01 August 2009

ಸ್ಟಂಟು


ಸ್ಟಂಟು


ಮದುವೆ ಅನ್ನೋದೊಂದ್ ನಂಟು
ಇದು ಬರಿ ತಾಳಿ ಕಟ್ಟೋ ಸ್ಟಂಟು

ಹುಡ್ಗ ಬಹಳ ರೀಸೆಂಟು

ಆಗಿತ್ತು ಅವನಿಗೆ ಇಪ್ಪತ್ತೆಂಟು

ಅಂದನು: ''ಹುಡ್ಗಿ ಇರ್ಬೇಕು ಬಹಳ ಡೀಸೆಂಟು,
ಆಗಿರ್ಬೇಕು ಬರಿ ಹದ್ನೆಂಟು."

ಕೊನೆಗಾಯಿತು ಎನ್ಗೇಜ್ಮೆಂಟು
ಶುರುವಾಯಿತು ಅರ್ರೆನ್ಜ್ಮೆಂಟು

ಜೋರಾಗಿ ಮಾಡಿಸಿದರು ಅಡ್ವರ್ಟೈಸ್ಮೆನ್ಟು
ನೆಂಟರು ಬಂದು ಹಾಕಿದರು ಟೆಂಟು

ಕಟ್ಟಬೇಕಿತ್ತು ತಾಳಿಯ ಹೊಡೆಯುವ ಮುನ್ನ ಎಂಟು
ಆದ್ರೆ ಸಮಯಕ್ಸರಿಯಾಗಿ ಹುಡ್ಗ ಆಬ್ಸೆಂಟು

ಹುಡ್ಗ ಒಂತರ ಡಿಫರೆಂಟು
ಬೇಕೆಂದನು ಸ್ಕೂಟರ್ ಅರ್ಜೆಂಟು

ಹೀಗೆ ಮಾಡಿದನು ಮಾವನಿಗೆ ಆಕ್ಸಿಡೆಂಟು
ಆಗ ಮಾವ ಕೊಟ್ಟನು ಅವನಿಗೆ ಕೈತುಂಬಾ ಗಂಟು

ಆಗ ಹುಡ್ಗ :''ಇಷ್ಟೇ ಅಲ್ಲ ,ಇನ್ನೂ ಮುಂದೆ ಉಂಟು "
ಎಂದು ಕೊಟ್ಟನು ಮಾವನಿಗೆ ಶಾಕ್ ಟ್ರೀಟ್ಮೆಂಟು

ಬರುತಿತ್ತು ಅಡಿಗೆಯ ಗಮಗಮ ಸೆಂಟು
ಬಿದ್ದವು ನೂರಾರು ಪ್ರೆಸೆಂಟು

ಮಾವ ಕಟ್ಟಿದ್ದನು ಚೌಲ್ಟ್ರಿಗೆ ರೆಂಟು
ತರಿಸಿದ್ದನು ರಿಸೆಪ್ಷನ್ಗೆ ಕರೆಂಟು

ಹುಡುಗ ಬೋಳಿಸಿದ್ದನು ಮಾವನ ಹಂಡ್ರೆಡ್ ಪರ್ಸೆಂಟು
ಸುಸ್ತಾದ ಮಾವ ತಿನ್ನುತಿದ್ದನು ಶುಂಠಿ ಪೆಪ್ಪರ್ಮೆಂಟು

-ಸಕ್ಕತ್ ಸಚ್ಚಿ


10 comments:

Anonymous said...

ನಿನ್ನ ಕಿಲಾಡಿತನದ ನೈಜತೆ ಈ ಕವಿತೆಯಲ್ಲಿ ವ್ಯಕ್ತವಾಗಿದೆ. entertinment ಮನಸುಗಳಿಗೆ ಸ್ವಲ್ಪ ಖುಷಿ, ಮಜಾ ಎರಡನ್ನೂ ಕೊಡುತ್ತೆ. ಕಂಗ್ಲಿಷ್ ಸೇರಿರೋ ಕವಿತೆ ಚನ್ನಾಗಿದೆ ಸಚ್ಚಿ.

Ferojasha said...

ಸಚ್ಚಿ.......
ಆ ಮಾವನಿಗೆ ಶುಂಠಿ ಪೆಪ್ಪರ್ಮೆಂಟು ತಿನ್ನ್ಸಿದ ಸ್ಟಂಟ್ ಮಾಸ್ಟರ್ ನೀವೇನಾ........!
"ಚನ್ನಾಗಿದೆ ".............

madhu.br said...

