
ನಿನ್ನೆ ಬಸವ ಜಯಂತಿಯ ಬೆಳಿಗ್ಗೆ ೮:೩೦ ರ ಸಮಯದಲ್ಲಿ ಗೊತ್ತಿಲ್ಲದ ನಂಬರಿಂದ ಕಾಲ್ ಬಂದಾಗ, ನಾನು ನನ್ನಳಿಯ ಸೊಸೆಯರ ರಂಜಿಸಲೋಸಗ ತರಾವರಿ ಮ್ಯುಸಿಕ್ ಹಾಕಿ ಅವರ ಜತೆಗೂಡಿ ಕುಣಿದಾಡುತ್ತಿದ್ದೆ......
ಆ ಕಡೆಯ ದನಿ ..." ಹಲೋ... ಯಶು.... ನಾನು ವಿಜಿ... ಎಲ್ಲೀದ್ದೀರಾ... ಇವತ್ತು ಸಂಜೆ... ಐದು ಗಂಟೆಗೆ ನನ್ ಮದುವೆ,,, ಮಾನವ ಮಂಟಪ ಸಂಘದಲ್ಲಿ.... ಸ್ಥಳ ಪ್ರೊಫೆಸರ್ ರಾಮದಾಸ್ ಮನೆ ಟೆರಸ್... ಖಂಡಿತ ಬರಬೇಕು.."
"ಸರಿ" ಅಂತ್ಹೇಳಿ ಪೋನ್ ಇಟ್ಟೆ.....
ಮೋಹನ್ ಮದುವೆಲಿ "ವಿಜಿ ನಿಮ್ಮದ್ಯಾವಾಗ್ರೀ ಮದ್ವೆ" ಅಂದಾಗ.....
"ಬಿಡ್ರೀ... ನಮ್ಮದ್ವೆ ಈ ತರಯೆಲ್ಲಾ ಆಗೊಲ್ಲ... .." ಅಂದ್ದಿದ್ದರಿಂದ ನನಗೆ ಹೆಚ್ಚಿನ ಆಚ್ಚರಿ ಏನೂ ಆಗ್ಲಿಲ್ಲ....
ಮೈಸೂರಿಗೆ ನಮ್ಮೂರು ಸಾಲಿಗ್ರಾಮದಿಂದ ಒಂದುವರೆ ತಾಸಿನ ಪ್ರಯಾಣ...
ಮಧ್ಯಾಹ್ನ ೩ ರ ಸಮಯಕ್ಕೆ ಊರಿಂದ ಹೊರಟದ್ದಾಯಿತು....
ವಿಜಿ(ವಿಜಯ್ ಕುಮಾರ್ ಕೆ.ಎನ್) ನನಗೆ ತಿಳಿದ ಹಾಗೆ ಸೌಮ್ಯ ಸ್ವಭಾವದ, ಪ್ರಗತಿಪರ ಚಿಂತನೆ ಉಳ್ಳವರು ಅನ್ನೋದಕ್ಕಿಂತ, ಆ ನಿಟ್ಟಿನಲ್ಲಿ ತಮ್ಮೊಡನೆ ತಮ್ಮ ಸೆಳೆವಿಗೆ ಸಿಕ್ಕಯೆಲ್ಲರನ್ನು ಕ್ರಿಯಾಶೀಲರನ್ನಾಗಿಸುವ ...... ಒಬ್ಬ ಯಶಸ್ವೀ ಸಂಘಟಕ... ಉಪನ್ಯಾಸಕ....ಕನ್ನಡದ ಕಟ್ಟಾಳು.... ಮಿಗಿಲಾಗಿ ಸ್ನೇಹಜೀವಿ..... ವಿಜಿ ಮತ್ತು ನಂದ ರ ಪ್ರೀತಿಯ ವಿಷಯ ಮತ್ತು ಮದುವೆಗೆ ಅಡ್ಡಿಯಾಗಿರೋ ಜಾತಿಯ ವಿಷಯ ನನಗೆ ಮೊದಲೇ ತಿಳಿದಿತ್ತು.. ....ಮೇ ಹೊತ್ತಿಗೆ ಮದುವೆ ಆಗ್ತೀನ್ರೀ.... ಅಂದಿದ್ದ ವಿಜಿ.... ತಿಂಗಳು ಮುಂಚೆನೆ ಆಡಿದಂತೆ ಮಾಡಿ ತೋರಿಸಿದರು..... ಅದಪ್ಪಾ ಮತ್ತೇ ಮಾತು ಅಂದ್ರೆ.... ಸಹಜವಾಗಿ ಹುಡುಗಿ ಮನೆಯವರಿಂದ ವಿರೋಧವನ್ನು ನಿರೀಕ್ಷಿಸಿದ್ದ ವಿಜಿ .... ಈ ಸಾರಿಯ ಬಸವ ಜಯಂತಿಯನ್ನ ಸ್ಮರಣೀಯವಾಗಿಸಲು ಇಟ್ಟ ಹೆಜ್ಜೆಗೆ ಸಾಕ್ಷಿಯಾದ ಕೆಲವರಲ್ಲಿ ನಾನು ಒಬ್ಬನಾಗುವ ಖುಷಿಯಲ್ಲಿ.... ಮೈಸೂರಿನ ಪಂಚಮಂತ್ರ ರಸ್ತೆಯ ’ಚಾರ್‍ವಕ’ ಮನೆಯ ತಾರಸಿ ತಲುಪುವದರೊಳಗೆ ೫೦ಕ್ಕೂ ಹೆಚ್ಚುಮಂದಿ ಸೇರಿಯಾಗಿತ್ತು....
ಎಂದಿನ ಉಡುಪಿನಲ್ಲಿದ್ದ ವಿಜಿ.... ಮದುವಣಗಿತ್ತಿಯ ಧಿರಿಸಿನಲ್ಲಿದ್ದ ನಂದ.... ಮಾನವ ಮಂಟಪದಡಿ ಮಂತ್ರಮಾಂಗಲ್ಯದ ಶ್ರೀರಕ್ಷೆಯಲ್ಲಿ..... ಅಮಲುಗಣ್ಣಿನ ಬುದ್ಧನ ಪ್ರತಿಮೆಯ&ಗಾಂಧಿ ಚಿತ್ರಪಟದ ಸನ್ನಿಧಾನದಲ್ಲಿ..... ನೆರದಿದ್ದ ಎಲ್ಲರ ಶುಭ ಹಾರೈಕೆಯ ಸಾಕ್ಷಿಯಾಗಿ ಮನುಜ ಮತಕ್ಕೆ.... ವಿಶ್ವಪಥಕ್ಕೆ.... ಜೊತೆಜೊತೆಯಾಗಿ ಹೆಜ್ಜೆಯಿಟ್ಟರು...... ಈ ಸಾರಿಯ ಬಸವ ಜಯಂತಿಯನ್ನ ನನಗೂ & ನೆರದವರೆಲ್ಲರಿಗೂ ಸ್ಮರಣೀಯವಾಗಿಸಿದ ಈ ಮದುವೆ, ಮರೆಯದ ಮಧುರ ನೆನಪಾಗಿ ಎಲ್ಲರ ಮನದಲ್ಲೂ ಸ್ಥಾಯಿಯಾಯಿತು..... ಅವರಿಬ್ಬರ ಹೊಸ ಜೀವನ ಹಸಿರಾಗಿರಲಿ...... ಎಂಬ ಹಾರೈಕೆಯೊಂದಿಗೆ.....
ನಲುಮೆಯಿಂದ....
ಯಶವಂತ್