
ಅಬ್ಬಾ..!!
ಈ ೩೧ ಕ್ಕೆ ೪ ತಿಂಗಳು ...
ಒಟ್ಟು ಯುಗಾದಿವರೆಗೆ 435 hits.......ಅಲ್ಲಿಂದೀಚೆಗೆ ... 462
ಅಂದ್ರೆ ಒಂದೇ ತಿಂಗ್ಳಲ್ಲಿ 462 hits...actually less than one month..total ಆಗಿ 897 hits....
ಇದಪ್ಪ ಚೈತ್ರನ ಸ್ವಾಗತ ಅಂದ್ರೆ ...MINDBLOWING.
ಈ ಬ್ಲಾಗ್ ಸುಮ್ಮನೆ ರೇವಪ್ಪನ ತಲೇಲಿ ಬರೋ ನೂರಾರು ವಿಚಾರಗಳಲ್ಲಿ ಇದೊಂದು ಅನ್ಕೋಬೇಡಿ.
ಇದರ ಹುಟ್ಟಿಗೂ ನೀವೇ ಕಾರಣ....ಈಗ ಬೆಳೀತಿರೋದಕ್ಕೂ ನೀವೇ .
ಇದರ ಒಟ್ಟು credit ನಿಮಗೇ ಸಲ್ಲಬೇಕು ...ofcourse..
ನನ್ನ ಪ್ರಥಮ thanks .....

ದತ್ತರಾಜ್ ಮಠದ ಗೆ ಸಲ್ಲಬೇಕು ....
like 'behind every successful blog, there is a man' and
He Is Our Man...
ಅವರು ನೀಡಿದ ಒಂದು internet ಲಿಂಕ್ ನಿಂದ ಶುರುವಾದ ಈ super supreme idea
ಇಲ್ಲಿವರೆಗೂ ಬಂದು ನಿಂತಿದೆ ...
ನಿಮಗೆ ಎಲ್ಲಾದ್ರು corridor ನಲ್ಲಿ ಸಿಕ್ರೆ ಬಿಡಬೇಡಿ ಅವರನ್ನ ...ಅಂದ್ರೆ ಮುನ್ನಭಾಯಿ ಥರ jhappi
pappi ಅಂತ ಶುರು ಮಾಡಿಗೀಡಿರಾ ...!!
ಸುಮ್ನೆ ಒಂದು thanks ಹೇಳಿ ...ಕಣ್ಣಲ್ಲಾದ್ರು ಸರಿ ...Thanks Bro.
ಇನ್ನು ಪ್ರತಿ ದಿನ ರೇವಪ್ಪ ಬರಿಯೋದನ್ನ ನೋಡಿ ಖುಷಿ ಪಟ್ಕೊಂಡು ಕಣ್ಣಲ್ಲಿ ಖುಷಿಯ ಕಣ್ಣೀರು
ಹಾಕ್ದೋರಿಗೂ ನಾನು Thanks ಹೇಳ್ಬೇಕು ...
ಎಲ್ಲಾದ್ರು ದಾರೀಲಿ ನಾನು ಸಿಕ್ರೆ " ನೀನೇ ಏನಪ್ಪಾ ಅದನ್ನ ಶುರು ಮಾಡಿದ್ದು-good-ಚನ್ನಾಗಿದೆ"
ಅಂತ ಬೆನ್ನು ತಟ್ಟಿದೊರಿಗೆ ಕೂಡ ನನ್ನ Thanks...
ಈ ಥರ ಹೊಸ ಹೊಸ ವಿಚಾರಗಳಿಗೆ ಸ್ಫೂರ್ತಿಯಾಗಿರೋ ನನ್ನ Military Menಗಳಿಗೂ ನಾನು
Thanks ಹೇಳ್ಬೇಕು..ಮಧುಕರ್.....ಅನಂತಕೃಷ್ಣ...ಬಾಬು ಶೇಷಾದ್ರಿ ....ಫಣಿ ಸರ್...Thank You All.
And Now The Most Important Man...One & Only Sacchi...
ಅವನನ್ನ describe ಮಾಡ್ಲಿಕ್ಕೆ ನನ್ನ dictionaryಲಿ ಶಬ್ದಗಳೇ ಇಲ್ಲ ...
ನಿಮಗೂ ಸಿಗೋದಿಲ್ಲ ಬಿಡಿ ...ಸಿಕ್ರೆ ...ನಾನ್ ಸಿಕ್ಕಾಗ ಹೇಳಿ. ಸಮಯ ಬಂದಾಗ ಅನುಕೂಲ ಆಗಬಹುದು.
ಆದ್ರೆ ಅವರ ನಾನಾ ಅವತಾರಗಳು ನಿಮ್ಮ ಶಬ್ದಗಳನ್ನ ನಾಳೆನೇ ಅಸಂಬದ್ಧ ಮಾಡ್ಲಿಕ್ಕೆ
ಹೇಸೋದಿಲ್ಲ ..ಹುಷಾರಾಗಿರಿ ..!
Still Let Me Try To Describe Him..
# The Man Who Can Travel Faster Than A 'REGISTERED TAPAL' rather 'ಅತೀ ತುರ್ತು'
# The Man Who Had The Concept Long Back 'To Keep The Back Up' Of
Documents, Like The Vodafone Has Started It Now To Save All The Contats
back Up Of Its Customers..(watch IPL)
# The Man Who Has More apparels, Ornaments, watches.... sorry i should use
The Word Clocks, Ear Rings ..... than A Teenage Girl...Who Wants To Shocase
Her Beauty In The college, Daily..
....ಜಾಸ್ತಿ ಹೇಳೋಕ್ಕೆ ಶಬ್ದಗಳೇ ಸಿಗ್ತಿಲ್ಲ ...ನಾನಾದರು ಏನು ಮಾಡಲಿ ...ಬಡವನಯ್ಯ.

Actually He Is The Person Who Made 'My Blog' Into 'Our Blog'....
Thanks a Lot.
ಇದರ ಜೊತೆಗೆ, ಇದರ ಬಗ್ಗೆ ...i mean blog ಬಗ್ಗೆ ಮೂಗು ಮುರಿದವ್ರು ಇದಾರೆ ...
ಅದು ನನಗೆ ಒಂದು ರೀತಿಯ challenge ನೀಡಿದೆ ...ಅವ್ರಿಗೆ ಇಷ್ಟ ಅಗೋ ಥರ, ಪ್ರತಿ post
ಬರೀಬೇಕಾದ್ರೂ ವಿಚಾರ ಮಾಡಿ ಬರೀತೀನಿ ..
ಕೆಲವೊಮ್ಮೆ ಅವರುಗಳೇ ಅದಕ್ಕೆ solution ನೀಡಿದಾರೆ ...
"ಸ್ವಲ್ಪ 'ನೋಡೋವಂಥ' photo ಗಳನ್ನ ಹಾಕಪ್ಪ ನೀನು ...ಆಗ ನೋಡು ನಿನ್ನ TRP ಹೇಗೆ ಏರುತ್ತೆ ಅಂತ "
hmmm...taste difference...
ಒಟ್ಟಾರೆಯಾಗಿ ಎಲ್ಲ ಮಹಿಳೆಯರು , ಮಹನೀಯರು , ಹುಡುಗರು , ಹುಡುಗಿಯರು ಎಲ್ರಿಗೂ ಧನ್ಯವಾದಗಳು .
Last But Not The Least, Thank You All...
My Super Computer, For Your 22'' view & Quad speed.
PICASA, For your Help In Creating Wallpapers For My Blog
Google Search Engine, For Web And Photo Search.
BSNL for Your BROADBAND
Mozilla Firefox For Faster Net With Multiple Tabs In One Window
The serene calm of 0200 hrs to 0600 hrs For Propelling My Ideas At Right Time To Fit The Right Place.
And my PHS Window Seat...Where I Get All These Ideas To Write.
And GOD.
ಇದೇನು THANKS GIVING DAY ಮಾಡ್ಕೋ0ಡಿದನ ಅನ್ಕೋ ಬೇಡಿ ...
ಕರ್ತವ್ಯನ ಮರೀಬಾರ್ದಲ್ವ ಅದಕ್ಕೆ .
ಇನ್ನು ವಿಷಯಕ್ಕ ಬರ್ತೀನಿ ...
ಇವತ್ತು "ಇಲ್ಲಿ ನಾನೊಬ್ಬನೇ ಬರೀತೀನಿ ..ನೀವ್ಯಾರು ಬರಿಯೋಲ್ಲ" ಅಂತ ದೂರು ಕೊಡಲಿಕ್ಕೆ ಬಂದಿಲ್ಲ ...
ಬದಲಿಗೆ ನಿಮ್ಮನ್ನ inspire ಮಾಡೋಣ ಅಂತ bandidIni ...
---------------------
ಇಲ್ಲಿ ಭಾಷೆಯ ಮಡಿವಂತಿಕೆ ಇಲ್ದೇನೆ, ನಿಮಗೆ ತಿಳಿದಿರೋ ವಿಷಯನ್ನ ನಿಮ್ಮ ಸ್ನೇಹಿತರ ಮುಂದಿಡಿ..
ಇನ್ನು ವಿಷಯನೂ ನೀನೇ ತಿಳಿಸಿಬಿಡಪ್ಪ ಅಂತೀರಾ..ಆಯ್ತು..
೨. ನಿಮ್ಮಲ್ಲಿರೋ painting...ಅಂದ್ರೆ ನೀವೇ ತಯಾರು ಮಾಡಿರೋದು ...ಸ್ವಂತ
೩. ನಿಮ್ಮ ಕಥೆ ...ಸ್ವಂತ ಜೀವನ್ದಾದ್ರೂ ಸೈ...ಇನ್ನೊಬ್ಬರ ಜೀವನ ಕಟ್ಟಿ ಕೊಡೋದಾದ್ರು ಸೈ ..
೪. ನೀವು ಓದಿದ ಪುಸ್ತಕ
೫. ಪ್ರವಾಸ ಕಥನ.
೬. ಶಾಲೆಯ , ಊರಿನ ನೆನಪು.
೭. ನಿಮ್ಮ ದೃಷ್ಟಿಯಲ್ಲಿ ಜೀವನ.
8. ನಿಮ್ಮ photography
೯. ಪ್ರತಿ ವಾರ ಚಿತ್ರ ವಿಮರ್ಶೆ ಮಾಡ್ರಿ...ವಾರಕ್ಕೊಂದು movie ನೋಡೋರು ಎಷ್ಟು ಜನ ಇಲ್ಲ ..
ನಮ್ಮ ಈರಪ್ಪ ಇದಕ್ಕೆ ನಿಮ್ಗೆ ಗುರು.
ಶುರುವಿಗೆ ಒಂದು ಹಾಳೆಲಿ ಬರೆದುಕೊಳ್ಳಿ...ಬಂದು ನಿಧಾನವಾಗಿ type ಮಾಡಿ ...ಇಂದೇ , ಇಗಲೇ
ಅನ್ನೋ URGENT ಇಲ್ಲ
ಆದ್ರೆ ಯಾರಾದ್ರು ಬರೆದಿರೋ posting ಗೆ comment ಮಾಡೋ ಉದ್ದೇಶ ಇರೋರು ತಕ್ಷಣ ಕಾರ್ಯ ಪ್ರವ್ರತ್ತರಾಗಬೇಕು ...
ಆಮೇಲೆ ಶಪಿಸ್ಕೊಬೇಡಿ ..
ಭಟ್ರೇ ನಿಮ್ಗೇ ಹೇಳ್ತಿರೋದು ...
ನಮ್ಮ ಗಿರೀಶ ಭಟ್ರು ತಮ್ಮ ವಿಚಾರಗಳಲ್ಲಿ ತುಂಬಾನೇ clarity ಇಟ್ಕೋ0ಡಿದಾರೆ...ಆದ್ರೆ ಬರೀಲಿಕ್ಕೆ ಹಿಂಜರಿಕೆ ...
ನನ್ನನ್ನ ನೋಡ್ರಿ ಹೇಗೆ ಹಿಂದೆ ಮುಂದೆ ನೋಡ್ದೆ ಬರೀತೀನಿ ..Get GOING.
ಮೇಲಿನ ವಿಷ್ಯಗಳೂ ಸರಿ ಬರ್ಲಿಲ್ಲ ಅನ್ಕೊಳ್ಳಿ ...ಇನ್ನೊಂದ್ ಸ್ವಲ್ಪ TOPICS ಇದಾವೆ ...ಸ್ವಲ್ಪ CLASSICNESS ಕಡಿಮೆ ಆಗುತ್ತೆ ...ಆದ್ರೆ ನೋಡಿ check ಮಾಡಿ ..

2. ನಿಮ್ಮ ನೆಚ್ಚಿನ ನಟಿ

3. ನಿಮ್ಮ ನೆಚ್ಚಿನ ನಾಯಕ ofCourse ಖಳನಾಯಕನೂ ಆಗಬಹುದು ..

ಇನ್ನೇನ್ ಹೇಳ್ಲಿ ....ನಿಮಗ್ ತಿಳಿದಿರೋದನ್ನ ಬರೀರಿ ...At The end of the day, It Should Make A sense.
ಆದ್ರೆ ಒಂದು ವಿಷಯ...ನೀವು ಆರಿಸಿಕೊಳ್ಳುವ ವಿಷಯ ಮತ್ತು ಭಾಷೆಯ ಬಗ್ಗೆ ಗಮನ ಇರಲಿ ...
because "First Impression Is Best Impression".
ಕೊನೆ ಮಾತು :
೧. ದಿನ ನಿತ್ಯ ಬ್ಲಾಗ್ ನೋಡೋದೇ ನಿಜ ಆಗಿರಬೇಕಾದ್ರೆ ಸದಸ್ಯರಾಗೋದಿಕ್ಕೆ ಏಕೆ ಹಿಂಜರಿಕೆ ....
ಇಷ್ಟು ದಿನ procedure ಗೊತ್ತಿರ್ಲಿಲ್ಲ ಅಂತಿದ್ರಿ ...ಆದ್ರೆ ಇನ್ನು ಮೇಲೆ ಏನೂ ಸಮಸ್ಯೆ ಇಲ್ಲ ಅನ್ಸುತ್ತೆ ...
ಹೆದರ್ಕೋಬೇಡಿ...ಸದಸ್ಯರಾದ ಮೇಲೆ ಪ್ರತಿ ದಿನ ಕಾಮೆಂಟ್ ಬರೆಯೋ ಕಷ್ಟ ಬರುತ್ತೆ ಅಂತ ...
ಎಷ್ಟೋ ಜನ ನಾನು ಅವರ ಸೆಕ್ಷನ್ ಗೆ ಹೋದ ನಂತರ ನನ್ನನ್ನ ತೃಪ್ತಿ ಪಡಿಸಲಿಕ್ಕೆ ಅಂತ ಕಾಟಾಚಾರಕ್ಕೆ
ಬ್ಲಾಗ್ ಓಪನ್ ಮಾಡೋರು ಇದಾರೆ...!
೨. ಇದನ್ನ operate ಮಾಡ್ಲಿಕ್ಕೆ ಗೊತ್ತಿಲ್ದೆ ಇರೋರಿಗೆ ತಿಳಿದವರು ಕಲಿಸಿಕೊಡಿ
೩. ಇದರ ಉದ್ದೇಶ ಸಾರ್ಥಕ ಆಗೋ ರೀತಿನಲ್ಲಿ ಇದನ್ನ ಬಳಸ್ಕೊಳ್ಳಿ.
ನಿಮ್ಮ ಪತ್ರಕ್ಕಾಗಿ ಕಾಯ್ತಾ ಇರೋ, [ ಬರಿ ಯಶವಂತನದ್ದಲ್ಲ , ಎಲ್ಲರದ್ದೂ ]
ರೇವಪ್ಪ
2 comments:
ಹಾಯ್ ಸ್ನೇಹಿತರೇ ...
ಮೊನ್ನೆ ರೇವಪ್ಪರೊಂದಿಗೆ ಮಾತನಾಡುವಾಗ ಬೇಸರದಿಂದಿದ್ದರು.ಇಷ್ಟೊಂದು ಮಂದಿ ದಿನಾಲು ಬ್ಲಾಗ್ ನೋಡ್ತಾರೆ ಆದರೆ ಯಾರೂ ಪ್ರತಿಕ್ರಿಯಿಸೋದಿಲ್ಲ ಎನ್ನುವುದು ಅವರ ಬೇಸರಕ್ಕೆ ಕಾರಣವಾಗಿತ್ತು. ನಮ್ಮ ಬ್ಲಾಗ್ ಭಾರತದ ಪ್ರಜಾಪ್ರಭುತ್ವದಂತಾಗುತ್ತಿದೆ ಎನ್ನುತ್ತಿದ್ದರು. ಭಾರತದ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಗೆಲ್ಲಲಿ, ಯಾರೇ ಪ್ರಧಾನಿಯಾಗಲಿ ಬಹುತೇಕ ಭಾರತೀಯ ಪ್ರಜೆಗಳು ತಲೆಕೆಡಿಸಿಕೊಳ್ಳುವುದಿಲ್ಲ. "ಯಾರು ದೊರೆಯಾದರೇನು ರಾಗಿ ಬೀಸೋದು ತಪ್ಪುತ್ತಾ ?" ಎನ್ನುವ ಧೋರಣೆ ಜನರದ್ದಾಗಿದೆ. ಅಂತೆಯೇ ಇಲ್ಲೂ ಸಹ ಬ್ಲಾಗ್ ಪರಿಚಯವಾಗಿ 4 ತಿಂಗಳಾದರೂ ಬಂದಿರುವ ಪ್ರತಿಕ್ರಿಯೆಗಳು ಅತ್ಯಲ್ಪ. ನೀವು ಏನೇ ಬರೆದರೂ ನೋಡ್ತೀವಿ ಆದ್ರೆ ನಾವು ಮಾತ್ರ ಏನೂ ಹೇಳಲ್ಲ, ಬರಿಯೊಲ್ಲ. ಎಂಬ ಮನೋಸ್ಥಿತಿಯ ಸ್ನೇಹಿತರೇ ಹೆಚ್ಚಾಗಿದ್ದಾರೆ ಎಂಬುದು ಅವರ ಅಂತರಾಳದ ಧ್ವನಿಯಾಗಿತ್ತು.
ಇರಬಹುದು ಆದರೆ ಇತರ ಬ್ಲಾಗ್ ಗಳಿಗೆ ಹೋಲಿಸಿದರೆ ನಮ್ಮ ಬ್ಲಾಗ್ ತುಂಬಾ ಕ್ಷಿಪ್ರಗತಿಯಲ್ಲಿ ಅಪ್ ಡೇಟ್ ಆಗುತ್ತಿದೆ. ರೇವಪ್ಪ ದಿನಂಪ್ರತಿ ರಿಫ್ರೆಷ್ ಮಾಡುತ್ತಿದ್ದಾರೆ, ಸೂಕ್ಷ್ಮವಾಗಿ ಬ್ಲಾಗ್ ಅಪ್ ಲೋಡ್ ಆಗಿರುವ ಸಮಯವನ್ನು ಗಮನಿಸಿ, ನಾವೆಲ್ಲಾ ಮಲಗಿರುವಾಗ ರೇವಪ್ಪ ಬ್ಲಾಗ್ ನಲ್ಲಿ ಬರೆಯುತ್ತಿರುತ್ತಾರೆ..! ನಾನೊಬ್ಬನೇ ಬರೆಯುವುದು ಸೂಕ್ತವಲ್ಲ ಇತರರೂ ಬರೆಯಲಿ ಎಂಬ ಆಶಯ, ನಿರೀಕ್ಷೆ ಅವರದು. ಆದರೆ ಇದಕ್ಕೆ ಸೂಕ್ತವಾದ ಸ್ಪಂದನೆ, ಪ್ರತಿಕ್ರಿಯೆ ದೊರೆಯುತ್ತಿಲ್ಲ. ಕಾರಣವೇನಿರಬಹುದು ? ನಮ್ಮ ಸ್ನೇಹಿತರಿಗೆ ಕೆಲಸದ ಒತ್ತಡ ಎಂದರೆ ತಪ್ಪಾದೀತು, ಆದರೆ ಭಾಷೆಯ ಬಳಕೆಯ ತೊಡಕಿರಬಹುದೇನೋ..?
ಹೌದು ನಾವು ಹಾಳೆಯ ಮೇಲೆ ಪೆನ್ನಿನಿಂದ ಬರೆದಷ್ಟು ಸುಲಭವಾಗಿ ಆನ್ ಲೈನ್ ನಲ್ಲಿ ಕನ್ನಡ ಬಳಸಲಾಗುತ್ತಿಲ್ಲ. ಪ್ರಸ್ತುತ ನಾವು ನುಡಿ 4.0 ಹಾಗೂ ಕ್ವಿಲ್ ಪ್ಯಾಡ್ ಬಳಕೆಯಿಂದ ಆನ್ ಲೈನ್ ನಲ್ಲಿ ಕನ್ನಡ ಬಳಸ ಬಹುದಾಗಿದೆ.
ನುಡಿ 4.0 ದಲ್ಲಿ ನಾವು 'ಯುನಿಕೋಡ್' ಆಯ್ಕೆಯನ್ನು ಬಳಸಿ ಕನ್ನಡವನ್ನು ನಮ್ಮ ಇ-ಮೇಲ್, ಬ್ಲಾಗ್ ಗಳಲ್ಲಿ ನೇರವಾಗಿ ಟೈಪಿಸಬಹುದು. ನುಡಿಯಲ್ಲಿ ಏಕಭಾಷೆ, ದ್ವಿಭಾಷೆ ಆಯ್ಕೆಗಳಿರುವಂತೆ 'ಯುನಿಕೋಡ್' ಸಹ ಒಂದು ಆಯ್ಕೆಯಾಗಿದೆ. ಈ ಆಯ್ಕೆ ನುಡಿಯ 4.0 ಶ್ರೇಣಿಯನ್ನು ಹೊರತುಪಡಿಸಿ ಇತರ ಶ್ರೇಣಿಗಳಲ್ಲಿ ಅಲಭ್ಯ. ಆದರೆ ನಮ್ಮ ಸಚಿವಾಲಯದ ಎಲ್ಲಾ ಶಾಖೆಗಳಲ್ಲಿ ಅದರಲ್ಲೂ ಸಚಿವಾಲಯ ವಾಹಿನಿ ಚಾಲನೆಯಲ್ಲಿರುವ ಶಾಖೆಗಳಲ್ಲಿ ನುಡಿ 3.0 ಮಾತ್ರ ಬಳಕೆಯಲ್ಲಿದೆ. ಇದರಲ್ಲಿ ಯುನಿಕೋಡ್ ಬಳಕೆಯ ಅವಕಾಶವಿಲ್ಲ. ನುಡಿ 4.0 ವನ್ನು ಅನುಸ್ಥಾಪಿಸಿಕೊಳ್ಳಬಹುದಲ್ಲ ಎಂದು ನೀವು ಯೋಚಿಸಿರಬಹುದು. install ಮಾಡಿಕೊಳ್ಳಬಹುದು ಆದರೆ ನಮ್ಮ ಸಚಿವಾಲಯ ವಾಹಿನಿ ಹಾಗೂ ನುಡಿ 4.0 ಗೂ ಆಗಿ ಬರೋದಿಲ್ಲ. ನುಡಿ 4.0 ಇರುವಲ್ಲಿ 'ಸಚಿವಾಲಯ ವಾಹಿನಿ'ಯನ್ನು ತೆರೆದಾಗ ಅಲ್ಲಿ ಫೈಲ್ ನಂಬರ್ ಗಳೆಲ್ಲಾ ಕನ್ನಡದಲ್ಲಿ ಅತ್ಯಂತ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ಇದೊಂತರ ಕಿರಿಕಿರಿ.
ಇನ್ನು ಕ್ವಿಲ್ ಪ್ಯಾಡ್ ಬಳಸಿ ಕನ್ನಡ ಬಳಸಬಹುದು. ಇದೊಂದು ಸಾಪ್ಟ್ ವೇರ್ ಅಲ್ಲ ಇದೊಂದು ಭಾಷಾಜನಕ ವೆಬ್ ಸೈಟ್. http://www.quillpad.com ಈ ವೆಬ್ ಗೆ ತೆರಳಿ ಅಲ್ಲಿ ಕನ್ನಡವಷ್ಟೇ ಅಲ್ಲದೆ ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲೂ ಸಹ ಟೈಪಿಸ ಬಹುದು. ಕೀಲಿಮಣೆ ವಿನ್ಯಾಸವೂ ಸಹ ಸುಲಭವಾಗಿದೆ. ನಾವು ಮೊಬೈಲ್ ನಲ್ಲಿ ಇಂಗ್ಲೀಷ್ ಬಳಸಿ ಕನ್ನಡದ ಮೆಸೇಜು ಕಳುಹಿಸುವಂತೆ ಇಲ್ಲಿ ಟೈಪಿಸಿದರಾಯಿತು quillpad ತಾನೇ ತಾನಾಗಿ ನಮಗೆ ಬೇಕಾದ ಕನ್ನಡ ಅಕ್ಷರಗಳನ್ನು ನೀಡುತ್ತದೆ. ನಂತರ ನಾವು ಬರೆದಿರುವುದನ್ನು ಕಾಪಿ & ಪೇಸ್ಟ್ ಮಾಡಿ ನಮ್ಮ ಬ್ಲಾಗ್, ಇ-ಮೇಲ್ ನಲ್ಲಿ ಬಳಸಬಹುದು.
ಇದು ನಮ್ಮ ಬ್ಲಾಗ್ ಅಸ್ತಿತ್ವಕ್ಕೆ ಬಂದ ನಂತರ ನಾವು ಕಲಿತಿರುವ ಆನ್ ಲೈನ್ ಕನ್ನಡ. ನಿಮಗೂ ಆನ್ ಲೈನ್ ನಲ್ಲಿ ಕನ್ನಡ ಬಳಕೆಯ ಇನ್ನಿತರ ಸಾಫ್ಟ್ ವೇರ್ ಗಳು, ವೆಬ್ ಸೈಟ್ ಗಳ ಪರಿಚಯವಿದ್ದರೆ ತಿಳಿಸಿ. ಏಕೆಂದರೆ ನಾನು ಯುನಿಕೋಡ್ ಬಳಸಿ ಇಲ್ಲಿ ಕನ್ನಡ ಟೈಪಿಸುವುದನ್ನು ಕಲಿತದ್ದು ಇದೇ ವೇದಿಕೆಯಲ್ಲಿ ಪ್ರಕಟವಾದ ಯಶವಂತ್ ರವರ "ಬ್ಲಾಗ್ ಕನ್ನಡದಲ್ಲಿರಲಿ ಎಂಬ ಸದಾಶಯದೊಂದಿಗೆ..." ಎಂಬ ಲೇಖನದ ಪರಿಣಾಮದಿಂದ..!
ಪ್ರತಿಕ್ರಿಯೆ ಜಗದ ನಿಯಮ ನ್ಯೂಟನ್ ಹೇಳಿಲ್ವೇ "ಪ್ರತಿಯೊಂದು ಕ್ರಿಯೆಗೂ ತಕ್ಕದಾದ ಪ್ರತಿಕ್ರಿಯೆ ಇರುತ್ತೆ " ಅಂತ. ಹಾಗೆಯೇ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ, ಅನಿಸಿಕೆಗಳಿರುತ್ತವೆ, ಒಂದು ಚಿಕ್ಕ ಕಾಂಪ್ಲಿಮೆಂಟು ಬರೆಯುವವನ ತಪ್ಪು ತಿದ್ದಬಲ್ಲದು, ಬರೆಯುವ ಮಾರ್ಗ ತೋರಬಲ್ಲದು, ಬರವಣಿಗೆಯ ಅಂತರ್ ವಿಮರ್ಶೆಗೆ ಸಹಕಾರಿಯಾಗಬಲ್ಲದು..
ಇಲ್ಲಿ ಸದಸ್ಯರಾದ ನಮ್ಮ ಸ್ನೇಹಿತರೆಲ್ಲ ಬರೆಯಲಿ, ಕನ್ನಡ ಬಳಸುತ್ತಾ ಕನ್ನಡ ಬೆಳೆಸಲಿ ಎಂಬ ಅಭಿಲಾಷೆ ನನ್ನದು...
ಥ್ಯಾಂಕ್ಸ್ ರೇವಪ್ಪ ಇಂದಿನ ನಿಮ್ಮ ಲೇಖನದಲ್ಲಿ ಬ್ಲಾಗ್ ನ ಹುಟ್ಟು ಮತ್ತು ಬೆಳವಣಿಗೆಗೆ ಕಾರಣರಾದರೆಲ್ಲರನ್ನೂ ನೆನೆಸಿಕೊಂಡಿದ್ದಕ್ಕೆ...
Good Gesture To Thank The People...who helped
in building the blog...
Irappa Kummur
Contact FOR movie REVIEWS : irappakummur@gmail.com
Post a Comment