ಉಪವಾಹಿನಿಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ರೇವ್ ಮತ್ತೆ ಸಾರ್ಥಕ್ಕೆ ಮರಳಿದ್ದು ಸ್ವಾಗತಾರ್ಹ. ಲೇಖನದ ವಸ್ತು ದಿಟ್ಟತನದಿಂದ ಕೂಡಿದ್ದು ಅದು ಸೂಕ್ಷ್ಮಗಳನ್ನು ಕೆಣಕುವ ಅಪಾಯವಿದ್ದರೂ ಸಹ ಅದನ್ನು ಆರಿಸಿಕೊಂಡು ಯಾರಿಗೂ ನೋವಾಗದಂತೆ ನಿರೂಪಿಸಿದ್ದಕ್ಕೆ ನಾನು ರೇವ್ ನನ್ನು ಅಭಿನಂದಿಸುತ್ತೇನೆ. ರೇವಪ್ಪನ ಸಾಹಸ ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.
"ಜಾತಿ" ಎಂಬ ಕ್ಷುಲ್ಲಕವಾದ ವಿಷಯವನ್ನು ಗಂಭೀರ ಸ್ವರೂಪಕ್ಕೆ ಕೊಂಡೊಯ್ದ ಹಿಂದಿನ ಹಾಗೂ ಕೊಂಡೊಯ್ಯುತ್ತಿರುವ ಇಂದಿನ ಮಾನವ ಕುಲಕೋಟಿಯನ್ನು ಎಲ್ಲ ಮಜಲುಗಳಲ್ಲೂ ಹಾಗೂ ಎಲ್ಲ ಆಯಾಮಗಳಲ್ಲೂ ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡ ರೇವಪ್ಪನ ಜಾತಿ ಬಗೆಗಿನ ತನ್ನ ಬಾಲ್ಯದಿಂದ ಈವರೆಗಿನ ಅನುಭವಗಳನ್ನ, ಅದರಿಂದ ಅವನಲ್ಲಿ ಒಡಮೂಡಿದ ಅನಿಸಿಕೆ ಅಭಿಪ್ರಾಯಗಳನ್ನ ಹಾಗೂ ಇವತ್ತಿನ ತನ್ನ ನಿಲುವನ್ನ ಬಹಳ ನೈಜವಾಗಿ, ಸಹಜವಾಗಿ, ಸೊಗಸಾಗಿ, ಅರ್ಥಪೂರ್ಣವಾಗಿ ಹಾಗೂ ಚಿಂತನೆಗೆ ಚರ್ಚೆಗೆ ಗ್ರಾಸವಾಗುವ ನಿಟ್ಟಿನಲ್ಲಿ ನಿರೂಪಿಸುತ್ತಾ ತನ್ನಲ್ಲಿನ ವೈಚಾರಿಕತೆಯನ್ನ ಹಾಗೂ ತನ್ನತನವನ್ನು, ಅನುಭವ ಹಾಗೂ ವಿವೇಚನೆಗೆ ಒಳಪಡಿಸಿ ನಿರಂತರ ಸುಧಾರಿಸಿಕೊಳ್ಳುತ್ತ ಹೋಗಬೇಕೆಂಬ ಹಂಬಲವನ್ನ ವಾಸ್ತವಿಕ ಸಂಧರ್ಭದ ನಡುವೆ ತೀರಾ ಮಾನವೀಯ ನೆಲೆಯಲ್ಲಿ ಬಿಂಬಿಸುತ್ತಾ ವಿಶ್ವಮಾನವ ಬದುಕಿನೆಡೆಗೆ ಸಾಗಲು ಪ್ರೇರೇಪಿಸಿದ್ದಾನೆ. ರೇವಪ್ಪನನ್ನು ಕಾಡಿದ ಪ್ರಶ್ನೆಗಳು, ಗೊಂದಲಗಳು ಹಾಗೂ ತುಮುಲಗಳು ಬಹುತೇಕ ನಮ್ಮೆಲ್ಲರನ್ನೂ ಒಂದಿಲ್ಲೊಮ್ಮೆ ಇಲ್ಲವೇ ಆಗಾಗ ಕಾಡಿಯೇ ಕಾಡಿರುತ್ತವೆ. ಅವೇನೇ ಇದ್ದರೂ ಅವೆಲ್ಲಕ್ಕೂ ಮೇಲಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ಮಾನವನ ಮಾನಸದಲ್ಲಿ ಮೂಡುವ ಮೂಲಮಂತ್ರವೆಂದರೆ ಶಾಂತಿ ಮತ್ತು ಪ್ರೀತಿ. ನಾವೆಲ್ಲರೂ ಮಾನವರೇ ಎಂಬ ಪ್ರಜ್ಞೆ ಹಾಗೂ ಆ ಒಂದು ಕಾರಣದಿಂದ ನಾವೆಲ್ಲರೂ ಒಂದೇ ಸಮಾನರು ಎಂಬ ಅರಿವೊಂದೇ ಸಾಕು. ನಾವು ಕಾಯಾ ವಾಚಾ ಮನಸಾ ಈ ಜಾತೀಯತೆಯನ್ನು ನಿರ್ಮೂಲನೆ ಗೊಳಿಸಿ ಪ್ರೀತಿಯತೆಯತ್ತ ಸಾಗಲು ಬನ್ನಿ ಈ ಕ್ಷಣದಿಂದಲೇ ಎಲ್ಲರೂ ವಿಶ್ವಮಾನವರಾಗುವತ್ತ ನಿರಂತರ ಸಾಗೋಣ ರೇವಪ್ಪನ ಜೊತೆಯಾಗಿ...
- ಸಚ್ಚಿ
No comments:
Post a Comment