ಇತರೆ ಬ್ಲಾಗ್ ಗಳು ಏನೇನ್ ಮಾಡ್ತಿದವೇ ಅಂತ browse ಮಾಡಿದ್ದೇ ಮಾಡಿದ್ದು...!!
ಅದರಿಂದ ಗೊತ್ತಾಗಿದ್ದು ಇಷ್ಟು :
೧. ನೂರಕ್ಕೆ ತೊಂಬತ್ತು ಬ್ಲಾಗ್ ಗಳು ಅಂದರೆ ಅವುಗಳ owner ತನ್ನ ಮನಸಿನ್ಯಾಗಿನ ಮಾತಿಗೆ ಮುಡುಪಿಟ್ಟಿದ್ದಾರೆ.
೨. ಅಲ್ಲಿ ತಮ್ಮ talent ತೋರಿಸ್ಕೊಳ್ತಾರೆ ...ತಮ್ಮ painting, ತಮ್ಮ photographs, ತಮ್ಮ
ಕವನಗಳು, ತಮ್ಮ ಸಾಹಿತ್ಯ ಪ್ರಯತ್ನ ಗಳು ....ಹೀಗೆ ಸಾಗುತ್ತದೆ ಅವುಗಳ content suject.
೩. ಇನ್ನು ಸಾಮಾಜಿಕ ಕಾಳಜಿ ಇರೋ ಬ್ಲಾಗ್ ಗಳೂ ಇದ್ದಾವೆ ...ಅದರಲ್ಲಿ ಕಾಸರಗೋಡಿನ ಗಡಿನಾಡ ಶಾಲೆಯ
ಶಿಕ್ಷಕರಪ್ರಯತ್ನ ಅಭಿನಂದನಾರ್ಹ . ನೀವೇ ನೋಡಿ ನಿರ್ಧರಿಸಿ ಅದರ quality ಯನ್ನ .
ಇದನ್ನ ನಾನು ಶುರು ಮಾಡ್ದಾಗ [೩೧/೧೨/೨೦೦೮] ಇದರ ಹೆಸರು ಬ್ಲಾಗ್ ಅನ್ನೋದು ಬಿಟ್ರೆ ಬೇರೆ ಏನೂ ಗೊತ್ತಿರಲಿಲ್ಲ...
ಈಗ ಮೂರು ತಿಂಗಳಲ್ಲಿ ಅದರ ಅಸಾಧ್ಯ ಸಾಧ್ಯತೆಗಳಲ್ಲಿ ಸ್ವಲ್ಪಪರಿಚಯವಾಗಿದೆ.
ನನ್ನ ಗೆಳೆಯರಿಗೆ { ofcourse ಗೆಳತಿಯರಿಗೆ } ನನಗೆಗೊತ್ತಾಗುವ ಯಾವತ್ತು ಹೊಸ ವಿಚಾರಗಳನ್ನ
ತಕ್ಷಣ ಹಂಚ್ಕೋ ಬೇಕು ಅಂತ...
ನನಗೆ ಮರೆವು ಜಾಸ್ತಿ ಅದಕ್ಕೆ.
ನಾನು ಶುರು ಮಾಡಿರೋ ಕೆಲಸ ಎಷ್ಟರ ಮಟ್ಟಿಗೆ ಉಪಯೋಗ ಆಗಿದೆ , ಆಗ್ತಿದೆ , ಆಗುತ್ತೆ ...ಅಂತ.
"ನಾವು ನಮ್ಮ ಕೆಲಸದ ನಡುವೆ ಈ ನಿನ್ನ ಬ್ಲಾಗ್ ನೋಡೋದೇ ಹೆಚ್ಚಾಗಿದೆ ....ಇನ್ನು ಇದೆಲ್ಲ ಎಲ್ಲಿಂದ" ಅನ್ಕೊಳ್ತೀರಾ ....
ಆದರೆ ನಂಗೆ ಹಿರಿಯರ ಒಂದು ಅನುಭವದ ಮಾತಿದೆ , ಅದರ ಮೇಲೆ ಬಹಳ ನಂಬಿಕೆ :
"ಊರಿಗೆ ಬಂದೋಳು ನೀರಿಗೆ ಬರೋದಿಲ್ವೆ ? ಸಿಟಿಗೆ ಬಂದೋಳು ಸಿನಿಮಾಗೆ ಬರೋದಿಲ್ವೆ ?"
ಅಂತ ...ಹಾಗೇನೆ ಸದಸ್ಯ್ರಾಗಿರೋ ನೀವು ಒಂದಿಲ್ಲ ಒಂದು ದಿನ ಸಕ್ರಿಯವಾಗಿ
ಪಾಲ್ಗೊಳ್ತೀರಾ ಅಂತ ನಂಗೆ ನಂಬಿಕೆ ಇದೆ...!
ಏನೇ ಇದ್ರೂ ನಿನ್ನ ಬ್ಲಾಗ್ ನಲ್ಲಿ ದಿನಂಪ್ರತಿ ಕಣ್ಣು ಕೀಲಿಸಿ ನೋಡುವಂಥದ್ದು ಅಂಥಾದ್ದೇನಿದೆ ? ಅoತೀರಾ.....
ನಾನು ಈ ಬ್ಲಾಗ್ ಶುರು ಮಾಡಿರೋ ಘನ ಉದ್ದೇಶ ಈಗಾಗ್ಲೇ ತಿಳಿಸಿಯಾಯ್ತು .....
ನಾನು ಈ ಬ್ಲಾಗ್ ನಲ್ಲಿ ನೀಡಿರೋ ಇತರೆ option ಅನ್ನಿ, gadget ಗಳು ಅನ್ನಿ - ಅವುಗಳು ನಾನು
ನೋಡಿದ ಇತರೆ ಸುಮಾರು 100 ಬ್ಲಾಗ್ ಗಳಲ್ಲಿ ಕಾಣಸಿಗಲಿಲ್ಲ { ಒಟ್ಟಿಗೆ, ಒಂದೇ ಕಡೆ } ಅoದ್ರೆ ನೀವು
ನನ್ನ ನಂಬಬೇಕು.
ಎಂಥ ಪರೋಪಕಾರಿ ಬ್ಲಾಗ್ ಆದ್ರೂ ಅಲ್ಲಿ ನಿಮಗೆ ಇಷ್ಟು option ಒಟ್ಟಿಗೆ ಒ0ದೇ platform ಅಲ್ಲಿ
ಸಿಗೋದು ತುಂಬಾ ಕಷ್ಟ .....
<<<<<<<<<< ಇಲ್ಲಿ ಏನಿಲ್ಲ ಹೇಳಿ >>>>>>>>>>
ನಿಮ್ಮೆಲ್ಲರ ಸರಳ ಪಾಲ್ಗೊಳ್ಳುವಿಕೆಗಾಗಿ VOTE ಮಾಡೋ option ಇದೆ....ಇದಕ್ಕಿನ್ನ ಸರಳ
ಪಾಲ್ಗೊಳ್ಳುವಿಕೆ ಸಾಧ್ಯವಿಲ್ವೇನೋ ಅನ್ನೋ ಥರ ಇದೆ...
SLIDESHOW ನಿಮ್ಮ ಸ್ವಂತ ಅಥವಾ ನಮ್ಮ ಗುಂಪಿನ ಭಾವಚಿತ್ರಗಳನ್ನ ಇಲ್ಲಿ ನೋಡ್ಕೋಬಹುದು..
ಯಾರು ಯಾರು ಸದಸ್ಯ್ರಾಗಿದ್ದೀರಿ ಅಂತಾನೂ ನೋಡ್ಕೋಬಹುದು.....
ಎಷ್ಟು ಜನ ಜೊತೆ ಜೊತೆಗೇನೆ online ಇದ್ದೀರಾ ಅ0ತ ನೋಡಬಹುದು...
ಇದೇನು ವಿಶೇಷ ಅಲ್ದಿದ್ರೂ ....ಯಾರಿರಬಹುದು ಆ ಇನ್ನೊಬ್ಬ?!! ಅನ್ನೋ ಕುತೂಹಲನಾದ್ರೂ
ತರುತ್ತೆ....[ ಆದ್ರೆ ಪಾಪಿಗಳು websense ನೋರು ಇದನ್ನ block ಮಾಡಿದಾರೆ ]
NOTICE BOARD :: ಕೂತಲ್ಲಿಂದನೇ ರೇವಪ್ಪ ಏನಾದ್ರೂ ಹೊಸ ಸುದ್ದಿ ತಂದಿದಾನಾ ತನ್ನ
section ನಿಂದ ಅ0ತ ತ0ತಮ್ಮ section ನಿ0ದೇನೇ ನೋಡ್ಕೋಬಹುದು....ಸರಳ ಅಲ್ವಾ ?
ಇನ್ನು ವಾರದ ಪುಸ್ತಕ : {ಇದು ಯಾವ್ನೋ ಇ0ಗ್ಲಿಶ್ ನವ್ನು ಮಾಡಿದ್ದು ಹೀಗಾಗಿ ಅಲ್ಲಿ ಸಿಗೋದು ಇಂಗ್ಲೀಷ್
ಪುಸ್ತಕಗಳು ಮಾತ್ರ} ....ಆದ್ರೆ ನಮ್ಮದಲ್ಲದ್ದು ನಮಗೇನಕ್ಕೆ ಅಂತೀರಾ....ಹಾಗೆಲ್ಲ ಅನಬಾರ್ದಪ್ಪ!!
ಅದೂ ಒ0ದು ಭಾಷೆ...ಅದಲ್ದೇ ಅಂತರಾಷ್ಟ್ರೀಯ ಮಟ್ಟದಲ್ಲಿ recognise ಆಗಿದೆ ಅಂದ್ರೆ ಖಂಡಿತ ಆ
ಭಾಷೆಯಲ್ಲಿ ಒಂದಾದರು ಒಳ್ಳೆ ಅಂಶ ಇರಲೇಬೇಕು ....what say ?(ಏನಂತೀರಾ?)
ಇನ್ನು dictionary, encyclopedia, english grammar, news map,motivational quotations,stock info, time info, weather update.....
ಇವೆಲ್ಲ ದಿನಕ್ಕೆ ಒಮ್ಮೆಯಲ್ದಿದ್ರೂ ವಾರದಲ್ಲಿ ಒಮ್ಮೆ ತಮ್ಮ ಸ್ಥಾನ ಬಲ ತೋರಿಸಲು ಹಿಂಜರಿಯೋದಿಲ್ಲ.
ಇಂಟರ್ ನೆಟ್ ಕೊಂಡಿಗಳು { e-links } ತಾವು ಆಕ್ರಮಿಸಿರೋ ಸ್ಥಳಕ್ಕೆ ಖಂಡಿತ ನ್ಯಾಯ ಒದಗಿಸ್ತಾವೆ....ಎರಡು ಮಾತು ಬೇಡ
ಇನ್ನು ಆ ಕನ್ನಡ ಬ್ಲಾಗ್ ಗಳಿಗೆ ಬಂದ್ರೆ ....ಅವುಗಳು ನಿಮಗೆ "ಒ0ದು ಚಿಕ್ಕ ತೊರೆಯ ಜಾಡು ಹಿಡಿದು
ಹೊರಟವ್ನಿಗೆ. ದೊಡ್ಡ ಸಮುದ್ರದ ಎದುರಿಗೆ ಕರ್ಕೊಂಡು ತಂದು ನಿಲ್ಲಿಸ್ತವೆ"....
ನಾನು ನನ್ನ ಕನಸಲ್ಲಿಯೂ ಕನ್ನಡ ಬ್ಲಾಗ್ ಗಳು ಇಷ್ಟರ ಮಟ್ಟಿಗೆ ಬೆಳೆದಿವೆ ಅ0ತ
ಅನ್ಕೊಂಡಿರ್ಲಿಲ್ಲ.....my god ....ಅನಾಹುತ ಸಾಧನೆ...I MEAN TERRIFFIC.
<<<<<<<<<<..........>>>>>>>>>>
ಇಷ್ಟೆಲ್ಲ ಇದ್ರೂ ನೀವು ಅದರ ಬಗ್ಗೆ ಮೂಗು ಮುರಿದ್ರೆ ....ಅದು ನಿಮ್ಮ ಕರ್ಮ.....ನೀವು ಎಷ್ಟೇ
'ನಿರಾಕರಣ' ಮಾಡಿ..ಇದರಿಂದ 'ದೂರ ಸರಿದರೂ'....ಇಲ್ಲಿರೋ ಜ್ಞಾನ 'ಜಲಪಾತ'ನ್ನ ನೋಡ್ಡೆ ಹೋದ್ರೆ
ನಿಮಗೆ 'ಗ್ರಹಣ' ಹಿಡಿದಿದೆ..ಅಂತ ನೀವು ತಿಳ್ಕೋಬಹುದು....
ಅದನ್ನ ಬಿಟ್ಟು ಅಜ್ಞಾನನಾ 'ದಾಟಿ'ಕೊಂಡು ಇಲ್ಲಿರೋ ಮಾಹಿತಿಯ 'ನೆಲೆ'ಯ 'ಅನ್ವೇಷಣೆ' ಮಾಡಿ.... ಆಗ
ನಿಮ್ಮ ಬಾಳಲ್ಲಿ ಹೊಸ 'ಪರ್ವ' ಪ್ರಾರ0ಭವಾಗೋದನ್ನ ನೀವೇ 'ಸಾಕ್ಷಿ'ಯಾಗಿ ನಿಂತು ನೋಡಬಹುದು....
ಮುಂದೊಂದು ದಿನ ನಿಮಗನ್ನಿಸದೇ ಇರದು - " ಈ ಬ್ಲಾಗ್ ಅನ್ನೋ 'ತಂತು' ನನ್ನನ್ನ ಈ ಸುಂದರ
ಜಗತ್ತಿನ 'ಅಂಚಿ'ಗೆ ತಂದು ನಿಲ್ಲಿಸಿ ನೋಡಿಕೊ ನನ್ನ 'ಸತ್ಯ ಮತ್ತು ಸೌಂದರ್ಯ'ನ ಅಂತ ಹೇಳ್ತಾ ಇದೆ
ಅ0ತಾ..!!
ಒಟ್ಟಾರೆಯಾಗಿ ನಿಮ್ಮ ಜೀವನದ 'ಕಥೆ'ಯಲ್ಲಿ ಈ ಬ್ಲಾಗ್ ನಿಮ್ಮ 'ಕಥಾವಸ್ತು'ವಿನ ಒಂದಂಶವಾದರೆ ಅದೇ
ನೀವು ಈ ಬ್ಲಾಗ್ ನ ಮೇಲಿಟ್ಟಿರೋ ವಿಶ್ವಾಸದ 'ಪ್ರತೀಕ'ವಾಗುತ್ತೆ.....
ಅಥವಾ
ಆ ನಿಮ್ಮ ಕಥೆ ಬರೀತಾ ಬರೀತಾ ನಿಮ್ಮ 'ಸಾಹಿತ್ಯ' ಕೃಷಿ ಹೊರಬರೋ ಸಮಯದಲ್ಲಿ 'ನಾನೇಕೆ
ಬರೀತೇನೆ?' ಅಂತಾ ನಿಮ್ಮ ಮನಸಲ್ಲಿ ಪ್ರಶ್ನೆ ಬಂದು ನಿಮಗೆ ಸಿಕ್ಕ ಉತ್ತರದಲ್ಲಿ ಬ್ಲಾಗ್ ಅನ್ನೋ ಪದಕ್ಕೆ
ಒಂದು ಶಬ್ದ ...ಅಲ್ಲಲ್ಲ ಎರಡೂವರೆ ಅಕ್ಷರಗಳ ಸ್ಥಾನ ಸಿಕ್ಕರೆ ನನ್ನ ಪ್ರಯತ್ನ ಕೃತಾರ್ಥ.
{ ಇಲ್ಲಾಂದ್ರೆ ಇದ್ದೇ ಇದೆಯಲ್ಲ ಉತ್ತರ : ತಬ್ಬಲಿಯು ನೀನಾದೆ ಮಗನೆ }
ಇಂತಿ ನಿಮ್ಮವ ,
ರೇವಪ್ಪ
3 comments:
hello
ಹಳೇ ರೋದನೇ....ಹಳೇ ಗೋಳು...
ಹಳೇ....ಡೈಲಾಗ್ ತರ ಹೋಯೀ...
ಎಲ್ಲಾರೂ ಬರೀತಾರೆ ಅಲ್ಲಿಗಂಟ....
ಒಸಿ ಕಾಯಿ.....
ಉಪಕಾರವರಿಯದ ಮಾನವ ಜನ್ಮವಿದೇತಕೋ......?
Post a Comment