ಯಥಾ ಪ್ರಕಾರ ಸಚ್ಚಿಯಾ ಅಂತ್ಯಪ್ರಾಸದ ಕವನದ ಸಾಲುಗಳು ಮನಸ್ಸಿಗೆ ಮುದ ನೀಡಿದರು, ಬೇರೆ ರೀತಿಯ ಬರವಣಿಗೆಗೆ ಗಮನ ಕೊಡುವುದು ಒಳಿತು ...ಭಾಷೆಯ ಸಾಲುಗಳು ಸಭ್ಯತೆಯ ಎಲ್ಲೇ ಮೀರದಿರಲಿ....

Unknown said...

ಸಚ್ಚಿ, ನಿಮ್ಮ ಕವಿತೆ ಹಾಸ್ಯ ಭರಿತವಾಗಿ,ಚೆನ್ನಾಗಿ ಮೂಡಿ ಬಂದಿದೆ....

sakkath sacchi.blogspot.com said...

ಮಚ್ಚಿ ,ಸಭ್ಯತೆ ಎಂದರೆ ಏನು ಎಂದು ಪ್ರಶ್ನಿಸುವಂತಾಗಿದೆ ನನಗೆ. ಅದಿರಲಿ ಬಿಡು ,ನನ್ನ ಪ್ರಕಾರ "ಜೀವನದಲ್ಲಿ ರಾಸಲೀಲೆ ಎಂಬುದು ಹೇಗೋ ಲೇಖನದಲ್ಲಿ ಪ್ರಸಮಾಲೆ ಎಂಬುದು ಹಾಗೆ ". ಪ್ರಾಸವನ್ನು ಆಕ್ಷೇಪಿಸುವುದು ಬೇಡ. ಆದರು ಬೇರೆ ಪ್ರಾಕಾರಗಳಲ್ಲೂ ಬರೆಯಲು ಯತ್ನಿಸುತ್ತೇನೆ .
ಅಂದ ಹಾಗೆ ಈ "stunt" ಸಂಧರ್ಬದಲ್ಲಿ ಹುಟ್ಟಿದ ಮದುವೆ ಮಂತ್ರವನ್ನು ಹೇಳಲು ಮರೆತೆ(ಇದು ವಧುವಿಗೆ ಭೋದಿಸುವ ಮಂತ್ರ ):-
ಮಾಂಗಲ್ಯಂ ತಿಂತು "DOWRY" ನಾ
ಗಂಡುನ್ ಮನೆಯವ್ರ್ ಮೇಲಾಕು "CASE" ಉನಾ
ನಿನ್ ತಂಟೆಗ್ ಬರ್ದಾಗ್ ಮಾಡುದ್ರೆ ನೀನು ಅವರಿಗೆ
ಜೀವನ ಪೂರ್ತಿ ನಿನಗೆ ಮಂಗಳಂ

madhu.br said...

ಕುಮಾರ ಸ್ವಾಮಿ ಜಾತ್ಯತೀತತೆ ಅಂದ್ರೇನು?ಅನ್ನೋ ರೀತಿ ಕೇಳ್ತಾ ಇದ್ದಿರಲ್ರಿ ?

Anonymous said...

ಕವರ್ (ಮಧು) ನಿನೇನ್ ದೇವೇಗೌಡನ ಥರಾ ಹೇಳಿದಿಯಾ ಮತ್ತೆ.....!

amartya-aditi said...

Mr. Sachidanand, its a beautiful infant poem which grabs the hearts of many INFA-YOUTHS. I wish your writings to be expressed in pure kannda pada sampath.


- RAMESHA

madhu.br said...

ಏನೇ ಆದರು ನಮ್ ಸರ್ಕಾರದವರು "ಆಡೋ ಹೈಕಳಿಗೆಲ್ಲ ಕೆಲಸ ಕೊಟ್ಟು ತಪ್ ಮಾಡಿದ್ರೆನೋ?"ಅಂತ ಅನಿಸ್ತ ಇದೆ (ಸೇರ್ಲೋಕ್)ಫಿರೋಜ್ ......

ಸಂತೋಷ್ ಸಿಹಿಮೊಗೆ said...

ಇದೇನ್ ಸಚ್ಚಿ, ಪ್ರಾಸಗಳೇ ತುಂಬಿ ತುಳುಕುತಿದೆ. ಅರ್ಥ/ಭಾವದ ಪ್ರಾಸವಿರಲಿ. ಪ್ರತಿಮೆಗಳನ್ನು ಉಪಯೋಗಿಸಿ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು