ಶುರು ಮಾಡೋದು
 • ಸಾಧಕರ ಪರಿಚಯ
 • ಪುಸ್ತಕ ಪರಿಚಯ
 • ನಿಮಗಿಷ್ಟವಾದ ಸಿನೆಮಾ ಪರಿಚಯಿಸಿ

ಇಲ್ಲಿ ಒಂದು ವಿಷಯ ನಾವೆಲ್ಲರೂ ಗಮನಿಸಬೇಕು....... ಮೇಲಿನ ಎಲ್ಲ ಥರದ ಪ್ರಾಕಾರಕ್ಕೆ ನಮ್ಮ ಕೊಡುಗೆ
ಸ್ವಂತದ್ದಾಗಿರಬೇಕು...ಕಳ್ಳತನ ಎಂದಿಗೂ ಸಲ್ಲ ...

15 ದಿನಗಳ ನಿರಂತರ Fatigue ನಿಂದಾಗಿ ನನ್ನ ತಲೆಯಲ್ಲಿ ಏನಂದ್ರೆ ಏನು ವಿಚಾರ ಬರ್ತಿಲ್ಲ ...

ನಾಲ್ಕು ಸಾಲು ಬರಿಲಿಕ್ಕೆ ಇಡಿ ದಿನ ತಗೊಂಡೆ ...Mind Block ಆಗೋಗಿದೆ ...And

And I Need Rest For Atleast One Week...


ನಾಳೆಯಿಂದ ಐದು ದಿನ ಸಂಪೂರ್ಣ ನಿಮ್ಮ ಜವಾಬ್ದಾರಿ ....

ನೀವು ಕಳಿಸಿರೋ e-mail Publish ಮಾಡೋದು ಬಿಟ್ಟು ಬೇರಿನ್ನಾವ ಕೆಲಸನೂ ಮಾಡೋದಿಲ್ಲ ...

ನನ್ನ e-Mail Inbox ನಲ್ಲಿ ಸದ್ಯಕ್ಕೆ ಕೇವಲ ಒಂದು Contribution ಮಾತ್ರ ಬಾಕಿ ಇದೆ ...


Thanks A Lot For Supporting My Ideas,

Revappa
ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ |
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ||
ಹೊಸ ಸೃಷ್ಟಿಸತ್ವ ಮೆತ್ತಣಿನೋ ಬರುತನುದಿನಂ |
ಪೊಸತಾಗಿಪುದು ಜಗವ - ಮಂಕುತಿಮ್ಮ ||


------------1 comment:

Parashu..., said...

ಹಾಯ್
ರೇವಪ್ಪ
'ಪುನರ್ನವ' ಹೆಸರು ತುಂಬಾ ಚೆನ್ನಾಗಿದೆ. ಇದೇ ಇರಲಿ ಹಾಗೂ ನಮ್ಮ ಅಷ್ಟುದ್ದ ಹೆಸರಿನೊಂದಿಗೆ ಪ್ರತಿದಿನ ಬ್ಲಾಗ್ ನಲ್ಲಿ ಕಾಣುತ್ತಿರಲಿ...

ಇನ್ನು ಬ್ಲಾಗ್ ನ ಇತರೆ ಬದಲಾವಣೆಗಳ ಬಗ್ಗೆ ಮೆಚ್ಚುಗೆ ಸದಾ ಇದೆ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago