06 May 2009

ಮಳೆ ಹುಯ್ಯುತಿದೆ ಎಲ್ಲಾ ನೆನಪಾಗುತಿದೆ...

{


ಈ ಲೇಖನನ ನಮ್ಮ ಪರಶುರಾಮ್ ಮೊನ್ನೆ ಮಳೆ ಬಂದ ದಿನಾನೇ ready ಮಾಡಿದ್ರು ...

ಆದ್ರೆ ಸ್ವಲ್ಪ ಲೇಟಾಗಿ ನನ್ಗೆ
ಕಳ್ಸಿದ್ರು ...ಅದ್ಕೆ ನಾನು ಮಳೆ ಬರಲಿ ಅಂತ ಕಾಯ್ತಿದ್ದೆ ...


ಸ್ವಲ್ಪ kick ಇ
ರುತ್ತೆ ನೋಡಿ ಅದಕ್ಕೆ ...

Internetನಲ್ಲಿ ಮುಂದಿನ ೫ ದಿನಗಳ ಹವಾಮಾನ ವರದಿನೂ ನೋಡ್ದೆ ....

ಆದ್ರೆ ಯಾವುದೇ
green signal ಕಾಣ್ಲೇ ಇಲ್ಲ ...

ಸರಿ ನಮ್ಮ ಓದುಗರು / ನೋಡುಗರು ಆ ದಿನಗಳಿಗೆ ಸರಳವಾಗಿ ಜಾರುವಷ್ಟು ನಿಸ್ಸ್ಸೀಮರು ಅಂತ ಗೊತ್ತು

ನಂಗೆ ...ಅಲ್ದೆ , ಪರಶುರಾಮ್ ಲೇಖನಕ್ಕೂ ಆ ಸಾಮರ್ಥ್ಯ ಇದೆ ...

ಹೀಗಾಗಿ ಒಂದು
ಕೈ ನೋಡೇ ಬಿಡೋಣ ಅಂತ ಇವತ್ತೇ ಹಾಕ್ತಿದೀನಿ ...

ನಿನ್ನೆ ಮಧ್ಯಾಹ್ನ ಕೆಲವ್ರು Already ಸ್ವಲ್ಪ ಓದಿರಬಹುದು ...ಆವಾಗ page setting ಮಾಡ್ತಿದ್ದೆ ....

ನನ್ನ ಮನೆ computer ಇರೋದು 22" inch ದೈತ್ಯ ....

ಇಲ್ಲಿ office ಅಲ್ಲಿ ಜಾಸ್ತಿ ಜನರ ಹತ್ರ ಇರೋದು 14" ( desktop screen ) ...

ಅದಕ್ಕೆ ಆ ಕಷ್ಟ ಆಯ್ತು ...


[ 'ಮೊಗ್ಗಿನ ಮನಸು' ಇಂದ "ಮಳೆ ಬರುವ ಹಾಗಿದೆ ..." ಒಂದು ಸಾರಿ ಕೇಳಿ ನೋಡಿ ..Mood ಬರುತ್ತೆ !!
ಯಾಕಂದ್ರೆ ಇಷ್ಟು ಬರಿಲಿಕ್ಕೆ 5ನೇ ಸಾರಿ ಅದನ್ನೇ ಕೇಳ್ತಿದೀನಿ ...]


---------------------

ನಾನು ಇಲ್ಲಿ ನಿಮಗೆ
ಯಾವತ್ತೂ 5 STAR FACILITY ಕೊಡೋ ಪ್ರಯತ್ನ ಮಾಡ್ತೀನಿ ...

Because You Deserve It..
.

& U R The Chosen Few In KPSC Exam For Secretriat

From All Over The State....

ಯಾವಾಗ್ಲೂ ಅಷ್ಟೇನೆ ....

ಪಂಚತಾರಾ ಹೋಟೆಲ್ ಗಳಿರೋದು ಆ ಲೆವೆಲ್ ಜನರಿಗೇನೆ...

ಬೇರೆಯವರಿಗೆ ಅಲ್ಲಿನ ಶಿಷ್ಟಾಚಾರಗಳು ಗೊತ್ತಿರೋ
ಲ್ಲ ...

ಯಾಕಂದ್ರೆ ಇದು ಕುತೂಹಲ ತೀರಿಸಿಕೊಳ್ಳಿಕ್ಕೆ ಒಂದು ಸಲ ಅಲ್ಲಿಗೆ ಹೋದಂಗಲ್ಲ ....

ನೀವು ಪ್ರತಿ ದಿನಾ ಬೆಳಿಗ್ಗೆ ಟೀ ಇಂದ ಹಿಡಿದು ರಾತ್ರಿ ಮಲಗೋ ಬೆಡ್ ವರೆಗೂ ಎಲ್ವು 5 star ...secretriatಅಲ್ಲಿ ಇರೋವರೆಗೂ




Because U R The Chosen Few....

So Maintain The Etiquette's
.






Enjoy The Rain,
Revappa
}








ಮಳೆ ಹುಯ್ಯುತಿದೆ ಎಲ್ಲಾ ನೆನಪಾಗುತಿದೆ...



ಯು.ಆರ್.ಅನಂತ್ಮೂರ್ತಿಯವರ ಪ್ರಸಿದ್ದ ಸಾಲಿದು.

ಮಳೆಯೊಂದಿಗೆ
ಬೆರೆತ ನಮ್ಮ ನೆನಪಿನಾಳದ ಪದರಗಳನ್ನು ಎಳೆ ಎಳೆಯಾಗಿ ತೆರೆದಿಡುವ ಸಾಲು.

ಹೌದು
, ಮಳೆ ಎಂಬುದೇ ಹೀಗೆ,ಅದು ಸುರಿಯುವ ಪರಿಯ ನೋಡುತ ಕುಳಿತರೆ ಮನಸ್ಸು ನೆನಪಿನಾಳಕ್ಕೆ ತನ್ನಿಂದ ತಾನೇ ಜಾರುತ್ತಾ ಸಾಗುತ್ತದೆ.










ಹೊರಗೆ
ಜಿರ್ರೆ0ದು ಸುರಿಯುವ ಮಳೆಯಿಂದಾಗಿ ತಂಡಾ ತಂಡ- ಕೂಲ್ ಕೂಲ್ ವಾತಾವರಣವಿದ್ದಾಗ, ಒಳಗೆ ಹಾಟ್ & ಸ್ವೀಟ್ ಚಹಾ ಹೀರುತ್ತಾ ಕಿಟಕಿಯ ಸರಳುಗಳ ಸಂದಿಯಲಿ ಮಳೆಯನ್ನೇ ದಿಟ್ಟಿಸಿ ನೋಡಿದರೆ ನಮ್ಮ ಮನಸ್ಸು ವರ್ಷದಿಂದ ವರ್ಷದ ಹಿಂದೆ ಸಾಗುತ್ತಾ ಮಳೆಯೊಂದಿಗೆ ಬೆಳೆದ ಬಾಲ್ಯದ ದಿನಗಳನ್ನು ನೆನಪಿಸುತ್ತದೆ.






ನಿಜ
.
ಮಳೆಯೊಂದಿಗೆ
ಬೆಳೆಯದ ಬಾಲ್ಯವಿಲ್ಲವೇನೋ..!?



ಬಾಲ್ಯದಲ್ಲಿ
ಮಳೆ ಬರುವ ಮುನ್ಸೂಚನೆ ಇದೆ ಎಂದಾಗಲೇ ಗೆಳೆಯರೊಡಗೂಡಿ ಅಂಗಳಕ್ಕೆ ಬಂದು













"ಹುಯ್ಯೋ
ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ" ಎಂದು ಹಾಡಿ-ಕುಣಿದದ್ದು,



ಮುಂಗಾರಿನ
ಹನಿಮಳೆಗೆ ತೋಯ್ದ ಮಣ್ಣಿನ ಅನನ್ಯ ವಾಸನೆಗೆ ಹಿಗ್ಗಿನಲಿದಿದ್ದು,


ಮಳೆಯೊಂದಿಗೇ
ಬೀಳುವ ಪುಟ್ಟ ಪುಟ್ಟ ಆಲಿಕಲ್ಲುಗಳನ್ನು ಆಯ್ದು

ಲೋಟದಲ್ಲಿ
ಶೇಖರಿಸಿಟ್ಟಿದ್ದು,



ಆಯ್ದಿಟ್ಟ
ಅರೆಗಳಿಗೆಯಲ್ಲೇ ಆಲಿಕಲ್ಲುಗಳು ಮಾಯವಾಗಿ ಲೋಟದಡಿಯಲ್ಲಿ ತಣ್ಣನೆ ನೀರು ಮಾತ್ರ ಉಳಿದದ್ದು,



ಮಳೆ
ನಿಂತು ಹೋದ ಮೇಲೆ ಕೆಂಬಣ್ಣದಿಂದ ಹರಿಯುವ ಚರಂಡಿಯ ನೀರಿನಲ್ಲಿ



ಕಾಗದದ
ದೋಣಿ ಮಾಡಿ ಬಿಟ್ಟಿದ್ದು,

ಒದ್ದೆ ಬಟ್ಟೆಯಲ್ಲೇ ಒಳಬಂದು ಅಪ್ಪ-ಅಮ್ಮನಿಂದ ಬೈಯಿಸಿಕೊಂಡರೂ ಅಜ್ಜಿಯ ಪ್ರೀತಿಗಳಿಸಿ ಅವಳ ಬೆಚ್ಚನೆ ಮಡಿಲಲ್ಲಿ ಮುಖ ಹುದುಗಿಸಿ ಬಚಾವಾದದ್ದು....

ಹೀಗೆ ಎಲ್ಲವೂ ನೆನಪಾಗುತ್ತದೆ.





ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಮಳೆಕಡಿಮೆ.

ಕಡಿಮೆ ಮಳೆಯಿಂದಾಗಿಯೇ ಇಷ್ಟೊಂದು ಅಗಾಧ ಅಭಿವೃದ್ಧಿ ಸಾಧ್ಯವಾಗಿರಬಹುದೇನೋ..?


ಬೆಂಗಳೂರಿನ ರಸ್ತೆಗಳು ಹೇಮಮಾಲಿನಿಯ ಕೆನ್ನೆಯಂತೆ (ಲಾಲೂ ಹೇಳಿಕೆ)

ನುಣುಪಾಗಿರ
ಲು ಮಳೆಯ ಕೃಪೆ ಕೂಡಾ ಕಾರಣವಿರಬಹುದು..!

ಇಲ್ಲಿ ಮಳೆ ಕಡಿಮೆಯಾದರೂ ಅದು ಸೃಷ್ಠಿಸುವ ಆವಾಂತರಗಳು ಅಪಾರ..!
ನೆನಪಿನಲ್ಲುಳಿಸುವ ಘಟನೆಗಳೂ ಅಧಿಕ..!











ಆಫೀಸು
ಮುಗಿಸಿ ಪಿಎಚ್ಎಸ್ ಬಸ್ಸಿನಲ್ಲಿ ಕಿಟಕಿ ಬದಿಯ ಸೀಟಿನಲ್ಲಿ ಬಿಗುಮಾನದಿಂದ ಕೂತಿದ್ದರೆ ಅಚಾನಕ್ಕಾಗಿ ಬಂದಮಳೆ ಬಸ್ಸಿನೊಳಗಡೆಯೂ ತೂರಿ ಸೀಟು ಬಿಟ್ಟೇಳುವಂತೆ ಮಾಡಿದ್ದು ನೆನಪಾಗುತ್ತದೆ. ಒಂದು ಸಾಧಾರಣ ಮಳೆಗೇ ಅಂಡರ್ ಪಾಸ್ ಅಡಿ ಬಸ್ಸು ದಾಟದಷ್ಟು ನೀರು ನಿಂತಿದ್ದು ನೆನಪಾಗುತ್ತದೆ.










ಮಳೆ
ಎಂದಾಕ್ಷಣ ನಮಗೆ ಮಳೆಯಲ್ಲಿ ನೆನೆದ ಘಟನೆಯೊಂದು ಮಾತ್ರ ನೆನಪಾಗುವುದಿಲ್ಲ. ಎಂದೋ

ಒಂದು
ದಿನ ಮಳೆಯೊಂದಿಗೆ ಬಂದ ಸಿಡಿಲು ಪಕ್ಕದಲ್ಲೇ

ಬಡಿಯಿತೆನೋ
ಎಂಬಂತೆ ಆರ್ಭಟಿಸಿದ್ದು ನೆನಪಾಗುತ್ತದೆ.

ಮಳೆಯಲ್ಲಿ
ನೆನೆದು ಒದ್ದೆಮುದ್ದೆಯಾಗಿ ಪಜೀತಿ

ಪಡುತ್ತಿರುವಾಗ
ನೆರವಿಗೆ ಬಂದವರೂ, ನಮ್ಮ ಪಜೀತಿ

ನೋಡಿ
'ಕಿಸಕ್' ಎಂದವರೂ ನೆನಪಾಗ್ತಾರೆ. ಆಫೀಸು ಮುಗಿಸಿ

ಮನೆಗೆ
ಹೊರಡುವ ವೇಳೆಗೇ ಅಕಾಲಿಕವಾಗಿ ಬಂದ ಮಳೆಗೆ

'ಈ
ಮಳೆಯಲ್ಲಿ ಹೇಗಪ್ಪಾ ಮನೆ ಸೇರೋದು' ಅಂತ

ಯೋಚಿಸುತ್ತಿದ್ದಾಗ
" ಬಾರೋ ನನ್ನತ್ರ ಛತ್ರಿ ಇದೆ ಇಬ್ರೂ

ಹೋಗೋಣ" ಎಂದು ಕರೆದು ಬಸ್ಸು ಹತ್ತಿಸಿದವರು ಖಂಡಿತಾ ನೆನಪಾಗ್ತಾರೆ..



ಆಹಾ
....


ಹೊರಗೆ ಮಳೆ ಹುಯ್ಯುತಿದೆ. ನನ್ನೊಳಗೆ ಹೀಗೆಲ್ಲಾ ನೆನಪಗುತ್ತಿದೆ..


ನಿಮ್ಮಲ್ಲಿ..??


ಪರಶು..,
renukatanaya@gmail.com



ಚಿತ್ರ ಸಂಗ್ರಹ : ರೇವಪ್ಪ

3 comments:

Unknown said...

Matte male huyyutide ella nenapagutide.

nija male andre nenapagodu ooru mattu balya.
andina a sundara dinagalanna lekhanada mulaka nenapsi kottiddakke dhanyavadaglu.

yashavanth said...

ಮಳೆ ಮತ್ತು ಮಳೆಯ ಅನುಭವ ಯಾವಾಗಲೂ ಖುಷಿ ಕೊಡೋ ವಿಷ್ಯಗಳೇ ಆದ್ರೆ ಸಿಡಿಲು,ಗುಡುಗುಗಳು ಭಯ ಬೀಳಿಸ್ತಾವಪ್ಪಾ..... ಕಳೆದ ಬರಹಕ್ಕಿಂತ ಈ ಬರಹದಲ್ಲಿ ತುಂಬಾ ಸುಧಾರಣೆಯಿದೆ ಪರಶು..... ಆದ್ರೂ ನೀ ತೀರಾ ಜೆನರಲ್ ಆಗಿ ಬರೀತಿಯ,,,, ಇದು ಯಾರ ಅನುಭವ ಬೇಕಿದ್ರೂ ಆಗಿಬಿಡೋ ಚಾನ್ಸ್‌ಯಿದೆ...... ಇದೊಂದು ಅಂಶದಲ್ಲಿ ನೀ ಬದಲಾವಣೆ ಮಾಡಿಕೊಂಡ್ರೆ ನಾವು ಇನ್ನೂ ಹೆಚ್ಚಿನದನ್ನ ನಿರೀಕ್ಷಿಸ ಬಹುದು... ಯಾವಾಗ್ಲೂ ನೆಗೆಟಿವ್ ಆಗಿ ಕಮೆಂಟ್ ಮಾಡ್ತಾನೆ ಅನ್ಕೊಬೇಡೋ ಮಾರಾಯಾ.....

ಯಾರಿದು ನಿಹಾರಿಕ ಅಂದ್ರೆ..... ಕನ್ನಡ ಬಳಸ್ರೀ....

ಪರಶು.., said...

ಡಿಯರ್ ಯಶವಂತ್...

ನಿಮ್ಮ ಪ್ರತಿಕ್ರಿಯೆಗೆ ಅಭಿನಂದನೆ. ನೀವು ಹೇಳಿದಂತೆ ಇಲ್ಲಿ ಎಲ್ಲರದೂ ಆಗಿರುವಂತಹ ಅನುಭವವೇ ನನದೂ ಆಗಿದೆ. ಆದರೆ ಈ ಅನುಭವದ ಪದಗಳಿಗೆ ಅರ್ಥಬದ್ದವಾದ ಫೋಟೋ ಹುಡುಕಿ ಹಾಕಿದಾರಲ್ಲ ರೇವಪ್ಪ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು.

ನೀವು ನೆಗೆಟಿವ್ ಆಗಿ ಕಾಮೆಂಟ್ ಮಾಡ್ತೀರ ಅಂತ ನಾನೇನೂ ಅಂದ್ಕೊಳ್ಳಲ್ಲ ಬಿಡಿ ಮಾರಾಯ್ರೇ. ಕಾಮೆಂಟ್ ಅಂತ ಇರೋದೆ ನಿಮ್ಮ ಅಭಿಪ್ರಾಯ ತಿಳಿಸೋಕೆ/ಬರಿಯೋಕೆ ಅದರಲ್ಲಿ ನಮಗೆ ಪಾಸಿಟೀವ್ ಆಗಿಯೇ ಬರಿಬೇಕು ಅಂತ ನಿರೀಕ್ಷಿಸೋದು ತಪ್ಪಲ್ವಾ ಯಶವಂತ್...

ಅಂದಹಾಗೆ ನಿಮ್ಮನ್ನೂ ಒಳಗೊಂಡಂತೆ ನಮ್ಮ ಕಿರಿಯ ಸಹಾಯಕ ಪ್ರಿಯ ಮಿತ್ರರ ಬರಹಗಳನ್ನೂ ಈ ಬ್ಲಾಗ್ ನಲ್ಲಿ ನಿರೀಕ್ಷಿಸ್ತೀನಿ..

ಅಂಜದೆ ಅಳುಕದೆ ಧುಮುಕಿರಿ ಈ ಬ್ಲಾಗ್ ನೊಳಗೆ..!

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago